ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು M) ನಮ್ಮ ವಸ್ತುಗಳ ವಿಷಯಕ್ಕೆ ರೈತರಲ್ಲಿ ಜನಸಾಮಾನ್ಯರಲ್ಲಿ ಪ್ರತಿಕೂಲ ಅಭಿ ಪಾಯ ಹೇಗೆ ಆದೀತು ಎಂಬುದರ ಕಡೆಗೆಯೇ ಅವರ ಲಕ್ಷವಿರುತ್ತದೆ, ಎಂದು ನಾನು ಸ್ಪಷ್ಟ ಹೇಳಿದೆ. - ಆಗ ಲೋಕಮಾನ್ಯರು ಗಂಭೀರವಾಗಿ 'ಪಾರತಂತ್ರದಲ್ಲಿ ಹೀಗೆ ಆಗ ದಿದ್ದರೆ ಆಶ್ಚರ್ಯ' ಎಂದರು, ಕೊನೆಗೆ ಹೊರಹೊರಡುವಾಗ ಅವರು ತುಂಬಿದ ಅಂತಃಕರುಣದಿಂದ “ಕಿರ್ಲೋಸ್ಕರರೇ ! ನೀವು ಬಹು ದೊಡ್ಡ ರಾಷ್ಟ ಕಾರ್ಯ ಮಾಡುತ್ತಿರುವಿರಿ. ನಾಳೆ ರಾಷ್ಟ್ರವು ಸ್ವತಂತ್ರವಾದರೂ, ವ್ಯಾಪಾರ ಉದ್ಯೋಗ ಗಳ ಬೆಳವಣಿಗೆಯ ಹೊರತು ತರುಣೋಪಾಯವೇ ಇಲ್ಲ. ಆದುದರಿಂದ ಇಂತಹ ಯಾವ ಸಂಕಟಗಳಿಗೂ ಸೊಪ್ಪು ಹಾಕದೆ ಭವಿಷ್ಯದಕಡೆಗೆ ದೃಷ್ಟಿ ಯುಟ್ಟು ನಿಮ್ಮ ಕಾರ್ಯವನ್ನು ಭರದಿಂದ ಸಾಗಿಸಿರಿ, ಇಂದಿಲ್ಲ ನಾಳೆ ನಿನಗೆ ಯಶಸ್ಸು ದೊರೆಯುವದರಲ್ಲಿ ಸಂದೇಹವಿಲ್ಲ ?” ಎಂದು ಅಂದರು, ಈ ಮಾತು ಗಳನ್ನು ಕೇಳುವಾಗ ನನ್ನ ಭಾಗ್ಯದೇವತೆಯೇ ಮಾತನಾಡುತ್ತಿರುವಂತೆ ನನಗೆ ಭಾಸವಾಯಿತು. ಅವರ ಈ ಆಶೀರ್ವಾದವು ನನ್ನ ಅಂತಃಕರುಣದ ಮೇಲೆ ಸ್ಪಿರಮುದ್ರೆಯನ್ನೊತ್ತಿತು. ಕಾರ್ಖಾನೆಯು ಬೇರೂರಿ ಬೆಳೆಯುತ್ತಲಿದೆ ಎನ್ನುವಷ್ಟರಲ್ಲಿ ಅಕಸ್ಮಾ. ತ್ಯಾಗಿ ಲಕ್ಷ್ಮಣರಾಯರು ದೊಡ್ಡ ಬಿರುಗಾಳಿಗೆ ಸಿಕ್ಕರು. ಕನಸುಮನಸು ಗಳಲ್ಲಿಲ್ಲದ ಗಂಡಾಂತರವು ಬಂದೊದಗಿತು, ಕಾರ್ಖಾನೆಯು ಅಳಿಯುವದೋ, ಉಳಿಯುವದೋ ಎಂಬ ಪ್ರಶ್ನೆ ಉದ್ಭವಿಸಿತು. ಬೆಳಗಾಂವಿಯ ಮುನಸಿಪಾಲಿಟಿಯು ಊರನ್ನು ವಿಸ್ತರಿಸುವ ಉದ್ದೇಶ ದಿಂದ ಠಳಕವಾಡಿಯ ಸ್ಥಳವನ್ನು ಗೊತ್ತು ಮಾಡಿ ಕಿರ್ಲೋಸ್ಕರ ಬಂಧುಗಳು ತಮ್ಮ ಕಾರ್ಖಾನೆಯನ್ನು ಆರು ತಿಂಗಳೊಳಗಾಗಿ ಬೇರೆ ಕಡೆಗೆ ಸಾಗಿಸಬೇ ಕೆಂದು ಗೊತ್ತುವಳಿಯನ್ನು ಸ್ವೀಕರಿಸಿತು. ಆ ಸಮಯಕ್ಕೆ ಲಕ್ಷ್ಮಣರಾಯರ ಗೆಳೆಯರಾದ ಮಿಸ್ಟರ ಬ್ರೆಂಡನ್ನರು ಬೆಳಗಾಂವಿಯ ಕಲೆಕ್ಟರರಿದ್ದರು. ರಾಯರು ಅವರ ಮೊರೆಹೊಕ್ಕರು. “ನಿಮ್ಮ ಜನರೇ ಗೊತ್ತುವಳಿಯನ್ನು ಮಾಡಿರುವಾಗ ಅದನ್ನು ಬದಲಿಸಲು ಶಕ್ಯವಿಲ್ಲ, ಆದರೆ ಸ್ಥಳಾಂತರಿಸುವಾಗ ನಿಮಗೆ ಆಗುವ ಹಾನಿಯನ್ನು ಮಾತ್ರ ನೀವು ಬೇಡಿದರೆ ಅದನ್ನು ಖಂಡಿತ ಕೊಡಿಸುವೆ” ಎಂದು ಕಲೆಕ್ಟರರು ಉತ್ತರಿಸಿದರು. "ತಳಕವಾಡಿಯ ಸಮೀಪದಲ್ಲಿಯೇ ಕಾರ್ಖಾನೆಗೆ - ಸಾಕಾಗುವಷ್ಟು
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.