೭೦ ಮಿಂಚಿನಬಳ್ಳಿ ದ್ವಿತು. ೧೯೧೪ ರಲ್ಲಿ ಕೃಷ್ಣಾ ನದಿಗೆ ಮಹಾಪೂರ ಬಂದಿತು. ನದಿಯು ಕಿರ್ಲೋಸ್ಕರ ವಾಡಿಯಿಂದ ಪಶ್ಚಿಮಕ್ಕೆ ಮೂರು ಮೈಲು ದೂರ ಹರಿಯುತ್ತ ತಿರುಗಿ ದಕ್ಷಿಣಕ್ಕೆ ಹರಿಯುತ್ತದೆ. ನದಿಯ ಪ್ರವಾಹವು ನಾಡಿಗೆ ಒಂದು ಫರ್ಲಾಂಗ ಮಾತ್ರ ಉಳಿದಿತ್ತು. ನಾಡಿಯ ಹತ್ತಿರವಿರುವ 'ಬುರ್ಲಿ' ಎಂಬ ಊರು ನೀರಲ್ಲಿ ಮುಳುಗುವ ಪ್ರಸಂಗ ಬಂದಿತು. ಊರ ಜನ ಜಲಸಮಾಧಿ ಹೊಂದುವಂತೆ ಕಂಡಿತು. ಆಗ ಲಕ್ಷಣರಾಯರು ಊರನ್ನು ಉಳಿಸಲು ಮುಂದಾದರು. ಭೋರ್ಗರೆಯುವ ಪ್ರವಾಹದಲ್ಲಿ ನಾವುಗಳನ್ನು ಹಾಕಿ, ಬುರ್ಲಿಯಲ್ಲಿಯ ಜನರನ್ನು ನಾಡಿಗೆ ಕರೆತಂದು, ಅವರಿಗೆ ಶಕ್ಯವಿದ್ದ ಊಟ, ವಸತಿಗಳನ್ನು ಒದ ಗಿಸಿಕೊಟ್ಟರು. ಬುರ್ಲಿಯ ಜನವೆಲ್ಲ ಕೃತಜ್ಞತೆಯಿಂದ ಅವರನ್ನು ಹಾಡಿ ಹರಿಸಿದರು. ಯುಗಾದಿಯು ಬಂದಿತು, ಸರಕಾರದಿಂದ ಬಿರುದು ದೊರೆಯುವ ಜನರ ಯಾದಿಯು ಪ್ರಸಿದ್ಧವಾಯಿತು, ಅದರಲ್ಲಿ ಲಕ್ಷ್ಮಣರಾಯರ ಹೆಸರಿತ್ತು. ಇಂತಹ ಪದವಿ ಪಡೆಯುವವರು ಸರಕಾರದ ಕ್ರಪೆಗೆ ಪಾತ್ರರಾದವರು, ಸಾಹೇಬರ ಎದುರಿಗೆ ಎಂದೂ ತಪ್ಪಿ ಕೂಡ ಹಾಯದ ರಾಯರಿಗೆ 'ಕೈ ಸರ ಈ ಹಿಂದ? ಪದವಿಯು ದೊರೆತುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ಅಕ್ಷಣ ರಾಯರಿಗೂ ಇದರ ಗೂಢವು ತಿಳಿಯಲಿಲ್ಲ. 'ನನಗೆ ಪದಕವು ಏಕೆ ಸಿಕ್ಕಿದೆ ?? ಎಂದು ಕಲೆಕ್ಟರರಿಗೆ ಬರೆದರು. ಕಲೇಕ್ಟರರಿಂದ “ಈ ಗೌರವವು ತಾವು ಮಾಡಿದ ಸಾಮಾಜಿಕ ಸೇವೆ ಗಾಗಿ, ಮತ್ತು ತಮ್ಮ ಉದ್ಯೋಗನಿಷ್ಠೆಗಾಗಿ ಮಾಡಲ್ಪಟ್ಟಿದೆ” ಎಂದು ಉತ್ತರ ಬಂದಿತು.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.