೧೦ ಯುದ್ಧದ ಕಹಿ-ಸಿಹಿಗಳು ೧೯೧೪ ರ ಜುಲೈ ತಿಂಗಳಲ್ಲಿ ಯುರೋಪದೊಳಗೆ ಆರ್ಚಡೂಕ ಫರ್ಡಿನಾಂಡನ ಕೊಲೆಯ ಸುದ್ದಿಯು ಬಂದಿತು, ಆಗ ಯುರೋಪದ ಸುದ್ದಿಯ ಬಗ್ಗೆ ಭಾರತೀಯರಲ್ಲಿ ಅಷ್ಟು ಆಸ್ಥೆ ಇರಲಿಲ್ಲ. ಆಗ ಅಮೇರಿಕಾ ಹಾಗೂ ಯುರೋಪಗಳು ಎಷ್ಟೊಂದು ದೂರ ! ಏಳು ಸಮುದ್ರಗಳಾಚೆ, ಪಾರ್ಲಿ ಮೆಂಟನಲ್ಲಿ ಭಾರತದ ಬಗ್ಗೆ ಏನು ಚರ್ಚೆ ನಡೆದಿದೆ ? ಎಂಬುದು ತಿಳಿದರೆ ಸಾಕೆಂಬ ಭಾವನೆ ಜನರಲ್ಲಿ ಇದ್ದಿತು. ಆದರೆ ಈ ಕೊಲೆಯ ಜಾಜ್ವಲ್ಯ ಕಿಡಿಯಾಗಿದ್ದಿತು, ಯುರೋಪವನ್ನೇ ಸುಡಲು ಪ್ರಾರಂಭಿಸಿತು. ಬಾಂಬು, ಬಾರ್ಸೆಡೊ, ವಿಷವಾಯು ಮೊದಲಾದ ಭಯಂಕರ ಅಸ್ತ್ರಗಳ ಹಾವ; ನಡೆಯಿತು. ಈ ಸಂಕಟವು ಇಡಿ ಯುರೋಪವನ್ನೇ ಹಣ್ಣಣ್ಣು ಮಾಡಿತು. ಇಷ್ಟೆಲ್ಲ ನಡೆದಿದ್ದರೂ ಈ ಯುದ್ಧದ ಬೇಗೆಯು ಭಾರತಕ್ಕೂ ಹಬ್ಬಬಹು ಎಂಬುದನ್ನು ತೀರ ಸ್ವಲ್ಪು ಜನ ಭಾರತೀಯರು ಅರಿತಿದ್ದರು. ಆದರೆ ಈ ಭ್ರಮವು ಬೇಗನೆ ನಿರಸನವಾಯಿತು, ಎಮ್ ಡನ್ ಎಂಬ ಜರನ್ ಕೂಝರವು ಬಂಗಾಲ ಉಸಸಾಗರದಲ್ಲಿ ಹಾಹಾಕಾರವನ್ನೆಬ್ಬಿಸಿ ಮದ್ರಾಸದ ಮೇಲೆ ತೋಪುಗಳ ಮಳೆಗರೆದಾಗ, ಜರ್ಮನಿಯ ಬಗ್ಗೆ ಜನರಲ್ಲಿ ಭೀತಿಯುಂಟಾಯಿತು. ಯುದ್ದದ ಝಳ ತಗಲಲು ಬಹಳ ಹೊತ್ತು ಹಿಡಿಯಲಿಲ್ಲ. ಧಾನ್ಯ, ಚಿಮಣೀ ಎಣ್ಣೆ ಮೊದಲಾದ ವಸ್ತುಗಳ ಅಭಾವವೂ ಬೆಲೆ ಏರಿಕೆಯೂ ಹೆಚ್ಚುತ್ತ ನಡೆ ದವು. ನೋಡನೋಡುತ್ತ ಆರ್ಥಿಕ ಹಾಗೂ ಪ್ರಾಪಂಚಿಕ ಜೀವನವೇ ಇದ ರಿಂದ ಕಲಕುಮಲಕು ಆಯಿತು. ಕಿರ್ಲೋಸ್ಕರ ಕಾರಖಾನೆಗೆ ಬೇಕಾಗುವ ಕಬ್ಬಿಣ, ಬೀಡು ಹಾಗೂ ಕಲ್ಲಿದ್ದಲಿಗಳ ಕೊರತೆಯು ಬೀಳಹತ್ತಿತು. ಕಬ್ಬಿಣ ರಂಟೆಗಳಿಗೆ ಕಬ್ಬಿಣವೇ ಸಿಗದಿದ್ದರೆ ಕಾರಖಾನೆಯನ್ನು ನಡೆಯಿಸುವ ಒಗೆ ಹೇಗೆ ? ರಂಟೆಗಳಿಗೆ ಬಣ್ಣ ಕೊಡಲು ಬಣ್ಣವನ್ನು ಎಲ್ಲಿಂದ ತರಬೇಕೆಂಬ ಪ್ರಶ್ನೆಯು ಉಂಟಾಯಿತು ? ಎಲ್ಲಿ ನೋಡಿದಲ್ಲಿ ಕೊರತೆಯೇ ಕೊರತೆ.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೯೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.