ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ - ಬಯಲಾಟ / ೮೭

ಇದರಲ್ಲಿ 'ಎಕ್ಕಲಗಾಣ' ಎಂಬುದು 'ಏಕಲಗಾಯನ' ಶಬ್ದದ ತದ್ಭವವೇ ಹೊರತು ಬೇರೊಂದಲ್ಲ ಎಂಬುದು ಸ್ಪಷ್ಟವಾಗಿಯೇ ಇದೆ. ಇದಲ್ಲದೆ, 'ಎಕ್ಕಲ' ಎಂಬ ಶಬ್ದವು ಒಬ್ಬನೇ ಅಥವಾ 'ಏಕೈಕ' ಎಂಬ ಅರ್ಥದಲ್ಲಿ ಪ್ರಯೋಗಿಸಲ್ಪಟ್ಟಿರುವುದನ್ನು ಅನ್ಯತ್ರ ಸಂದರ್ಭಗಳಲ್ಲಿಯೂ ಕಾಣಬಹುದು.

(ಸೊರಬದ ಶಾಸನ ೧೩೮ (ಕ್ರಿ.ಶ. ೧೦೧೮-೧೦೪೨), ೧೪೦ (ಕ್ರಿ.ಶ. ೧೧೯೭)- ಇವುಗಳಲ್ಲಿ 'ಎಕ್ಕಲದೇವ'ನೆಂಬ ರಾಜನ ಹೆಸರಿರುವುದನ್ನು ಪ್ರಸ್ತಾಪಿಸಿ, ಆ ಹೆಸರಿನ ಅರ್ಥ 'ಏಕಾಧಿಪತಿ ಅಥವಾ ಏಕೈಕ ಸ್ವಾಮಿ ಎಂದು ಲೇಖಕರು ನಿರ್ಣಯಿಸಿದ್ದಾರೆ. -ಸಂ)

ಆದುದರಿಂದ 'ಎಕ್ಕಲಗಾಣ'ನೆಂದರೆ ಸಂಗೀತ ಶಾಸ್ತ್ರದಲ್ಲಿ ಹೇಳಿದ 'ಏಕಲ ಗಾಯನ'ವೇ, ಎಂದರೆ ವಾದ್ಯಾದಿಗಳ ಮೇಳವಿಲ್ಲದೆ ಹಾಡುವ ಗಾಯಕನೆಂಬುದೂ, ಯಕ್ಷಗಾನವೆಂಬ ಅರ್ಥವು ಆ ಶಬ್ದಕ್ಕೆ ಸರ್ವಥಾ ಸಾಧುವಲ್ಲವೆಂಬುದೂ ವಿದ್ವಾಂಸರಿಗೆ ವಿದಿತವಾಗದಿರದು.

ಇನ್ನು ಅಗ್ಗಳನ ಆ ಪದ್ಯವು, ಎಕ್ಕಲಗಾಣನ ಹಾಡುವಿಕೆಯ ಅಶಾಸ್ತ್ರೀಯತೆಯನ್ನು ಇಂಪನ್ನೂ ಒಟ್ಟಾಗಿಯೇ ಹೇಳುತ್ತಿದೆ ಎಂಬ ತಿಮ್ಮಪ್ಪಯ್ಯನವರ ಅಭಿಪ್ರಾಯಕ್ಕೂ, ಆ ಪದ್ಯವು ದೇಸಿಯ ಕುರಿತು ಸಾಂಪ್ರದಾಯಿಕವಾಗಿ ಬಂದ ತಾತ್ಸಾರವನ್ನು ಸೂಚಿಸುತ್ತದೆ ಎಂಬ ಕಾರಂತರ ಅಭಿಪ್ರಾಯಕ್ಕೂ ಅದರಲ್ಲಿ ಆಧಾರವಿದೆಯೇ ಎಂಬುದನ್ನು ಇನ್ನಷ್ಟು ವಿಮರ್ಶಿಸುವುದು ಯುಕ್ತ. ಆ ಪದ್ಯದ ಸರಿಯಾದ ಅಭಿಪ್ರಾಯವಾಗಬೇಕಾದರೆ ಅದರಲ್ಲಿರುವ ಸಂಗೀತ ಶಾಸ್ತ್ರದ ಪಾರಿಭಾಷಿಕ ಶಬ್ದಗಳ ಅರ್ಥಗಳನ್ನು ಮೊದಲಾಗಿ ತಿಳಿದುಕೊಳ್ಳಬೇಕು.

(ಲೇಖನದ ಈ ಭಾಗದಲ್ಲಿ, ಠಾಯ = ಸಪ್ತಸ್ವರಗಳ ಒಂದು ಸ್ಥಾಯಿ ಎಂಬ ತಿಮ್ಮಪ್ಪಯ್ಯನವರ ಅರ್ಥ ಸರಿಯಲ್ಲವೆಂದು ಹೇಳಿ, “ರಾಗಾಲಾಪನೆಯ ಒಂದು ಅರ್ಥವಿರುವ 'ಸ್ಥಾಯಃ' ಎಂಬ ಪಾರಿಭಾಷಿಕ ಪದದ ಅಪಭ್ರಂಶ ರೂಪ" ಎಂದು 'ಸಂಗೀತ ರತ್ನಾಕರ' (ಪ್ರಕೀರ್ಣಕಾಧ್ಯಾಯ, ಶ್ಲೋ. ೫), 'ಸಂಗೀತ ಸಾರಾಮೃತ', 'ಚತುರ್ದ೦ಡೀ ಪ್ರಕಾಶಿಕಾ' ಮುಂತಾದ ಸಂಗೀತ ಶಾಸ್ತ್ರಗ್ರಂಥಗಳ ಆಧಾರವನ್ನು ಹೇಳಿದ್ದಾರೆ. 'ಆಣತಿ' ಎಂಬ ಪದಕ್ಕೆ ತಿಮ್ಮಪ್ಪಯ್ಯನವರು 'ಆಲಾಪ' ಎಂದು ಅರ್ಥವಿಸಿರುವುದನ್ನು ಒಪ್ಪಿ, ಈ ಪದವು 'ಆಲಪ್ರಿ'ಯ ತದ್ಭವವೆಂದಿದ್ದಾರೆ. ಇದರಿಂದಾಗಿ, ಪದ್ಯದ "ತಾಳಮನಿತ್ತು ಸಮ್ಮನಿಸದು... ಎನಿಪ್ಪ ಠಾಯೆಯಿಂದಾಣತಿ ಮಾಡಿ" ಎಂಬ ಮಾತುಗಳಿಗೆ, "ತಾಳಬದ್ಧವಲ್ಲದ ಸಾವಯವವಾದ ರಾಗಾಲಾಪಮಾಡಿ" ಎಂದು ತಾತ್ಪರ್ಯ ಹೇಳಿದ್ದಾರೆ. "ಒತ್ತುವ ಪಂಚಮನುರಕ್ಕಣಂ ಮೇಳತೆಯಿಲ್ಲ” ಎಂಬ ಅಗ್ಗಳನ ಪದ್ಯದ ವಾಕ್ಯದಲ್ಲಿನ 'ಪಂಚಮನುಣ್ಚರ'ಕ್ಕೆ ತಿಮ್ಮಪ್ಪಯ್ಯನವರು “ಪಂಚಮಶ್ರುತಿಯ ನುಣುಪಾದ ಸ್ವರಕ್ಕೆ ಸ್ವಲ್ಪವೂ ಕೂಟವಿಲ್ಲ" ಎಂದು ಅರ್ಥ ಹೇಳಿರುವುದನ್ನೂ, ಕಾರಂತರು "ಪಂಚಮ ಶ್ರುತಿಗೆ ಸರಿಬಾರದ" ಎಂದು ಅರ್ಥ ಮಾಡಿರುವುದನ್ನೂ ಲೇಖಕರು ಒಪ್ಪಿಲ್ಲ. ಸಂಗೀತ ಶಾಸ್ತ್ರದ ಪ್ರಕಾರ 'ಸ್ವರ'ವೇ ಬೇರೆ, 'ಶ್ರುತಿ'ಯೇ ಬೇರೆ ಎಂದು ಸಂಗೀತ ಶಾಸ್ತ್ರ ಗ್ರಂಥಗಳ ಆಧಾರದಿಂದ ಲೇಖಕರು ತಿಳಿಸಿ, ಸಂಗೀತದಲ್ಲಿ ಗಾಯಕನು ಇಟ್ಟುಕೊಳ್ಳುವ ಆಧಾರಶ್ರುತಿ ಷಡ್ಜವೇ ಹೊರತು ಪಂಚಮವಲ್ಲವಾದ್ದರಿಂದ ಪಂಚಮ ಸ್ವರಕ್ಕೆ ಪಂಚಮಶ್ರುತಿ ಎಂದು ಅರ್ಥಮಾಡುವುದು "ಶಾಸ್ತ್ರಕ್ಕೂ, ವಸ್ತುಸ್ಥಿತಿಗೂ ವಿರುದ್ಧ ಎಂದಿದ್ದಾರೆ. ಆದರೆ "ಒತ್ತುವ ಪಂಚಮನುರಕ್ಕಣಂ ಮೇಳತೆಯಿಲ್ಲ" ಎಂಬ ವಾಕ್ಯಕ್ಕೆ