ಈ ಪುಟವನ್ನು ಪ್ರಕಟಿಸಲಾಗಿದೆ

೧೨೬ / ಕುಕ್ಕಿಲ ಸಂಪುಟ

ಶಾಸ್ತ್ರಬಾಹ್ಯಂಭವೇದ್ಯಸ್ತು ತದ್ಭಾಹ್ಯಮಿತಿ ಸಂಜ್ಞಿತಂ |
ಅನಾಚಾರ್ಯೋದಿತಾ ಏಚ ಏಚ ಶಾಸ್ತ್ರಬಹಿಃಸೃತಾಃ ||
ಬಾಹ್ಯಂ ತೇ ತು ಪ್ರಯೋಕ್ಷ್ಯಂತೇ ಕ್ರಿಯಾಕಲ್ಪೈ: ಪ್ರಯೋಜಿತಾಃ |
ಅಥಬಾಹ್ಯ ಪ್ರಯೋಗೇಷು ಪ್ರೇಕ್ಷಾಗೃಹವಿವರ್ಜಿತೇ |
ವಿಧಿಕ್ಷ್ವಪಿ ಭವೇದ್ರಂಗಃ ಕದಾಚಿತ್‌ ಭರ್ತುರಾಜ್ಞಯಾ ||

ತಾತ್ಪರ್ಯವಿಷ್ಟೆ- “ನಾಟ್ಯಾಚಾರ್ಯನ ನಿರ್ದೇಶನವಿಲ್ಲದಿರುವ ಶಾಸ್ರೋಕ್ತ ಲಕ್ಷಣ ಗಳಿಂದ ಹೊರಗೆ ಕಾಲಿಟ್ಟಿರುವ ನಾಟಕಪ್ರಯೋಗವು ಬಾಹ್ಯಪ್ರಯೋಗ (ಬಯಲಾಟ) ಎಂದು ಕರೆಯಲ್ಪಡುತ್ತದೆ. ಮತ್ತು ಅಂತಹ ನಾಟಕಗಳನ್ನು ಆಡಿಸುವವನ ಇಚ್ಛೆಯಂತೆ ಎಲ್ಲಿ ಬೇಕೆಂದರಲ್ಲಿ ನಾಟ್ಯಶಾಲೆಯಲ್ಲದ ಬರೇ ರಂಗಸ್ಥಳದಲ್ಲಿ ಆಡುವ ಸಂಪ್ರದಾಯ ವಿರುತ್ತದೆ. ಹಾಗೂ ಆ ನಾಟಕಕಾವ್ಯಗಳೆಂಬವು, ಶಾಸ್ರೋಕ್ತ ದಶರೂಪಕಗಳಿಗಿಂತ ಕೆಳಮಟ್ಟದ ರಚನೆಗಳಾಗಿರುತ್ತವೆ' ಎಂದಾಗಿದೆ. ಇಂತಹ ರಚನೆಗಳು ಸಂಸ್ಕೃತದಲ್ಲಿ 'ಉಪರೂಪಕ'ಗಳೆಂದು ಕರೆಯಲ್ಪಟ್ಟು ರಾಮಕ್ರೀಡಾ, ಹಲ್ಲೀಸ, ಶ್ರೀಗದಿತಾ ಇತ್ಯಾದಿ ಅನೇಕ ವಿಧದಲ್ಲಿ ಇದ್ದವು. ಇವುಗಳಿಗೆ ರಾಗಕಾವ್ಯಗಳೆಂದೂ, ಗೇಯಕಾವ್ಯಗಳೆಂದೂ ಲಕ್ಷಣಗ್ರಂಥಗಳಲ್ಲಿ ಹೆಸರಿರುವುದರಿಂದ ಇವು ಯಕ್ಷಗಾನದಂತಹ ಗೇಯ ಪ್ರಬಂಧಗಳೇ ಆಗಿದ್ದುವೆಂಬುದರಲ್ಲಿ ಸಂದೇಹವಿಲ್ಲ. ಎಂದರೆ, ಯಕ್ಷಗಾನ ಹಾಗೂ ಕಥಕಳಿ ಎಂಬುವು ಈ ಪರಂಪರೆಯಲ್ಲಿ ನಡೆದುಬಂದ ಒಂದೇ ಮೂಲದ ಸಂಪ್ರದಾಯಗಳು. ಇದು ಸಮಗ್ರ ದಕ್ಷಿಣ ಭಾರತದ ಶಾಸ್ತ್ರೀಯ ಕಲೆ ಹೊರತು ಯಾವುದೇ ಒಂದು ಪ್ರಾಂತ್ಯದಲ್ಲಿ ಹುಟ್ಟಿ ಇನ್ನೊಂದು ಪ್ರಾಂತ್ಯಕ್ಕೆ ಕ್ರಮೇಣ ವಿಸ್ತರಿಸಿದ ದೇಶೀಯ ಜಾನಪದ ಸಂಪ್ರದಾಯವಲ್ಲ

ವೆಂದು ತಿಳಿಯಬೇಕು.


(೧-೧-೧೯೭೯ ಆಕಾಶವಾಣಿ ಭಾಷಣ)