ಈ ಪುಟವನ್ನು ಪ್ರಕಟಿಸಲಾಗಿದೆ
೧೩೪ / ಕುಕ್ಕಿಲ ಸಂಪುಟ

ಉಜ್ಜುವುದು, ವಲ್ಲಿ ಬಿಡುವುದು ಮುಂತಾದ ವಿಧಾನಗಳು ಆಂಧ್ರದ ಮಾದರಿಯವೇ. ಭುಜಕೀರ್ತಿ, ಎದೆಕಟ್ಟು (ಕೊರಳಾರ) ಮಾಲೆ ಮುಂತಾದ ಆಭರಣ ವಿಶೇಷಗಳು ಅಲ್ಲಿಯಂತೆಯೇ ಇರುತ್ತವೆ. ಅಲ್ಲಿಯ ವೇಷಗಳ ಕುಣಿತವೂ ಇದೇ ಕ್ರಮದಲ್ಲಿ ಲಾಸ್ಯಪ್ರಾಯವಾಗಿಯೇ ಇರುವುದು ಹೊರತು ತೆಂಕಮಟ್ಟಿನ ಬಯಲಾಟದಲ್ಲಿ ಕಾಣುವ ಹಾರಾಟ, ಲಾಗ, ಬೀಸಾಟ, ಸುತ್ತು ಇತ್ಯಾದಿ ತಾಂಡವ ವಿಧಾನಗಳಲ್ಲಿರುವುದಿಲ್ಲ. ಆಂಧ್ರದ ಭಾಗವತರು ತಾಳಕ್ಕಾಗಿ ಜಾಗಟೆ ಹಿಡಿಯುವುದಿಲ್ಲ; ಬಡಗಮಟ್ಟಿನವರು ಹೇಗೋ ಹಾಗೆ ಚಕ್ರತಾಳವನ್ನೇ ಉಪಯೋಗಿಸುವುದಾಗಿದೆ. ಹಿಮ್ಮೇಳದಲ್ಲಿ ಚೆಂಡೆ ಯಿರುವುದಿಲ್ಲ. ಬಡಗಮಟ್ಟಿನ ಆಟದಲ್ಲಿಯೂ ಮೊದಲಿಗೆ ಚೆಂಡೆಯಿದ್ದದ್ದಲ್ಲ, ಮದ್ದಳೆ ಮಾತ್ರ. ಇತ್ತಿತ್ತಲಾಗಿ ತೆಂಕಮಟ್ಟಿನ ಪ್ರಭಾವದಿಂದ ಅವರೂ “ಕರಡಿ, ವಾದ್ಯವನ್ನು ಚೆಂಡೆಯಂತೆ ಉಪಯೋಗಿಸುತ್ತಾರೆ. ಆಂಧ್ರದಲ್ಲಿ ಬಣ್ಣದ ವೇಷಗಳಿಗೆ ಚುಟ್ಟಿಯಿಡುವ ಸಂಪ್ರದಾಯವಿಲ್ಲ. ಬಡಗುಮಟ್ಟಿನಲ್ಲಿಯೂ ಮೊದಲಿಗೆ ಈ ಚುಟ್ಟಿ ಇದ್ದದ್ದಲ್ಲ. ಕ್ರಮೇಣ ತೆಂಕಮಟ್ಟಿನ ಅನುಕರಣೆಯಿಂದ ಹೀಲಿ ಕಡ್ಡಿಗಳನ್ನು ಚುಟ್ಟಿಯಂತೆ ಇಡುವ ಕ್ರಮ ಮಾಡಿಕೊಂಡಿದ್ದಾರೆ. ಕೆಲವೊಂದು ಭಯಂಕರ ವೇಷಗಳಿಗೆ ಆಂಧ್ರದಲ್ಲಿ ಮುಖವಾಡ ಉಪಯೋಗಿಸುತ್ತಾರ ಅದು ಬಡಗುಮಟ್ಟಿನಲ್ಲಿಯೂ ಇದ್ದದ್ದು, ಇರುವಂಥಾದ್ದು. ಹೀಗೆಲ್ಲ ಬಡಗುಮಟ್ಟಿನಲ್ಲಿ ಆಂಧ್ರ ಬಯಲಾಟದ ಹೋಲಿಕೆ ಬಹಳ ಮಟ್ಟಿಗೆ ಕಂಡುಬರುವುದರಿಂದ ಬಡಗುಮಟ್ಟು ಎಂಬುದೂ ಆಂಧ್ರಸಂಪ್ರದಾಯವೆಂಬ ಅರ್ಥದಲ್ಲಿ ಬಂದುದೆಂದು ನ್ಯಾಯವಾಗಿಯೇ ಊಹಿಸಬಹುದಾಗಿದೆ.
ಒಟ್ಟಿನ ಮೇಲೆ ಹೇಳುವುದಾದರೆ, ತೆಂಕಮಟ್ಟು, ಮೂಡಲಪಾಯ ಈ ಕ್ಷೇತ್ರಗಳಲ್ಲಿ ಹುಟ್ಟಿದ ಯಕ್ಷಗಾನ ಕೃತಿಗಳಲ್ಲಿ ಆಂಧ್ರದ ಆನುವಂಶಿಕವಿರುವುದನ್ನು ಗಮನಿಸುವಾಗ ಒಂದೊಮ್ಮೆ ಸರ್ವತ್ರ ಕರ್ಣಾಟಕದಲ್ಲಿ ಆಂಧ್ರ ಬಯಲಾಟ ಸಂಪ್ರದಾಯವೇ ನೆಲೆಸಿದ್ದು ಕ್ರಮೇಣ ಕೇರಳದ ಕಥಕಳಿ ಮತ್ತು ತಮಿಳುನಾಡಿನ ತೆರುಕೂತ್ತುಗಳ ಸಂಪರ್ಕದಿಂದ ತೆಂಕಮಟ್ಟು, ಮೂಡಲಪಾಯ ಎಂಬ ಪ್ರಾದೇಶಿಕ ಭೇದಗಳು ಉಂಟಾದುವೆಂದೂ ನ್ಯಾಯವಾಗಿ ಊಹಿಸಬಹುದಾಗಿದೆ.
ಅದು ಇನ್ನೀಗ ಆಂಧ್ರದಲ್ಲಿ ಯಕ್ಷಗಾನದ ವ್ಯಾಪ್ತಿಯ ವಿಚಾರ. ಸ್ಥೂಲವಾಗಿ ಹೇಳುವು ದಿದ್ದರೆ, ಅದೀಗ ಇಂದು ನಮ್ಮಲ್ಲಿಯ (ತೆಂಕಮಟ್ಟು, ಬಡಗುಮಟ್ಟು) ಬಯಲಾಟದಷ್ಟು ಪ್ರಾಯೋಗಿಕ ಪ್ರಶಸ್ತಿ ಹೊಂದಿಕೊಂಡಿಲ್ಲದಿದ್ದರೂ ಪೂರ್ವದಲ್ಲಿ ಅಲ್ಲಿ ನಮಗಿಂತಲೂ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದಿತ್ತು ಮತ್ತು ವಿಶೇಷ ಜನಾದರಣೆಯನ್ನು ಹೊಂದಿತ್ತು. ಅಲ್ಲಿ ಉಪಲಬ್ದವಾಗುವ ಮುದ್ರಿತ ಹಾಗೂ ಅಮುದ್ರಿತ ಯಕ್ಷಗಾನಗಳ ಸಂಖ್ಯೆ ಕರ್ಣಾಟಕದ್ದಕ್ಕಿಂತ ಎರಡರಷ್ಟು ಎಂದರೆ ಸುಮಾರು ೬೦೦ಕ್ಕೂ ಹೆಚ್ಚಿದೆ. ಬಯಲಾಟಕ್ಕೆ ಉಪಯುಕ್ತವಲ್ಲದ ಕೇವಲ ಶ್ರವ್ಯಾತ್ಮಕವಾದ ಯಕ್ಷಗಾನಗಳು ಕರ್ಣಾಟಕ ದಲ್ಲಿ ದೊರೆಯುವುದಕ್ಕಿಂತ ಎಷ್ಟೋ ಹೆಚ್ಚು ಅಲ್ಲಿ ದೊರೆತಿವೆ. ಹರಿಕಥಾ ಪ್ರಬಂಧ ಗಳನ್ನು ಬಹಳ ಹಿಂದಿನಿಂದಲೇ ಅಲ್ಲಿಯ ಕವಿಗಳು ಯಕ್ಷಗಾನವೆಂದೇ ಕರೆದಿರುತ್ತಾರೆ. ದೇವಸ್ಥಾನದಲ್ಲಿ ತಾಳಮದ್ದಳೆ ಸೇವೆಗೆ ಉದ್ದಿಷ್ಟವಾದ ಯಕ್ಷಗಾನಗಳಲ್ಲಿ ಕೆಲವೊಂದು ವೈವಿಧ್ಯಗಳನ್ನು ಅಲ್ಲಿ ಕಾಣಬಹುದು. ಪಲ್ಲಕಿ ಸೇವಾ ಯಕ್ಷಗಾನ, ಏಕಾಂತ ಸೇವಾ ಯಕ್ಷಗಾನ ಇತ್ಯಾದಿ ಹೆಸರುಗಳಿಂದ ದೇವಸ್ಥಾನಗಳ ಆಯಾ ದೇವರುಗಳಿಗೆ ಸಮರ್ಪಿ ಸಿದ್ದಾಗಿ ಕಾಣುವ ಯಕ್ಷಗಾನಗಳು ಇಂಥವು. ಏಕಾಂತ ಸೇವೆಯೆಂದರೆ ದೇವಸ್ಥಾನದಲ್ಲಿ ರಾತ್ರಿ ಪೂಜೆಯಾದ ಮೇಲೆ ಬಾಗಿಲು ಹಾಕಿ ಒಳಗಡೆ ಭಕ್ತಾದಿಗಳು ಸ್ವಾಮಿಯ ಶೃಂಗಾರ