ಈ ಪುಟವನ್ನು ಪ್ರಕಟಿಸಲಾಗಿದೆ

ಕೋಟೆಕಾರಿನಲ್ಲಿ ಜರಗಿದ ಗೋಷ್ಠಿಯ

ಅಧ್ಯಕ್ಷ ಭಾಷಣ


ಮಾನ್ಯ ಬಂಧುಗಳೆ,
ನಮ್ಮ ಇಂದಿನ ಆರಾಧ್ಯ ವ್ಯಕ್ತಿಯಾದ ಪಾರ್ತಿಸುಬ್ಬ ಕವಿಯ ದೇಶ, ಕಾಲ, ಕರ್ತೃತ್ವಗಳ ವಿಚಾರದಲ್ಲಿ ಸಪ್ರಮಾಣವಾದ ಗ್ರಂಥವನ್ನು ಸಿದ್ಧಪಡಿಸುವುದಾಗಿ ಸಾಕಷ್ಟು ಹಿಂದೆಯೇ ತಮ್ಮ ಮುಂದೆ ವಚನಬದ್ಧನಾಗಿರುವ ನಾನು ಆ ಗ್ರಂಥವನ್ನು ಪ್ರಕಾಶಕ್ಕೆ ತರುವ ಕಾರ್ಯದಲ್ಲಿ ಹಿಂದುಳಿದಿರುವುದಕ್ಕಾಗಿ ತಮ್ಮಲ್ಲಿ ಕ್ಷಮೆ ಕೇಳಬೇಕಾಗಿದೆ. ಕಾಲ ನಿರ್ಣಯಕ್ಕೆ ಆಧಾರವಾದ ಎರಡು ಸಾಧನಪತ್ರಗಳನ್ನು ನಮ್ಮ ಮಿತ್ರರಾದ ಶ್ರೀ ಕೂಡಲು ಈಶ್ವರ ಶ್ಯಾನಭೋಗರು ಅಂದೇ ಒದಗಿಸಿಕೊಟ್ಟಿರುವರಾದರೂ ಕರ್ತೃತ್ವ ನಿರ್ಣಯ ಕ್ಕೊದಗುವ ಹೆಚ್ಚಿನ ಆಧಾರಗಳ ಸಂಗ್ರಹ ಸಮೀಕ್ಷೆಗಳಿಗಾಗಿ ಕಾಲವಿಳಂಬವು ಅನಿವಾರ್ಯ ವಾಯಿತು. ಇನ್ನೀಗ ಹೆಚ್ಚು ವಿಳಂಬವಿಲ್ಲದೆ ಆ ಗ್ರಂಥವನ್ನು ತಮ್ಮ ಮುಂದಿಡಲು ಸಾಧ್ಯವಾಗಬಹುದೆಂದು ವಿಜ್ಞಾಪಿಸಿಕೊಳ್ಳುತ್ತೇನೆ.
ಪಾರ್ತಿಸುಬ್ಬನ ಕುರಿತಾಗಿ ಯಥಾಮತಿಯಾಗಿ ನಾನು ಮಾಡಿರುವ ಸಂಶೋಧನೆಯ ಫಲಿತಾಂಶಗಳನ್ನು ಗ್ರಂಥರೂಪದಲ್ಲಿ ಪ್ರಕಾಶಪಡಿಸುವುದಕ್ಕೆ ಮೊದಲಾಗಿ ಅನುಭವಸ್ಥ ರಾದ ತಮ್ಮ ಪರೀಕ್ಷೆಗೆ ಒಳಪಡಿಸಿ ಅವುಗಳಲ್ಲಿರಬಹುದಾದ ಕುಂದುಕೊರತೆಗಳನ್ನು ಸರಿಪಡಿಸಿಕೊಳ್ಳಬೇಕೆಂಬ ಆತುರವಿದ್ದು, ಅದಕ್ಕಾಗಿ 'ಬುಭುಕ್ಷಿತಸ್ಯ ಕಿಂ ನಿಮಂತ್ರಣಾಗ್ರಹಃ' ಎಂಬಂತೆ ಅನುಕೂಲ ಸಂದರ್ಭವನ್ನು ಪ್ರತೀಕ್ಷಿಸುತ್ತಿದ್ದ ನನಗೆ ಅಭಿಮಾನಪೂರ್ವಕ ಇಂದು ಈ ಸದವಕಾಶವನ್ನು ಒದಗಿಸಿಕೊಟ್ಟುದಕ್ಕಾಗಿ ಈ ಸಾಹಿತ್ಯ ಸಂಘದ ವ್ಯವಸ್ಥಾಪಕರಿಗೆ ನಾನು ಕೃತಜ್ಞನು.
ಈ ಸಂದರ್ಭದಲ್ಲಿ ಪ್ರಥಮತಃ ಪ್ರಾಸ್ತಾವಿಕವಾಗಿ ನಾನು ಮಾಡತಕ್ಕ ವಿಜ್ಞಾಪನೆ ಯೊಂದಿದೆ. ಅದೇನೆಂದರೆ- ಸುಪ್ರಸಿದ್ಧ ಗ್ರಂಥಕರ್ತರಾದ ಶ್ರೀ ಶಿವರಾಮ ಕಾರಂತರು ತಮ್ಮ 'ಯಕ್ಷಗಾನ ಬಯಲಾಟ'ದಲ್ಲಿ ಮತ್ತು ಇತರತ್ರ ಲೇಖನ ಭಾಷಣಗಳಲ್ಲಿ ಪಾರ್ತಿಸುಬ್ಬನ ಮತ್ತು ಆತನಿಂದ ಸುಧಾರಿತವಾದ ಯಕ್ಷಗಾನದ ತೆಂಕುತಿಟ್ಟಿನ ಪ್ರಯೋಗ ಪದ್ಧತಿಯ ಕುರಿತಾಗಿ ಮಾಡಿರುವ ಅನ್ಯಥಾ ಖ್ಯಾತಿಯಿಂದಲಾಗಿ ನಾವು ಸಹಜವಾಗಿಯೆ ನೊಂದುಕೊಂಡಿರುವವಾದರೂ ಅದರಿಂದ ಉದ್ರಿಕ್ತರಾಗಿ ಗುಲ್ಲೆಬ್ಬಿಸಿ ಶುಷ್ಕನಿಗ್ರಹದಲ್ಲಿ ಪ್ರವೃತ್ತರಾಗುವುದು ಸರ್ವಥಾ ಆದರಣೀಯವಲ್ಲ. ಅಂತಹ ವಾಗುದ್ಧಗಳಿಂದ ಯಾವ ಸತ್ಪರಿಣಾಮವೂ ಆಗುವುದಿಲ್ಲವೆಂಬುದು ನಮಗೆ ಇಷ್ಟರೊಳಗೆ ಸಾಕಷ್ಟು ಅನುಭವಕ್ಕೆ ಬಂದಿದೆ. 'ಮುಯ್ಯಿಗೆ : ಮುಯ್ಯಿ ' ಎಂಬ ಪ್ರತೀಕಾರ ಮನೋವೃತ್ತಿಯಿಂದ ಸತ್ಯಾನ್ವೇಷಣೆಯ ದೃಷ್ಟಿಯೆ ಕುರುಡಾಗುವುದು. ಅಂತರಂಗ ಬಹಿರಂಗಗಳೆರಡೂ ಕಲುಷಿತ ವಾಗುವುವು. ಪಾರ್ತಿಸುಬ್ಬನ ಹೆಸರಿನಲ್ಲಿ ಈಗ ಮೊದಲು ನಡೆದಿರುವ 'ವಾದದ ಕೋಲಾಹಲ'ದ ಪರಿಣಾಮವಾಗಿ ಯಕ್ಷಗಾನ ಪ್ರಪಂಚದಲ್ಲಿ ಶ್ರೀ ಕಾರಂತರ ಅನುಕೂಲ ಪಕ್ಷ ಪ್ರತಿಕೂಲ ಪಕ್ಷ ಎಂಬೆರಡು ಪ್ರತಿವಿರೋಧಿ ಪಂಗಡಗಳೆ ಹುಟ್ಟಿಕೊಂಡಂತಿದೆ. ಯಕ್ಷಗಾನದ ರಂಗಭೂಮಿಯಲ್ಲಿ ಮಾತ್ರ ಇದ್ದ ತೆಂಕುತಿಟ್ಟು ಬಡಗುತಿಟ್ಟು ಎಂಬ