ಈ ಪುಟವನ್ನು ಪ್ರಕಟಿಸಲಾಗಿದೆ

೧೪೪ / ಕುಕ್ಕಿಲ ಸಂಪುಟ

ಮಾಡಿದಲ್ಲಿ ಸತ್ಯವು ಸತ್ಯವಾದೀತು; ಅಸತ್ಯವು ಅಳಿದುಹೋದೀತು. ಇದುವೆ ನಮ್ಮ ಮುಂದಿನ ಕರ್ತವ್ಯ.
ಪಾರ್ತಿಸುಬ್ಬನ ಕುರಿತಾಗಿರುವ ಐತಿಹ್ಯಗಳ ಯಾಥಾರ್ಥವೇನು? ಅವುಗಳಲ್ಲಿ ಸತ್ಯಾಂಶವೆಷ್ಟು? ಅವಕ್ಕೆ ಏನು ಪ್ರಮಾಣ? ಆತನ ಕೃತಿಗಳಲ್ಲಿ ಏನು ವೈಶಿಷ್ಟ್ಯವಿದೆ? ಎಂಬುದನ್ನು ಸಂಶೋಧಿಸಿ ಆತನ ಕರ್ತೃತ್ವ ನಿರ್ಣಯಕ್ಕೆ ಸರಿಯಾದ ಆಧಾರಗಳನ್ನು ಎತ್ತಿ ಹಿಡಿದರೆ ಶ್ರೀ ಕಾರಂತರ ವಾದವನ್ನು ಎದುರಿಸುವ ಪ್ರಸಂಗವೇ ಇಲ್ಲ. 'ಅತೃಣೇ ಪತಿತೋ ವಟ್ಟ ಸ್ವಯಮೇವೋಪಶಾಮೃತಿ' ಎಂಬಂತೆ ಅದು ತಾನಾಗಿಯೇ ನಂದಿ ಹೋಗುತ್ತದೆ. ಬ೦ದ ಉಪಾಲಂಭನೆಗಳೆಲ್ಲ ಯಥಾಗತವಾಗಿ ಹಿಂತಿರುಗುತ್ತವೆ. ಪಾರ್ತಿಸುಬ್ಬನ ಹೆಸರು ಚಿರಸ್ಥಾಯಿಯಾಗುತ್ತದೆ. ಶ್ರೀ ಕಾರಂತರೂ ಹೃತ್ತೂರ್ವಕ ಅನುಗ್ರಹಿಸುತ್ತಾರೆ. ಎಲ್ಲ ತಿಟ್ಟಿನವರೂ ಪಾರ್ತಿಸುಬ್ಬನ ಕೀರ್ತಿಯನ್ನು ಮುದದಿಂದ..." ಕೊಂಡಾಡುತ್ತಾರೆ.
ಅಭಿಮಾನ ಮೂರ್ಛಿತರಾಗಿದ್ದ ನಮ್ಮನ್ನು ಶ್ರೀ ಕಾರಂತರು ಎಚ್ಚರಿಸಿ ಉಪಕಾರ ಮಾಡಿದರು ಎಂಬ ಸದ್ಭಾವನೆಯಿಂದ ಸಹನಶೀಲರಾಗಿ ಸತ್ಯ ಶೋಧನೆಯಲ್ಲಿ ಪ್ರವೃತ್ತ ರಾಗೋಣ. ಪಾರ್ತಿಸುಬ್ಬನಲ್ಲಿ ಅಂತಹ ಯೋಗ್ಯತೆ ನಿಜಕ್ಕೂ ಇದ್ದಿಲ್ಲವೆ ಎಂಬ ಶಂಕೆ ಯಿಂದಲೆ ಹುಡುಕೋಣ. ಪೂರ್ವಗ್ರಹವನ್ನು ತೊರೆದುಬಿಡೋಣ. ವಾದದಿಂದ ಸಾಧ್ಯ ವಲ್ಲದುದು ಶೋಧದಿಂದ ಸಿದ್ಧಿಸುತ್ತದೆ. ಅಪ್ರಮಾಣ ತರ್ಕದಿಂದ ಸಿದ್ಧವೂ ಅಸಾಧ್ಯ ವೆಂದಾಗುತ್ತದೆ. ಪ್ರಮಾಣಸಿದ್ಧವಲ್ಲದ ಅನುಮಾನವೆ ಕಲ್ಪನೆ. 'ಪ್ರಮಾಣವಂತ್ಯ ದೃಷ್ಟಾನಿ ಕಾನಿ ಸುಬಹಪಿ | ಅದೃಷ್ಟಶತಭಾಗೋಪಿ ನ ಕಹ್ಯ ಪ್ರಮಾಣಕಃ' ಎಂಬ ನ್ಯಾಯ ಪ್ರತಿಜ್ಞೆಯನ್ನು ಮುಂದಿಟ್ಟು ಮಾಡುವ ಸಂಶೋಧನೆಗೂ ಹೂಡುವ ವಾದಕ್ಕೂ ಬೆಲೆ ಬರುತ್ತದೆ. ಸತ್ಯವು ಹೊರಬೀಳುತ್ತದೆ. ಸುಬ್ಬನ ಹೆಸರಿನಲ್ಲಿ ಕಾಳಗ ನಡೆಯ ಬಾರದೆಂಬ ಸದ್ಭಾವನೆಯಿಂದ ಇಷ್ಟು ವಿಜ್ಞಾಪಿಸಿಕೊಂಡಿದ್ದೇನೆ. ಇನ್ನು ಸುಬ್ಬನ ಕಾಲ ಮತ್ತು ಕರ್ತೃತ್ವಕ್ಕೆ ಆಧಾರವೆಂದು ನಾನು ಸಂಗ್ರಹಿಸಿರುವ ಈ ದಾಖಲೆಗಳ ಕಡೆಗೆ ತಮ್ಮ ಲಕ್ಷವನ್ನು ಕರೆಯುತ್ತೇನೆ.
ಪಾರ್ತಿಸುಬ್ಬನು ಕುಂಬಳೆಯ ಕಣಿಪುರದಲ್ಲಿದ್ದವನು ಎಂಬುದಕ್ಕೆ ಆಧಾರವಾಗಿರುವ ಎರಡು ಮುಖ್ಯ ಸಾಧನಪತ್ರಗಳ ಪಡಿಯಚ್ಚುಗಳನ್ನು ತಮ್ಮ ಮುಂದಿಡುತ್ತೇನೆ. ಇವುಗಳಲ್ಲಿ ಒಂದು ಮದಊರ ಗಣಪತಿ ದೇವಸ್ಥಾನದಲ್ಲಿ ೧೭೯೭ನೇ ಇಸವಿಯಲ್ಲಿ ನಡೆದ ಮೂಡಪ್ಪ ಸೇವೆ ಎಂಬ ವಿಶೇಷ ಉತ್ಸವ ಸಮಾರಂಭದಲ್ಲಿ ವಿವಿಧ ಕಾರ್ಯಭಾಗ ಗಳಿಗೆ ನಿಯೋಜಿತರಾಗಿದ್ದ ಬೇರೆಬೇರೆ ಗ್ರಾಮಗಳ ಜನರ ಹೆಸರಿರುವಂಥದು. ಈ ಸಾಲಿ ನಲ್ಲಿ 'ಕಣಿಪುರದಿಂದ ಪಾರ್ತಿಸುಬ್ಬ ಜನ ೧' ಎಂದಿರುವುದನ್ನು ನೋಡಿರಿ ಈ ಪಟ್ಟಿಯ ಮುಖ್ಯ ವಿವರಗಳನ್ನು ಓದಿಹೇಳುತ್ತೇನೆ. 'ಯದಾಸ್ತು-ಮದವೂರ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಆಗುವಂಥ ಮೂಡಪ್ಪದ ಲೆ- ಪ್ರಾಕು ದಾಖಲೆ ಪ್ರಕಾರ- ಪಿಂಗಳ ಸಂವತ್ಸರದ ವೈಶಾಖ ಬ| ೪ಯು ಆದಿತ್ಯವಾರ ದಿವಸ ನಡೆವ ಬಗ್ಗೆ ಬರದ ಲೆಬ್ಬಿದ ನಕಲು' ಎಂಬ ಶಿರೋಲೇಖನದ ಮುಂದೆ ಉತ್ಸವಕ್ಕೆ ಸಂಬಂಧಿಸಿದ ವಿವಿಧ ವಿನಿಯೋಗ ಗಳಿಗೆ ಬೇಕಾಗುವ ಅಕ್ಕಿ, ತೆಂಗಿನಕಾಯಿ, ಚಿನ್ನ ಬೆಳ್ಳಿ ಇತ್ಯಾದಿಗಳ ವಿವರವಾದ ಮೇಲೆ ಕುಂಬಳೆ, ಅಂಗಡಿಮೊಗರು, ಮೊಗ್ರಾಲು, ಮಧೂರು ಇತ್ಯಾದಿ ಹಲವು ಮಾಗಣೆಗಳಿಂದ ಉಚಿತಸೇವೆಗಾಗಿ ಬರಬೇಕಾಗಿರುವ ನೂರಾರು ಜನ ಭಕ್ತವರ್ಗದಲ್ಲಿ ಸ್ಥಾನಿಕ ಜಾತಿ ಯವರ ಹೆಸರಿನ ಪಟ್ಟಿಯ ಶಿರೋಲೇಖನವು ಹೀಗಿದೆ- 'ಸ್ಥಾನಿಕರು ಮೇಲಾಗ್ರಕ್ಕೆ ಹಚ್ಚುವ