ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ / ೧೪೩

ಕರ್ತೃತ್ವವನ್ನು ಸಾಧಿಸಬಹುದೆ? ನಾವು ಪಾರ್ತಿಸುಬ್ಬನ ಊರಿನವರು, ಆತನಿದ್ದನೆಂಬುದಕ್ಕೆ ಒಂದೇ ಒಂದು ಸಾಕ್ಷ್ಯ ಪ್ರಮಾಣ ನಮ್ಮಲ್ಲಿಲ್ಲ. ಅವನ ಕುಲ, ಜಾತಿ, ನೀತಿ ಒಂದನ್ನೂ ನಾವರಿಯೆವು. ಆತನು ಯಕ್ಷಗಾನಕವಿ ಎನ್ನುತ್ತೇವೆ; ಆತನು ರಚಿಸಿದ ಪ್ರಸಂಗಗಳಾವುವು ಎಂಬ ನಿಷ್ಕರ್ಷೆ ನಮಗಿಲ್ಲ. ಆತನು ಯಕ್ಷಗಾನ ಸುಧಾರಕನೆನ್ನುತ್ತೇವೆ, ಸಭಾಲಕ್ಷಣ ಬರೆದವನೆನ್ನುತ್ತೇವೆ; ಆತನ ಸುಧಾರಣೆ ಏನು, ಸಭಾಲಕ್ಷಣದ ಲಕ್ಷಣವೇನು ಎಂಬುದು ನಮಗೆ ಗೊತ್ತಿಲ್ಲ. ಅನ್ಯಕವಿಕೃತವಾದ ಪದ್ಯಗಳನ್ನೂ ಸುಬ್ಬನ ಪದ್ಯಗಳೆಂದು ಹಾಡುತ್ತೇವೆ. ಆತನ ಕೃತಿಗಳ ಮೂಲಪ್ರತಿಗಳನ್ನು ಕೇಳಿದರೆ ಅವೊಂದೂ ನಮ್ಮಲ್ಲಿಲ್ಲ. ಇಷ್ಟೊಂದು ಅಕೃತಾತ್ಮರಾಗಿ ನಾವಿರುತ್ತಾ, ಶ್ರೀ ಕಾರಂತರ ವಾದಕ್ಕೆ ಉದ್ರೇಕಗೊಳ್ಳು ವುದರಲ್ಲಿ ಅರ್ಥವಿದೆಯೆ? ಪ್ರಮಾದ ವಶದಿಂದ ನಾವೂ ತಪ್ಪು ಮಾಡಿಲ್ಲವೆ? ಸುಬ್ಬ ನಲ್ಲಿರುವ ಅತ್ಯಭಿಮಾನದಿಂದ, ಸುಬ್ಬನ ಕೀರ್ತಿಯನ್ನು ಉಳಿಸುವ ಸದ್ಭುದ್ಧಿಯಿಂದಲೆ ನಾವು ಮಾಡಿರುವುದೇನು? ಆತನ ಪದ್ಯಗಳನ್ನು ಮನಬಂದಂತೆ ತಿದ್ದಿಕೊಂಡು ಆತನ ಶೈಲಿಯನ್ನು ಕಸಿಮಾಡಿದೆವು, ಬಾಯ್ದೆರೆಯ ಹೇಳಿಕೆಯಿಂದ ಆತನ ಕಾಲ ನಿರ್ಣಯಕ್ಕೆ ತೊಡಗಿದೆವು. ಕಾಲ್ಪನಿಕ ವಂಶವೃಕ್ಷವನ್ನು ನಿರ್ಮಿಸಿ ಸುಬ್ಬನ ಚರಿತ್ರೆಯನ್ನು ಸೃಷ್ಟಿಸಿದವು. ಬದನೆಕಾಯನ್ನು ಪರಬ್ರಹ್ಮವೆಂಬ ಹಾಗೆ ವರ್ಣಿಸಿ ನಂಬುವವರೂ ನಂಬದಂತೆ ಮಾಡಿದೆವು. ನಮ್ಮದೇನೂ ದುರುದ್ದೇಶವಲ್ಲ, ಸುಬ್ಬನನ್ನು ಎತ್ತಿ ತೋರಿಸುವ ಅತಿ ಸಾಹಸವನ್ನೇ ಮಾಡಿದೆವು ಅಷ್ಟೆ. ಪರಿಣಾಮವೇನಾಯಿತು? 'ವೃದ್ಧಿ ಮಿಷ್ಟವತೋ ಮೂಲಮಪಿ ನಷ್ಟಂ' ಎಂಬಂತೆ ನಮ್ಮ ಅಭಿಮಾನಾತಿರೇಕದ ಫಲವಾಗಿ ಸುಬ್ಬನ ಹೆಸರೇ ಅಳಿಯುವಂತಾಯಿತು. ಅಪ್ರತಿಭ ಪ್ರಮಾದಗಳು ನಮ್ಮಿಂದಲೂ ಸಂಘಟಿಸಿರುವಾಗ ಶ್ರೀ ಕಾರಂತರ ವಾದವು ಮಾತ್ರ ಕಾಲ್ಪನಿಕ ಎಂದು ಹೇಳುವುದರಲ್ಲಿ ನ್ಯಾಯವಿದೆಯೆ? 'ಯಶೋಭಯೋರ್ದೋಷೋ ನಾಸಾವೇಕಸ ವಾಚ್ಯ' ಎಂಬ ನ್ಯಾಯವು ನಮಗೂ ಅನ್ವಯಿಸುವುದಿಲ್ಲವೆ? (ಇಬ್ಬರೂ ತಪ್ಪು ಮಾಡಿರುವಾಗ ಒಬ್ಬನನ್ನು ಮಾತ್ರ ದೂರುವುದು ಸರಿಯಲ್ಲ) ಅಥವಾ ನಮ್ಮ ಕ್ರಮಾಗತದ ಬೆಲೆಯುಳ್ಳ ಒಂದು ಸ್ವತ್ತಿದೆ. • ಎನ್ನಿ. ಇದು ಸರ್ವರಿಗೂ ತಿಳಿದೇ ಇದೆ. ನಾವು ಅದನ್ನು ಕ್ರಮದಂತೆ ಇಟ್ಟುಕೊಳ್ಳಲಿಲ್ಲ. ನಮ್ಮ ಉಪೇಕ್ಷೆ, ಮೌಡ್ಯ, ದೌರ್ಬಲ್ಯಗಳನ್ನು ನೋಡಿ ನಮ್ಮ ನೆರೆಯವನು ಅನ್ಯಾಯ ವಾಗಿ ಅದರ ಮೇಲೆ ತನ್ನ ಸ್ವಾಮ್ಯವನ್ನು ಸ್ಥಾಪಿಸಲು ಇಲ್ಲದ ಆಧಾರಗಳನ್ನೊಡ್ಡಿ ವಾದ ಹೂಡುತ್ತಾನೆ. ನಾವು ನ್ಯಾಯವಾದ ಮೂಲಾಧಾರ ದಾಖಲೆಗಳನ್ನು ಹುಡುಕಿ ತೆಗೆದು ಇದಿರೊಡ್ಡುವುದನ್ನು ಬಿಟ್ಟು ಬಾಯ್ದೆರೆಯ ಬರಿಯ ಹೇಳಿಕೆಯಿಂದಲೂ, ಕೃತಕ ಆಧಾರ ಗಳಿಂದಲೂ ಪ್ರತಿವಾದವನ್ನು ಸಾಧಿಸುತ್ತೇವೆ. ವಾದಿಯ ದಾವೆಯು ಅಕ್ರಮ, ಅನ್ಯಾಯ, ಮೋಸ, ಸ್ವಾರ್ಥ, ಕಲ್ಪಿತ ಎಂದು ನಮ್ಮ ಅಧಿವಕ್ತಾರರು (ವಕೀಲರು) ಬಲವಾಗಿಯೆ ವಾದಿಸುತ್ತಾರೆ. ಫಲಿತಾಂಶವೇನು? ನ್ಯಾಯ ಸ್ಥಾನದಲ್ಲಿಯೇ, ತೀರ್ಪಾಗುತ್ತದೆ ನಮ್ಮ ಅವಗುಣಕ್ಕೆ! ಸತ್ಯಕ್ಕೆ ವಿರೋಧ; ನ್ಯಾಯಕ್ಕೆ ಅನುರೋಧ! ಯಾರದು ತಪ್ಪು? ನ್ಯಾಯಾಧೀಶರದೆ? ವಾದಿಯದೆ? ಅಲ್ಲ, ನಮ್ಮದು. ಸತ್ಯವನ್ನು ಸುಳ್ಳು ಮಾಡಿದ ಅಪರಾಧವೂ ನಮ್ಮದು, ಸುಳ್ಳನ್ನು ಸತ್ಯವೆಂದು ಮಾಡಿದವರೂ ನಾವೇ. ನೆರೆಯವನನ್ನು ಜರದು ಫಲವಿಲ್ಲ. ಅಥವಾ ಸರಕಾರವನ್ನು ದೂರುವುದು ಸರಿಯಲ್ಲ. ಹಾಗಾದರೆ ಮುಂದೇನು ಮಾಡೋಣ? ಎಂದರೆ- ಇನ್ನಾದರೂ ಅದು ನಮ್ಮ ಕ್ರಮಾಗತದ ಸ್ವತ್ತು ಎಂಬುದನ್ನು ರುಜುಪಡಿಸಲಿಕ್ಕಿರುವ ಮೂಲಾಧಾರಗಳನ್ನು ಹುಡುಕಿ ತೆಗೆದು ನ್ಯಾಯ ಸಮ್ಮತವಾದ : ಸಾಕ್ಷ್ಯಗಳನ್ನು ಕೊಟ್ಟು ಪುನರ್ವಿಮರ್ಶೆಗಾಗಿ ಮೇಲ್ಮನವಿಯನ್ನು له