ಈ ಪುಟವನ್ನು ಪ್ರಕಟಿಸಲಾಗಿದೆ

೧೪೬ / ಕುಕ್ಕಿಲ ಸಂಪುಟ

ದೃಷ್ಟಿಯಿಂದ ಕೊಡಗು ಜಿಲ್ಲೆಯಲ್ಲಿ ಆತನ ಗೊತ್ತುಗುರಿಗಾಗಿ ಯಥಾಸಾಧ್ಯ ನಾನು ಅನ್ವೇಷಿಸಿದಾಗ ನನಗೆ ಆತನ ಯಕ್ಷಗಾನ ಪ್ರಬಂಧಗಳ ಓಲೆ ಮತ್ತು ಕಾಗದದ ಪ್ರತಿಗಳು ದೊರೆತಿವೆ. ಆ ಪ್ರತಿಗಳು ನಮ್ಮಲ್ಲಿ ಈಗ ಅಚ್ಚಿನಲ್ಲಿ ದೊರೆಯುತ್ತಿರುವ ಪ್ರತಿಗಳಿಂದ ಹೆಚ್ಚು ಶುದ್ಧವಾಗಿವೆ. ಆತನು ತುಳು ಭಾಷೆಯಲ್ಲಿ ರಚಿಸಿದ ಕೀರ್ತನೆಗಳು ಸಹ ಅಲ್ಲಿ ಉಪಲಬ್ಧವಾಗಿವೆ. ಇದೊಂದು ಹಸ್ತಪ್ರತಿಯು ನೀವೀಗ ನೋಡುತ್ತಿರುವಂತೆ ತಾ. ೫-೮-೧೮೯೪ರಲ್ಲಿ ಕೊಡಗು ಶ್ರೀಧರ ಭಟ್ಟ ಎಂಬವರಿಂದ ಬರೆಯಲ್ಪಟ್ಟುದಾಗಿದೆ ಎಂದು ಸ್ಪಷ್ಟವಿದೆಯಷ್ಟೆ: ಅವರ ಸ್ವಹಸ್ತಾಕ್ಷರ ಸಹಿ ಸಮೇತ ಇದೆಯಲ್ಲ. ಇದರಲ್ಲಿ ಪಾರ್ತಿಸುಬ್ಬನದಾಗಿರುವ ತುಳು ಕೀರ್ತನೆಯೊಂದನ್ನು ಓದಿ ಹೇಳುತ್ತೇನೆ-
ನಾಣೆಂಚ್ ಗತಿಏ‌ ಪಣ್‌ ರಂಗಯ್ಯ |
ಕಾಣಿಕೆ ಈರೆಗ್ ಎನಮನಸಯ್ಯ | ಕೋಣಿಟೆಂಟ್‌ ಸಹಾಯಾಪರಿದ್ದಿ ಜಾಣತನೊಂಟು ನಡಪಿಂಚಿ ಯೋಗ್ಯ ಇದ್ದಿ | ಪ್ರಾಣರಕ್ಷೆಗ್ ಧನಧಾನ್ಮೂಲ ಸೂವರಿದ್ದಿ ಜಲಜ ಸಂಭವಗೇನ್‌ ಜಾನೆ ಮಾಂತ್‌ತೆನೆ | ಛಲವೊಂತ ಬರಹೊನ್ ವೊಯಿತ್ ಬರೆಯೆನೊ | ಫಲೊ ಇದ್ಯಾಂತನಣಮ್ಮ ಜಾಯೆ ಪುಟೊಯೆನೊ | ಗೆಲವೊಂಟ್ ಹರಿ ಎನಣೇಪೊ ರಕ್ಷಿಪನೊ ಧನ್ನೊಂತ ಗರುಡನ್ನ ಮೇಲ್‌ಟ್ ಗಮನೊ | ಪುಣ್ಯಂತ ವಾಸುಕಿ ಹೃದಯೊಂಟು ಶಯನೊ | ಮಾಸ್ಕೊಂತ ದಾಸರ ವಚನೊಂಟ್ ಗಾನೊ | ಕಣ್ಣ ಪುರಂತ ಶ್ರೀಕೃಷ್ಣನ ಧ್ಯಾನೊ || ಪಲ್ಲ || Holl || 5 || Il a ll (ಈ ಪದ್ಯವು ಶಿವಳ್ಳಿ ಬ್ರಾಹ್ಮಣರು ಮತ್ತು ಸ್ಥಾನಿಕ ಜಾತಿಯವರು ಆಡುವ ತುಳು ಭಾಷೆಯಲ್ಲಿದೆ. ಶೂದ್ರಾದಿಗಳ ತುಳು ಭಾಷೆಗೂ, ಇದಕ್ಕೂ ಸ್ವಲ್ಪ ವ್ಯತ್ಯಾಸವಿದೆ.) ಕನ್ನಡದಲ್ಲಿ ಇದರ ಯಥಾವದಾಷಾಂತರವು ಹೀಗಾಗುತ್ತದೆ. ಇನ್ನಾರೆನಗೆ ಗತಿ | ಹೇಳಿ ರಂಗಯ್ಯ | 2. ಎನ್ನ ಮನಸ ಕಾಣಿ | ಕೆಯು ನಿಮಗಯ್ಯ ಕೋಣಿಯೊಳೆನಗೆ ಸ | ಹಾಯ ಮಾಡುವರಿಲ್ಲ | ಜಾಣತನದಿ ನಡೆ | ಸುವ ಯೋಗ್ಯನಿಲ್ಲ | ಪ್ರಾಣರಕ್ಷೆಗೆ ಧನ | ಧಾನ್ಯ ಕಾಂಬುದಕಿಲ್ಲ ಜಲಜಸಂಭವನಿಗಾ | ನೇನ ಮಾಡಿದನೋ | ಛಲವುಳ್ಳ ಬರಹವ | ನೆಳೆದು ಬರೆದನೋ | ಫಲವಿಲ್ಲದೇಕೆನ್ನ | ತಂದೆ ಪಡೆದನೊ | ಗೆಲವಿಂದ ಹರಿ ಎನ್ನ | ನೆಂದು ರಕ್ಷಿಪನೊ ಧನ್ಯನಾಗಿಹ ಗರು | ಡನ ಮೇಲೆ ಗಮನ | ಪುಣ್ಯಾತ್ಮ ವಾಸುಕಿ | ಹೃದಯದಿ ಶಯನ | I || ಪಲ್ಲ || 110 11 || 2 ||