ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ / ೧೪೭

ಮಾನ್ಯ ದಾಸರ ವಚ | ನಗಳಲ್ಲಿ ಗಾನ |
ಕಣ್ವಪುರದ ಶ್ರೀ | ಕೃಷ್ಣನ ಧ್ಯಾನ

// ೩ //

ಪಾರ್ತಿಸುಬ್ಬನ ಈ ಪದ್ಯವನ್ನು ೧೯೦೫ನೇ ಇಸವಿಯಲ್ಲಿ ಕಾರ್ಕಳದಲ್ಲಿ. ಜಾತ್ರೆ ಸಮಯ ಭಿಕ್ಷುಕನು ಹಾಡುತ್ತಿದ್ದುದನ್ನು ತಾನು ಕೇಳಿರುವೆನೆಂದು ಕೀ! ಶೇ! ಬಡಕಬೈಲು ಪರಮೇಶ್ವರಯ್ಯನವರು ತಾವು ೧೯೨೯ನೇ ಇಸವಿಯಲ್ಲಿ ಮುದ್ರಿಸಿ ಪ್ರಕಟಿಸಿದ 'ಕಿಟ್ಟಿರಾಜಿ' ಎಂಬ ತಮ್ಮ ತುಳು ಯಕ್ಷಗಾನ ಪ್ರಬಂಧದ ಮುನ್ನುಡಿಯಲ್ಲಿ ಪ್ರಸ್ತಾವಿ ಸಿರುವುದನ್ನು ನೀವೂ ನೋಡಿರಬಹುದು. ಹೀಗೆ ಸುಬ್ಬನ ಕಾಲ ನಿರ್ಣಯಕ್ಕೆ ಮತ್ತು ಜಾತಿನೀತಿ ವ್ಯಕ್ತಿತ್ವಗಳ ನಿರ್ಣಯಕ್ಕೆ ಒದಗುವ ಇನ್ನೂ ಹಲವು ಪ್ರಮಾಣಗಳಿವೆ. ಅವುಗಳನ್ನೆಲ್ಲ ವಿಸ್ತರಿಸುವುದಕ್ಕೆ ಇಲ್ಲಿ ಕಾಲಾವಕಾಶವಿಲ್ಲ. ಸದ್ಯಃ ಪ್ರಕಾಶಪಡಿಸಲಿಕ್ಕಿರುವ ಗ್ರಂಥದಲ್ಲಿ ಸವಿಸ್ತರವಾಗಿ ನಿರೂಪಿಸು ತೇವೆ. ನಷ್ಟಪ್ರಾಯವಾಗಿದ್ದ ಈ ಎರಡು ದಾಖಲೆಗಳನ್ನು (ಮೂಡಪ್ಪ ಸೇವೆಯ ಪಟ್ಟಿ ಮತ್ತು ಕೋರ್ಟು ತೀರ್ಮಾನ) ಶ್ರಮವಹಿಸಿ ಒದಗಿಸಿ ಕೊಟ್ಟ ಶ್ರೀ ಕೂಡು ಈಶ್ವರ ಶ್ಯಾನಭೋಗರಿಗೆ ನಮ್ಮ ಕೃತಜ್ಞತಾಪೂರ್ವಕ ಅಭಿನಂದನೆಯು ಸಲಬೇಕಾಗಿದೆ.
ಇದೀಗ ನಿಮಗೆ ತೋರಿಸುವ ಇನ್ನೊಂದು ಪಡಿಯಚ್ಚು ಪಾರ್ತಿಸುಬ್ಬನ ಹಿತ್ತಲಿನದು. ಇದರಲ್ಲಿ ತೋರುವ ಕಟ್ಟಡದ ಅವಶೇಷಗಳು ಪಾರ್ತಿಸುಬ್ಬನು ಹುಟ್ಟಿದ ಮನೆಯದು ಎಂದು ಹೇಳುತ್ತಾರೆ. ಈ ಹಿತ್ತಲು ಇಂದೂ ಪಾರ್ತಿಸುಬ್ಬನ ಹಿತ್ತಲೆಂದೇ ಕರೆಯಲ್ಪಡು ತಿರುವ ವಿಚಾರವೂ ಅದು ಆತನ ವಂಶಸ್ಥರ ಸ್ವಾಧೀನದಲ್ಲೇ ಇರುವುದೆಂಬುದೂ ತಾವೆಲ್ಲರೂ ತಿಳಿದಿರಬಹುದಾದ ವಿಷಯ.
ಇನ್ನು ಆತನು ರಾಮಾಯಣಾದಿ ಯಕ್ಷಗಾನ ಗ್ರಂಥಗಳನ್ನು ರಚಿಸಿದವನೆಂಬುದಕ್ಕೆ ನ್ಯಾಯವಾದ ಆಧಾರವೇನಿದೆ ಎಂದು ನೋಡೋಣ, ಸುಬ್ಬನ ರಾಮಾಯಣದ ಕಥಾ ವಸ್ತುವಿಗೂ ವಾಲ್ಮೀಕಿ ರಾಮಾಯಣದ ಅಥವಾ ಕನ್ನಡದಲ್ಲಿರುವ ತೊರವ ರಾಮಾಯಣಾದಿ ಗ್ರಂಥಗಳ ಕಥಾವಸ್ತುವಿಗೂ ನೈಕ ಸಂದರ್ಭಗಳಲ್ಲಿ ಭಿನ್ನತ್ವವಿದೆ ಎಂಬುದು ನಮಗೆಲ್ಲ ತಿಳಿದೇ ಇದೆ. ಮುಖ್ಯವಾಗಿ ಶೂರ್ಪಣಖಿಯ ಕುಚಚ್ಛೇದನ. ವೆಂಬುದು ಪಾರ್ತಿಸುಬ್ಬನ 'ಪಂಚವಟಿ'ಯಲ್ಲಿ ಹೊರತು ನಮ್ಮ ಇತರ ರಾಮಾಯಣ ಗ್ರಂಥಗಳಲ್ಲಿ ಕಂಡುಬರುವುದಿಲ್ಲವಷ್ಟೆ. ಕೇರಳದ ಕಥಕಳಿ ಪ್ರಯೋಗದಲ್ಲಿ ಈ ಕುಚ ಚ್ಛೇದನ ಸಂದರ್ಭವಿದೆ ಇದು ತಮಗೂ ತಿಳಿದಿರಬಹುದು. ಸುಬ್ಬನ ರಾಮಾಯಣಕ್ಕೂ, ಕಥಕಳಿ ರಾಮಾಯಣಕ್ಕೂ ಈ ಭಾಗದಲ್ಲಿ ಸಾಮ್ಯವಿರುವುದರಿಂದಲೂ ಸುಬ್ಬನು ಕಥಕಳಿ ಯನ್ನು ಬಲ್ಲವನಾಗಿದ್ದನೆಂದು ಆತನ ಕುರಿತಾದ ಎಲ್ಲ ಐತಿಹ್ಯಗಳು ಸಮಾನಯಮದಿಂದ ಹೇಳುತ್ತಿರುವುದರಿಂದಲೂ ಅವೆರಡನ್ನು ಹೋಲಿಸಿ ನೋಡಬೇಕೆಂಬ ಕುತೂಹಲವಾಗಿ ಕೇರಳ ಕಲಾಮಂಡಲದ ತಜ್ಞರ ಸಹಾಯದಿಂದ ಮತ್ತು ಕೀರ್ತಿಶೇಷ, ಮಹಾಕವಿ ವಳ್ಳತ್ತೋಳ್ ಇವರ ಚಿರಂಜೀವಿಗಳಾದ ಶ್ರೀ ಬಾಲನ್ ಕುರೂಪ್, ಶ್ರೀ ಗೋವಿಂದನ್ ಕುರೂಪ್ ಈ ಮಿತ್ರರ ಉದಾರ ಸಹಕಾರದಿಂದ ಯಥಾಮತಿ ಪರಿಶೀಲನೆ ಮಾಡಿ ಸುಬ್ಬನ ಕುರಿತಾದ ಐತಿಹ್ಯಗಳಲ್ಲಿ ಸತ್ಯವಿದೆ ಎಂದು ತಿಳಿದುಕೊಂಡೆನು. ಅನಂತರ ಕೊಟ್ಟಾರಕರ ಮಹಾರಾಜನಿಂದ ರಚಿತವಾದ ರಾಮನಾಟ (ಕಥಕಳಿ ರಾಮಾಯಣ) ಗ್ರಂಥಗಳನ್ನು ಸೂಕ್ಷ್ಮವಾಗಿ ಸಾದ್ಯಂತ ಪರಿಶೀಲಿಸುವಾಗ ಪಾರ್ತಿಸುಬ್ಬನು ಕಥಾಭಾಗಗಳಲ್ಲಿ ಮಾತ್ರ ಅಲ್ಲ ಸಂಧಿ ವಿಭಾಗ, ಛಂದ ಬಂಧ, ರಾಗ, ತಾಳ ಇತ್ಯಾದಿ ಕಾವ್ಯ ರಚನೆಯ ಸರ್ವಾಂಗ ಗಳಲ್ಲಿಯೂ ರಾಮನಾಟವನ್ನು ಅನುಕರಿಸಿದ್ದಾನೆ ಎಂದು ಖಚಿತವಾಯಿತು. ಅದರ