ಈ ಪುಟವನ್ನು ಪ್ರಕಟಿಸಲಾಗಿದೆ

೧೫೦ / ಕುಕ್ಕಿಲ ಸಂಪುಟ

ಝಂಪತಾಳ

ವರಮುನೀ | ಶ್ವರದೇವ | ಪರಮಗುರು | ವೇ... || ಪಲ್ಲ ||

ಪರಮೇಷ್ಠಿ | ಯಕುವರ | ಎನ್ನರ | ಕ್ಷಿಸುತಂದೆ ||| ೧ ||

ಕರವ ಮುಗಿ | ಯುವೆನೆನ್ನ | ಮಾತನೀ | ಕೇಳು|

ಹೇಳೆನ್ನ | ಭೂಪಾಲ | ನಿನ್ನ ಮನ | ದಿರವಸುರ ||| ೨ ||

ಪಾಲನಿಗೆ | ಸಮಧೀರ | ಮೂಲೋಕ | ತಿಲಕ

ಮಕ್ಕಳಿ | ಲ್ಲದರಿಂದ | ಮಾನಸ | ಳಿಂದುನಾ ||| ೩ ||

ಕಕ್ಕುಲಿತೆ | ಗೊಳುತಬಲು | ದುಃಖಿಸುವೆ | ನಯ್ಯ

ಅಶ್ವಮೇ | ಧವ ರಚಿಸಿ | ಅಮರಕುಲ | ಗಳಿಗೆಲ್ಲ ||| ೪ ||

ಆಶ್ಚರ್ಯ | ಮಾಡಿದರೆ ] ಆಗದೇ | ನಯ್ಯ|

ಅರಿತೆನ | ನ್ನಯ ಪರಿಯ | ಧರಣಿಪಾ | ಲಾಗ್ರಣಿಯೆ ||| ೫ ||

ತರಿಸುಬೇ | ಕಾದುದನು | ಮಾಡುಯ | ಜವನು

ತುರಗಮುಂ | ಬಿಡುನೃಪತಿ | ದೀಕ್ಷೆಯನು | ಆಚರಿಸು ||| ೬ ||

ಹರಿಣಾಕ್ಷಿ | ಯರು ಯುಕ್ತ | ನಾಗಿ ತೊಡ | ಗಯ್ಯ


ಸಾವೇರಿ-ಚೆಂಬಡ, (ಸಂಗೀತ ಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವ 'ಝಂಪಡ' ಎಂಬ ಹೆಸರಿನ ಅಪಭ್ರಂಶ ರೂಪ ರಾಮನಾಟದಲ್ಲಿ ಏಕತಾಳ ಆದಿತಾಳ ಎರಡಕ್ಕೂ 'ಚೆಂಬಡ ಎಂಬೊಂದೇ ಹೆಸರಿದೆ).

ಭೂಪಾಲಮಣೇ | ಕೇಟ್ಟಿಡುಕ ನೀ | ದೇವಮುನಿ ಚೊ| ಲೈದು ಞಾನ್ ಚೊಲ್ಟನ್ |

ಸೂರ್ಯಾನ್ವಯವದಿ | ಲುಳನುಂ ದಶರಥನ್ | ಧರಣಿಯೆ ರಕ್ಷಿ | ಚ್ಚಾಳುಂಕಾಲಂ ||೧||

ಸುತರಿಲ್ಲಾ ಞಾಲ್ | ವೈಭಾಂಡಕ ಮುನಿ | ಸುತಕಾಮೇಷ್ಠಿ | ಚೆಯ್ದಿಡು ಮೆನ್ನಾನ್ |

ಸುತರುಂಡಾಕುಂ | ಎನ್ನರುಳಿ ಮುನಿ | ಅದಿನಾಲವನ | ವರುತ್ತೀಡೇಣಂ

ಸಾವೇರಿ-ಏಕತಾಳ :

ಭೂಪಾಲಾಗ್ರಣಿ | ಕೇಳಿದೆಯಾ ನೀ | ದೇವಮುನಿಯುತಾ | ಹೇಳಿದ ಹದನಂ |

ಸೂರ್ಯಾನ್ವಯದೊಳು | ಜನಿಸಿದ ದಶರಥ | ಧಾರಿಣಿ ಪಾಲಿಸು | ವಾ ಸಮಯದೊಳಂ || ೧ ||

ಸುತ ಹೀನರು ವಿ | ಭಾಂಡಕ ಮುನಿಯ | ಸುತನಿಂ ಮಖವನು | ಮಾಡಿದರಿಂದಂ |

ಸುತರಾಗುವರದ | ರಿಂದಾತನನೀ | ಜತನದಿ ಕರೆಸನ | ಲವನಿಂತೆಂದಂ

ವೃತ್ತ :

ಏವಂ ಪರಂ ನಡಕೊಂಡು ಭುಜಂಗ ಶಾಯೀ |

ಮೋದಂ ಲಭಿಚ್ಚು ವಿಬುಧಾ ನಿತರಾಂ ಹೃದಂತೇ |

ವೈಭಾಂಡಕಸದನು ಪಂಕ್ತಿರಥಂ ನರೇಂದ್ರಂ |

ವೇಗೇನ ಪುಕ್ಕು ಕುತುಕತ್ತೊಡುವಾಚ ವಾಚಂ ||