ವೃತ್ತ :
ಇಂತಿ೦ದ್ರಾದ್ಯರಿಗೆಂದು ಶೇಷಶಯನಂ ಪಕ್ಷೀಂದ್ರನನ್ನೇರುತ ।
ಸಂತೋಷಾಧಿಕನಾಗಿ ಬಂದು ನಿಲಲುಂ ಸದ್ಯಾಗಸಾಮೀಪ್ಯದಿ ।
ಕಾಂತಾವರ್ಗವ ಕೂಡಿಕೊಂಡು ಮಖವಂ ಮಾಡುತ್ತ ಭೂಪಾಲಕಂ ।
ನಿಂತಾ ಮಾತ್ರದಿ ಋಷ್ಯಶೃಂಗಮುನಿಪಂ ಪೇಳ್ವಂ ಸುಮಾಂಗಲ್ಯದಿ ॥
ಮೋಹನ-ಚ೦ಬಡ :
ನೃಪತೇಮ । ಹಾಭಾಗ । ದಶರಥ । ನೃಪತೇ ॥ ಪಲ್ಲವಿ ॥
ಪುತ್ರಕಾ । ಮೇಷ್ಟಿ ಚೆ । ಯ್ದು ಕೊಂಡಿ । ದಾನೀಂ ।
ಅತ್ರನಿ । ನ್ಮನೋರಥಂ । ಸಾಧಿಕ್ಕು । ಮಲ್ಲೊ ॥
ಪುತ್ರ ನಾ । ಲು ಪೇರುಂಡಾ । ಮಿನಿನಿನ । ಕ್ಕುಡನೆ ।
ಚಿತ್ತಪೀ । ಡಯೆನ್ನಿಯೆ । ಸ್ವರಮಾಯ್ । ಬಾಳಾಂ ॥ ೧ ॥
ಬಿಬಾಸು — ಏಕತಾಳ :
ನೃಪತೇಮ । ಹಾಭಾಗ । ದಶರಥ । ನೃಪತೇ ॥ ಪಲ್ಲವಿ ॥
ಪುತ್ರ ಕಾ । ಮೇಷ್ಟಿಯ । ನೀನು ಮಾ । ಡಿದರಿಂದ ।
ಇತ್ತ ನಿ । ನ್ನಯ ಮನೋ । ರಥ ಸಿದ್ದಿ । ಸೀತು ।
ಪುತ್ರರು । ನಾಲ್ವರು । ದಿಸುವರು । ಲಾಲಿಸು ।
ಚಿತ್ರಚಂ । ಚಲ ಬಿಟ್ಟು । ಸುಖವಾಗಿ । ಬಾಳು ॥ ೧ ॥
-ದಶರಥನು ಮಡದಿಯರಿಗೆ ಪಾಯಸವನ್ನು ಕೊಡುವುದು :
ಭೈರವಿ-ಚೆಂಬಡ :
ಫುಲ್ಲಲೋಚ । ನ ಮಾರ್‌ಮೌಲೇ । ವಲ್ಲಭೆ ಕೌ । ಸಲ್ಯ ।
ಕಲ್ಯಾಣಿ ಪಾ । ಯಸಮಿದು । ಪುತ್ರಾರ್ಥಂ ಗ್ರ । ಹಿಕ್ಕು ॥ ೧ ॥
ಪುತ್ರರುಂಡಾ । ವಾನಾಯಿದು । ಸುಮುಖಿ ಸೌ । ಮಿತ್ರ ।
ಚಿತ್ರತರಂ । ಪಾಯಸಂಗ್ರ । ಹಿಕ್ಕು ನೀಯುಂ । ಬಾಲೆ ॥ ೨ ॥
ಪೃಥ್ವಿಪಾಲ । ಶಿರೋಮಣೇ । ಕೃತ್ತಾರಾದ । ಕಾಂತ ।
ಚಿತ್ತದಯಿತ । ಹಸ್ಸೇ ಮಮ । ತನ್ನಿಡುಕ । ವೀರ ॥ ೩ ॥
ಕಾಂಭೋಜಿ-ಏಕತಾಳ :
ಪುಲ್ಲ ಲೋಚ । ನೆ ಕೌಸಲ್ಯ । ಮೆಲ್ಲನವ । ಧರಿಸೆ ।
ಕಲ್ಯಾಣಿ ಪಾ । ಯಸಮಿದು । ನಲ್ಲೆ ಪರಿ । ಗ್ರಹಿಸ ॥ ೧ ॥
ಪುತ್ರರುದಿ । ಸುವರಿಂದು ಸೌ । ಮಿತ್ರ ಬಾರೆ । ಬೇಗ ।
ಚಿತ್ರಪಾಯ । ಸವ ಕೊಳ್ಳೆ । ಪುತ್ರಾರ್ಥಿ ನೀ । ನೀಗ ॥ ೨ ॥
ಪೃಥ್ವಿಪಾಲ । ಶಿರೋಮಣಿಯೆ । ಚಿತ್ತಜಸ್ವ । ರೂಪ ।
ಉತ್ತಮಾಂಶ । ವನ್ನು ಕೊಡಿಸೋ । ಮಿತ್ರವಂಶ । ದೀಪ ॥ ೩ ॥