ಈ ಪುಟವನ್ನು ಪ್ರಕಟಿಸಲಾಗಿದೆ
೧೬೬ / ಕುಕ್ಕಿಲ ಸಂಪುಟ

ಸಣ್ಣ ಬಾಲಕೂಸಿಗೊಂದಿಷ್ಟನ್ನವ ಕೊಡವ್ವ |
ಎನ್ನ ಮ೦ಡೆಗಿಷ್ಟು, ಎಳ್ಳಿನೆಣ್ಣೆಯ ಹಾಕವ್ವ ||

ಹೀಗೆ ಸಂತೈಸಿ ಕೊರವಂಜಿ ತೆರಳಲು ದೇವಕಿಯ ಬಸುರಿನಲ್ಲಿದ್ದ ಏಳನೆಯ ಗರ್ಭವು ಕರಗಿತು. ರೋಹಿಣಿಯ ಗರ್ಭದಿಂದ ಶೇಷಾವತಾರಿಯ ಜನನವಾಯಿತು. ಶ್ರೀಮನ್ನಾರಾಯಣನು ತಾನು ಸುರರಿಗೆ ಕೊಟ್ಟ ಅಭಯವಚನದಂತೆ ಭೂಮಿಯಲ್ಲಿ ಅವತರಿಸುವುದಕ್ಕೆ ಮನಮಾಡಿದನು. ದೇವಕಿಯ ಮುಖದಲ್ಲಿ ಮತ್ತೊಮ್ಮೆ ಸತ್ತ ಲಕ್ಷಣವು ಮೈದೋರಿತು. ಪಾರ್ತಿಸುಬ್ಬನ ಸಂತೋಷವು ಉಕ್ಕೇರಿ ಹೀಗೆ ಹರಿಯಿತು.

ಅಷ್ಟತಾಳ :

ದಯವಿಟ್ಟ-ಪರಮಾತ್ಮ ಭಕ್ತರ ಮೇಲೆ | ದಯವಿಟ್ಟ... || ಪಲ್ಲ ||
ದಯವಿಟ್ಟ ಧರೆಗವತರಿಸಿ ಚಿ |
ನ್ಮಯರೂಪ ಖಳರ ಸಂಹರಿಸಿ-ಲಕ್ಷ್ಮೀ |
ಪ್ರಿಯ ಸಾಧುಜನರನುದ್ಧ ರಿಸಿ |
ಭಯಗೊಳುತಿರುವ ಭೂ | ಮಿಯ ಭಾರವಿಳುಹಿ ತ |
ನ್ನಯ ಚಾರಿತ್ರಗಳ ನ | ಕ್ಷಯವ ಮಾಡುವೆನೆಂದು ||
ಕೊಡನೊಳಗಿಹ ದೀಪದಂತೆ- ಮುಸು |
ಕಿಡಲು ರತ್ನದ ಛಾಯೆಯಂತೆ - ಮುಗಿ |
ಲೆಡೆಯ ಭಾಸ್ಕರ ಬಿಂಬದಂತೆ |
ಕಡುಮುದ್ದು ಮೊಗ ಬಿಳುಪಿಡೆ ಮೊಲೆತುದಿ ಕಪ್ಪು |
ತೊಡರಿತಿವಳಪಾದದಡಿಯರಸಿನವಾಗೆ ||
ಆಸರುಬ್ಬಸವೆತ್ತಿದಂತೆ-ಮೆಯ್ಯ |
ಬೇಸರು ಘನವಾಯಿತಂತೆ-ನವ |
ಮಾಸ ತುಂಬಲು ಪುಣ್ಯವಂತೆ |.....
... .... ... .... ....

ಹೀಗೆ ನವಮಾಸ ತುಂಬಲು ಶ್ರಾವಣ ಮಾಸದ ಅಷ್ಟಮಿಯಂದು ಬುಧವಾರ ನಡುವಿರುಳು ಶ್ರೀಕೃಷ್ಣಮೂರ್ತಿಯ ಜನನವಾಯಿತು. ತನ್ನನ್ನು ನಂದಗೋಕುಲದಲ್ಲಿ ಬಿಟ್ಟು ಅಲ್ಲಿ ಜನಿಸಿದ 'ಮಾಯಾಂಗಿ'ಯನ್ನು ಇಲ್ಲಿ ತಂದಿರಿಸಿರಿ ಎಂಬ ಸಿರಿನುಡಿಯಾದಂತೆ ವಸುದೇವನು ಶಿಶುವನ್ನೆತ್ತಿಕೊಂಡೊಯ್ಯುವ ಗೋಪಾಲಕೃಷ್ಣನ ಜನ್ಮಲೀಲೆಯ ಮಹಿಮೆಯನ್ನು ಸುಬ್ಬನು ಹೀಗೆ ಹೊಗಳುತ್ತಾನೆ :

ಅಷ್ಟತಾಳ :

ಕಾರೆಂಬ ಕತ್ತಲೆ ಕವಿಯಲು ದೆಸೆದಿಕ್ಕು |
ಭೋರೆಂದು ಮಳೆಹೊಯ್ಯುತ್ತಿರುವಾಗ - ಪುರ |
ದ್ವಾರಂಗಳಾಳದಂಡಿಗೆ ಬೇಗ ಕಳಚಿ |
ದಾರಿಯಾಯಿತು ಶೌರಿ ಬರುವಾಗ ಕಾಣು |
ತ್ತಿರುವಾಗ-ಕಾವ |
ಲವರಾಗ |ನಿದ್ರೆ |
ಬಾರಿಸಲೆಚ್ಚರಿಲ್ಲದ ಯೋಗ-ಸೂತ್ರ |