ಈ ಪುಟವನ್ನು ಪರಿಶೀಲಿಸಲಾಗಿದೆ

೧೭೬ | ಕುಕ್ಕಿಲ ಸಂಪುಟ ಅತ್ತಿತ್ತ ಪೊಗಗೊಡೆನೆನುತ ಮೋದದಲಿ |
...............
ನಂದನ ಪವಡಿಸೆನ್ನೊತ್ತಿನೊಳೆಂದು |
ಮಂದಗಮನೆ ಪಾಡಿ ನಿದ್ರಿಸಲಂದು ||
ಅಂದಿನಿಂದ ಗೋಪಾಲಕೃಷ್ಣನನ್ನು ಇರುಳೆಲ್ಲ ಗೋಪಿಯು ತನ್ನೊತ್ತಿನಲ್ಲಿ ಮಲಗಿಸಿ ಕಾಯುತ್ತಿರುವುದು, ಹಗಲು ಹೊತ್ತಿನಲ್ಲಿ ಆತನು ನೆರೆಮನೆಯ ಲೂಟಿಗೆ ಹೋಗದಂತೆ ಬಲರಾಮ ಸಹಿತ ಗೋವಳರ ಕಾವಲಿನಲ್ಲಿ ಗೋಪಾಲನೆಗಾಗಿ ದೂರದ ಹೊಲಕ್ಕೆ ಕಳುಹಿಸುವುದು; ಗೋಪಿಯ ಈ ನೇಮದಿಂದಲಾಗಿ ಗೊಲ್ಲರ ಕೇರಿಯಲ್ಲಿ ಕೃಷ್ಣನ ಸುಳಿವಿಲ್ಲದಾಯಿತು. ಗೋಪ ಸ್ತ್ರೀಯರ ಕಣ್ಣು ಬೇಡಿತು, ಬೇಸರಿಕೆ ಹೆಚ್ಚಿತು, ವಿರಹ ಉರಿಯಿತು. ಹಿಂದೆ ದೂರಿದವರು ಇಂದು ಮರುಗಿದರು. ತಮ್ಮ ತಮ್ಮೊಳಗೆ ಚಿಣ್ಣ ಕೃಷ್ಣನ 'ಮುದ್ದು ಮೊಗ, ಮುಗುಳುನಗೆ, ತಿದ್ದಿದ ಕಪೋಲ'ಗಳ ಸೌಂದರ್ಯವನ್ನು ಕೊ೦ಡಾಡಿದರು- ಗಾಡಿಕಾರದ ಮುದ್ದು ಮೋರೆ ನಟನೆಯಿಂದ |
ಆಡುತ್ತ ದಿನ ದಿನ ಬರುವ ಗೋಪಾಲ |
ಬೆದರಿಸೆ ತಾಯ ಮಾತಿಗೆ ತಾ ಕೋಪಿಸಿಕೊಂಡು |
ಬದಲೊಂದು ರಾಜ್ಯವ ಸೇರಿದನೇನೊ?
ಎಂದು ಹಂಬಲಿಸುತ್ತ 'ಕಾಣದೆ ನಿಲಲಾರೆ ಚಿಕ್ಕಯ್ಯನ' ಎಂದು ಎಲ್ಲರೊಂದಾಗಿ ಹುಡುಕುತ್ತ ಯಮುನೆಯ ದಡಕ್ಕೆ ಬಂದು ಅಲ್ಲಿಯೂ ಕಾಣದೆ ಕಂಗೆಟ್ಟು ಕೃಷ್ಣ ದರ್ಶನದ ಇಷ್ಟಾರ್ಥ ಪ್ರಾಪ್ತಿಗಾಗಿ ಮಳಲಿನ ಗೌರಿಯನ್ನು ಮಾಡಿ 'ಧೂಪ ದೀಪ ಗಂಧಪುಷ್ಪ ಫಲ ಮಹಾನೈವೇದ್ಯ'ಗಳಿಂದ ಪೂಜಿಸಿ ಮಂಗಳಾರತಿ ಬೆಳಗಿ ಶೋಭನ ಹಾಡಿ ಈ ರೀತಿ ಪ್ರಾರ್ಥಿಸುತ್ತಾರೆ : ತ್ರಿವುಡೆತಾಳ ಶರಣು ಸಕಲಾಭೀಷ್ಟದಾಯಕಿ |
ಶರಣು ತ್ರಿಭುವನ ಪಾಲಕಿ |
ಶರಣು ಪರ್ವತರಾಜಬಾಲಕಿ |
ಶರಣು ವರ ನೀಲಾಳಕಿ |
ಪಂಕಜಾನನ ಪರಮ ಪಾವನ |
ಶಂಕರಾರ್ಧಶರೀರಿಣಿ -
ಶಂಖಚಕ್ರಗದಾಬ್ಬ ಪಾಣಿ ಭ |

ಯಂಕರೋಂಕಾರವಾಹಿನಿ | ಶರಣು ಶರಣು || ಸುಬ್ಬನ ಈ ಪದ್ಯವನ್ನೂ ಸಭಾಲಕ್ಷಣದ 'ಶರಣುತಿರುವಗ್ರಶಾಲಿವಾಹಿನಿ' ಎಂಬ ಪದ್ಯವನ್ನೂ ಹೋಲಿಸಿ ನೋಡಿರಿ. ಹೀಗೆ ಪ್ರಾರ್ಥಿಸಿ ವಿಧಿಪ್ರಕಾರ ದಂಪತಿಗಳಿಗೆ 'ಬಾಯನ ದಾನವನ್ನಿತ್ತು' ಹರಕೆ ಹೊತ್ತು ಶ್ರೀ ಗೌರಿಯ ವರಪ್ರಸಾದವನ್ನು ಬೇಡುವ ಪದ್ಯ :