ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ/೧೭೭


ಆದಿತಾಳ:


ಹೂವ ಕೊಡೆ ಗೌರಿ । ಹೂವ ಕೊ । ಡೆ ಸತ್ಯ ।
ಭಾವಯ ರಮಣನಮ್ಮ । ನಾಳುವಾತ । ನಾಗುವಂತೆ ॥ ಪಲ್ಲ ॥
ಎನ್ನ ಮನದಭೀಷ್ಟಂಗ । ಳನ್ನು ನೀ ಪಾ । ಲಿಸಿದರೆ ।
ಹೊನ್ನ ಗೋಪುರಕ್ಕೆ ಕಲಶ । ವನ್ನು ಸಲಿಸುವೆ- ।
ಚಿನ್ನದ ತೋರಣವ ಕಟ್ಟಿ । ಮುತ್ತಿನ ಚ । ಪ್ಪರವ ನಿಕ್ಕಿ ।
ಹನ್ನೊ೦ದು ನವಮಿಯ ಉಪವಾಸ । ವನ್ನು ಮಾಳ್ । ನೀ ಬಲಗೈಯ ॥
ಪುಂಡರೀಕನೇತ್ರನನ್ನ । ಗಂಡನಾಗಿ । ದ್ದರೆ ನಿನ್ನ ।
ಮಂಡೆಗೆ ರತ್ನದ ಮಕುಟ । ಕೊಂಡಿರಿಸು । ವೆ-
ದುಂಡ ಮಲ್ಲಿಗೆ ಸುವರ್ಣ । ಕೆಂಡ ಸಂಪಿ । ಗೆಯ ಮುಡಿಸಿ ।
ಮಂಡಲಾರ್ಧ ದಿವಸ ಕೈ । ಕೊಂಡು ನಾ ಜಾ । ಗರವ ಮಾಳ್ವ ॥

ಹೀಗೆ 'ಮಾಧವನಾಗಲಿ ಪತಿ ಎಂದಾದೇವಿಯ ಬೀಳುಕೊಂಡು' ಗೋಪಾಂಗನೆಯರು ಯಮುನೆಯಲ್ಲಿ ಮಿಂದು ತಣಿಯಲೆಂದು ನೀರಿಗಿಳಿಯುವ ಸಂಭ್ರಮವನ್ನು ಸುಬ್ಬನ ಮಾತುಗಳಲ್ಲಿ ಕೇಳಿರಿ:


ಅಷ್ಟತಾಳ:


ಉಟ್ಟ ಸೀರೆಗಳ ಬಿಚ್ಚಿರಿಸಿ ಅಳ ।
ವಟ್ಟ ಕುಪ್ಪಸದಿ ಚಿನ್ನಗಳ ಕಟ್ಟಿರಿಸಿ ।
ಕಟ್ಟಿರ್ದ ಮುಡಿಯ ಸಡಿಲಿಸಿ- ನೀರಿ ।
ಗೊಟ್ಟಾಗಿ ಇಳಿದೀಸಿದರು ಧಡ ಧಡಿಸಿ ॥
ಕಂಕಣಗಳು ಲಿರೆನುತ-ಗಂಧ ।
ಕುಂಕುಮ ಪರಿಮಳಂಗಳನು ತೊಳೆಯುತ ।
ಸೋಂಕಿದ ಕೆಸರನೊರಸುತ- ಹರಿ ।
ಣಾಂಕ ವದನೆಯರೊಬ್ಬೊಬ್ಬರಳೆಯುತ ॥
ಜಲಕ್ರೀಡೆಯೊಳಗಿದ್ದರೆಲ್ಲ - ತಂತ ।
ಮ್ಮೊಳಗೊಬ್ಬರೊಬ್ಬರು ಮುಳುಗೇಳುತೆಲ್ಲ ।
ನಳಿನದೊಯ್ಯಾರವ ಪೋಲ್ವ - ಚೆಲ್ವ ।
ಲಲನೆಯರೆಲ್ಲ ನೋಡಿದ ಸಿರಿನಲ್ಲ ॥

.........

ಹೀಗೆ ತರುಣಿಯರು ಜಲಕ್ರೀಡೆಯಲ್ಲಿ 'ಘಟಿಕಾ ಪ್ರಮಾಣ' ಮೈಮರೆತಿರುವುದನ್ನು ದೂರದಿಂದ ಕಂಡ ಗೋಪಾಲನು ಕಳ್ಳ ಹೆಜ್ಜೆಯಲ್ಲಿ ಬಂದು


ಗೂಢದಿಂದುಟ್ಟಿರ್ಧ ಸೀರೆಯ ।
ಮೋಡಿಯಿಂದಲೆ ತೆಗೆದು ನಲಿನಲಿ ।
ದಾಡಿ ತಡೆಹದ ಮರವನೇರಿದ ನಿಮಿಷ ಮಾತ್ರದಲಿ ॥

ಮರವನೇರಿದ ಸೀರೆಗಳ್ಳನನ್ನು ಕಂಡು ಗೋಪಾಂಗನೆಯರು ಕೂಗಿಕರೆದು ಮೊರೆ ಇಟ್ಟು ಪ್ರಾರ್ಥಿಸುತ್ತಾರೆ. ಶ್ರೀ ವಿಷ್ಣುವಿನ ದಶಾವತಾರ ಸ್ತುತಿ ರೂಪದಲ್ಲಿರುವ ಪದ್ಯವು ಹೀಗಿದೆ: