ಈ ಪುಟವನ್ನು ಪ್ರಕಟಿಸಲಾಗಿದೆ

೧೮೪ / ಕುಕ್ಕಿಲ ಸಂಪುಟ

ಹೆಚ್ಚಿಸಿ ಸತ್ಯವನ್ನು ಅಸತ್ಯವೆಂದೂ, ಅಸತ್ಯವನ್ನು ಸತ್ಯವೆಂದೂ ಸಾಧಿಸಲು ಪ್ರಯತ್ನಿಸು ತಿರುವುದು ಮಾತ್ರ ತುಂಬ ವ್ಯಸನಾಸ್ಪದ.

ಸುಪ್ರಸಿದ್ಧ ಲೇಖಕರಾದ ಶ್ರೀ ಶಿವರಾಮ ಕಾರಂತರು ತಮ್ಮ ಊರಲ್ಲಿ ರೂಢಿ ಯಲ್ಲಿರುವ ಬಡಗುತಿಟ್ಟಿನ ಯಕ್ಷಗಾನ ಪದ್ಧತಿಯ ಪ್ರಶಂಸೆಯನ್ನೇ ಮುಖ್ಯೋದ್ದೇಶ ವಾಗಿಟ್ಟುಕೊಂಡು ಬರೆದಿರುವ “ಯಕ್ಷಗಾನ ಬಯಲಾಟ ಎಂಬ ಹೆಸರು ಪಡೆದ ಗ್ರಂಥ ದಿಂದಲಾಗಿ ಅನೇಕ ಯಕ್ಷಗಾನ ಕವಿಗಳಿಗೆ ತುಂಬ ಅಪಚಾರವಾಗಿರುವುದಲ್ಲದೆ ಯಕ್ಷಗಾನ ಕಲೆಯ ಹುಟ್ಟು ಪೂರ್ವೋತ್ತರಗಳ ವಿಚಾರದಲ್ಲಿ, ಇತರ ಶಾಸ್ತ್ರೀಯ ವಿಚಾರಗಳಲ್ಲಿ ಸಹ ವಸ್ತುಸ್ಥಿತಿಗೆ ವಿರುದ್ಧವಾದ ಅಲ್ಲದ ಸಲ್ಲದ ತಪ್ಪುಗ್ರಹಿಕೆಗಳನ್ನು ಜನರು ಬೆಳೆಸಿಕೊಳ್ಳು ವಂತಾಗಿದೆ. ಕುಂಬಳೆಯ ಪಾರ್ತಿಸುಬ್ಬನ ವಿಷಯವಾಗಿಯೂ, ತೆಂಕುತಿಟ್ಟಿನ ಯಕ್ಷಗಾನ ಪದ್ಧತಿಯ ವಿಚಾರವಾಗಿಯೂ ಕುರಿತಾಗಿ ಅವರು ಹೂಡಿರುವ ವಾದವೂ, ಮಾಡಿರುವ ಅಸದಾಖ್ಯಾತಿಯೂ, ಸತ್ಯ, ನ್ಯಾಯ, ನೀತಿಗಳ ಮರ್ಯಾದೆಯನ್ನು ಮೀರಿರುವುದು ಅತ್ಯಂತ ಶೋಚನೀಯ. ಪಾರ್ತಿಸುಬ್ಬನು ಕವಿಯೇ ಅಲ್ಲವೆಂದರು; ಅವನ ರಚನೆಗಳೆಂದು ಚಿರಪ್ರಸಿದ್ಧವಾದ ಯಕ್ಷಗಾನ ಕೃತಿಗಳನ್ನೆಲ್ಲ ವೆಂಕಾರ್ಯನ ಮಗ ಸುಬ್ಬನು ರಚಿಸಿದು ದಾಗಿದೆ ಎಂದರು; 'ಆಡುವಳ್ಳಿ'ಯವನಾದ ಆ ವಂಕಾರ್ಯನ ಮಗ ಸುಬ್ಬನನ್ನು ಬ್ರಹ್ಮಾವರಕ್ಕೆ ತಂದರು. ಪಾರ್ತಿಸುಬ್ಬನನ್ನೂ, ಅವನ ಊರಿನವರನ್ನೂ ಆ ಸುಬ್ಬನ ಕೀರ್ತಿಯನ್ನು ಅಪಹರಿಸಿದ ದುರಾತ್ಮರೆಂದು ನಿಂದಿಸಿದರು. ಪಾರ್ತಿಸುಬ್ಬನ ಕರ್ತೃತ್ವವನ್ನು ಅಲ್ಲಗಳೆಯುವ ಛಲಕ್ಕಾಗಿ ಅಲ್ಲದ ಸಲ್ಲದ ಕುತರ್ಕಗಳನ್ನು ಎಬ್ಬಿಸಿದರು. ಅಸಂಬದ್ಧ ವಾದ ಕಾಲಗಣನೆಯನ್ನು ಮಾಡಿ ಪಾರ್ತಿಸುಬ್ಬನು ಹುಟ್ಟುವುದಕ್ಕೆ ಮೊದಲೇ ಆತನವೆಂದು ಪ್ರಸಿದ್ಧಿಯುಳ್ಳ ಗ್ರಂಥಗಳು ಪ್ರತಿಯಾಗಿವೆ ಎಂದು ತೋರಿಸುವ ಅತಿಸಾಹಸವನ್ನು ಮಾಡಿದರು. ಆತನ ಕುರಿತಾಗಿರುವ ಪರಂಪರೆಯ ಐತಿಹ್ಯಗಳನ್ನೆಲ್ಲ ಕಲ್ಪಿತವೆಂದರು. ಪಾರ್ತಿಸುಬ್ಬನು ಸ್ತುತಿಸಿರುವ ಕಣ್ಣಪುರಕ್ಕೆ ಬದಲಾಗಿ ಆಗುಂಬೆ ಕಣಿವೆಯಲ್ಲಿ 'ಕಾನೂರು' ಎಂಬ ಸ್ಥಳವಿದೆಯೆಂದೂ, ಈಗ ಕಾಡುಪಾಲಾಗಿದೆಯಾದರೂ ಹಿಂದಕ್ಕೆ ಅಲ್ಲಿ ಒಂದು ಕೃಷ್ಣ ದೇವಸ್ಥಾನವಿತ್ತೆಂದೂ, ಅದನ್ನೇ ಕಣ್ಣಪುರವೆಂದು ವೆಂಕಾರ್ಯನ ಮಗ ಸುಬ್ಬನೇ ರಾಮಾಯಣಾದಿ ಪ್ರಸಂಗಗಳಲ್ಲಿ ಸ್ತುತಿಸಿದ್ದಾಗಿದೆಯೆಂದೂ ಕಥೆ ಕಟ್ಟಿದರು. ಕುಂಬಳೆ ಊರಲ್ಲಿರುವ, ಮಧುಪುರದ ವಿಶ್ಲೇಶನ ಬದಲು 'ಪೇಟ್‌ಪುರಿ'. ಗಣಪತಿಯಿರುವ ಮಧೂರು ಎಂಬ ಸ್ಥಳವು ಬ್ರಹ್ಮಾವರ ಪ್ರಾಂತದಲ್ಲಿ ಇದೆ, ಯಕ್ಷಗಾನದಲ್ಲಿ ಸ್ತುತಿ ಗೊಳ್ಳುವ 'ಮಧುಪುರ'ದ ವಿಶ್ಲೇಶನೆಂದರೆ ಅಲ್ಲಿಯವನು, ವೆಂಕಾರ್ಯನ ಮಗ ಸುಬ್ಬನೇ ಅವನನ್ನೂ ಸ್ತುತಿಸಿದವನು ಎಂದೂ ಹೇಳಿದರು. ಪಾರ್ತಿಸುಬ್ಬನು ರಚಿಸಿದ್ದೆಂದು ಪ್ರಸಿದ್ಧಿ ಇರುವ ಪುತ್ರಕಾಮೇಷ್ಟಿ ಮತ್ತು ಬಾಲಲೀಲೆಗಳನ್ನು ಅವು ಕಣ್ಣಪುರಿ ಕೃಷ್ಣನ ಅಂಕಿತದಲ್ಲಿದ್ದರೂ ದೇವಿದಾಸನೆಂಬವನು ರಚಿಸಿದ್ದೆಂದರು. ಆಡುವಳ್ಳಿಯ ಆ ಸುಬ್ಬನು ಬ್ರಹ್ಮಾವರಕ್ಕೆ ಗಂಟುಬೀಳುವುದಕ್ಕಾಗಿ ಅಜಪುರದ ಮಹಾಲಿಂಗನನ್ನು ಸ್ತುತಿಸಿದ ವಾರಂಬಳ್ಳಿ. ವಿಷ್ಣು ಕವಿಯು ರಚಿಸಿರುವ 'ಬಾಲಲೀಲೆ'ಯನ್ನು ಆ ಸುಬ್ಬನ ಕೃತಿಯೆಂದು ಹೇಳಿದರು. ಆತನಿಗೆ ತೊಡಿಸುವ ಇಷ್ಟೆಲ್ಲ ಕೃತಿಗಳು ಆತನ ಸ್ವಂತ ಕೃತಿಗಳಾದ ರುಕ್ಷ್ಮಿಣೀ ಸ್ವಯಂವರ ಪಾರಿಜಾತಗಳ ಶೈಲಿಯಿಂದ ತೀರ ಭಿನ್ನವಾಗಿರುವುದರ ಸಮರ್ಥನೆಗಾಗಿ ಬೇರೆ ಬೇರೆ ಶೈಲಿಯಲ್ಲಿ ರಚಿಸುವುದೇ ಅವನ ವೈಶಿಷ್ಟ್ಯ; ಆತನ ಕರ್ತೃತ್ವ ನಿರ್ಣಯಕ್ಕೆ ಶೈಲಿಯು ಏನೇನೂ ಸಹಾಯಕವಲ್ಲ ಎಂದೂ ವಾದಿಸಿದರು. ರುಕ್ಷ್ಮಿಣಿ ಸ್ವಯಂವರ, ಪಾರಿಜಾತಗಳಲ್ಲಿ ಆತನು ಸವಿವರವಾಗಿ ತನ್ನ ನಾಮಾಂಕಿತವನ್ನು ಹೇಳಿಕೊಂಡಿರುತ್ತಾ ಈ ಕೃತಿಗಳಲ್ಲಿ ಹೇಳದಿರಲು ಕಾರಣವೇನು? ಎಂಬ ಆಕ್ಷೇಪಕ್ಕಾಗಿ- ಆತನು ರಾಜಾಶ್ರಯವನ್ನು