ಈ ಪುಟವನ್ನು ಪ್ರಕಟಿಸಲಾಗಿದೆ
ಶ್ರೀ ಕೋಟ ಶಿವರಾಮ ಕಾರಂತರ 'ಸುಬ್ಬನ ಸಮಸ್ಯೆ' / ೧೮೫

ಪಡೆದಿದ್ದಾನೆ. ಹಾಗೆ ರಾಜಾಶ್ರಯವು ದೊರೆಯುವುದಕ್ಕೆ ಮೊದಲೇ ಈ ಕೃತಿಗಳನ್ನು ರಚಿಸಿದ ಕಾರಣ ಇವುಗಳಲ್ಲಿ ತನ್ನ ಹೆಸರು ಹೇಳಿಕೊಳ್ಳುವಷ್ಟು ಉತ್ಸಾಹವು ಅವನಿ ಗಿರಲಿಲ್ಲ. ರಾಜಾಶ್ರಯವು ಸಿಕ್ಕಿದ ಮೇಲೆ ರಚಿಸಲ್ಪಟ್ಟ ಆ ಎರಡು ಕೃತಿಗಳಲ್ಲಿ ಹೆಸರು ಹೇಳಿಕೊಳ್ಳುವಷ್ಟು ಧೈರ್ಯ ಅವನಿಗೆ ಬಂತು ಎಂದೂ ಸಮಾಧಾನವನ್ನು ಕಲ್ಪಿಸಿ ಕೊಂಡರು.

ಹೀಗೆ ಸಂಶೋಧನೆ ಎಂಬ ಹೆಸರಿನಲ್ಲಿ ಕುಂಬಳೆ ಪಾರ್ತಿಸುಬ್ಬನ ಕರ್ತೃತ್ವವನ್ನು ಅಳಿಸಿ ಆತನ ಕೃತಿಗಳನ್ನೆಲ್ಲ ವೆಂಕಾರ್ಯನ ಮಗನಿಗೆ ತೊಡಿಸಲಿಕ್ಕಾಗಿ ನಾನಾ ವಿಧವಾದ ವಾದಜಾಲವನ್ನು ಹೆಣೆಯುವುದು ತಮಗೆ ಅನಿವಾರ್ಯವಾಯಿತು ಎಂಬಂತೆ ತಮ್ಮ 'ಸುಬ್ಬನ ವಾದ'ದ ಬೀಜೋದ್ಘಾಟನೆಯ ಮೂಲ ಹೇತುವನ್ನು ಶ್ರೀಯುತರು ತಮ್ಮ ಗ್ರಂಥದ ಪುಟ ೧೧ರಲ್ಲಿ ಹೀಗೆ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಎಂಬಲ್ಲಿ ನನಗೆ ಕಾಣಸಿಕ್ಕಿದ ಒಂದು ಯಕ್ಷಗಾನ ಪ್ರಸಂಗದ ತಾಡವಾಲೆಯು ನನ್ನ ಕುತೂಹಲವನ್ನು ಕೆರಳಿಸಿತು; ಅದರಲ್ಲಿ ಪುತ್ರಕಾಮೇಷ್ಟಿಯಿಂದ ತೊಡಗಿ ರಾವಣ ವಧೆಯ ತನಕ ಪ್ರಸಂಗ ಗಳಿದ್ದುವು. ಮೇಲಾಗಿ ಅದು ಒಂದೇ ಕೈಬರಹದ ಒಂದೇ ಸಂಪುಟವಾಗಿದ್ದು ಕಾಲದ ಸ್ಪಷ್ಟ ಅಂಕಿತವುಳ್ಳದಾಗಿತ್ತು.... ಇವುಗಳಲ್ಲಿ ಕೊನೆಯದಾದ ಮೈರಾವಣ ಕಾಳಗವು ವೆಂಕಯ್ಯನ ಮಗ ಸುಬ್ಬನ ತರಳನಾದ ವೆಂಕಟನಿಂದ ರಚಿತವಾದುದು. ಮೊದಲಿನದು ಸ್ಪಷ್ಟ ಅಂಕಿತ ವಿಲ್ಲದ್ದು, ನಡುವಣದ ರಾಮಾಯಣ ಪ್ರಸಂಗಗಳು ನಮ್ಮ ಜಿಲ್ಲೆಯಲ್ಲಿ ಇಂದಿಗೂ ಪ್ರಚಾರದಲ್ಲಿರುವಂಥವು. ಸಂಧಿಗಳ ಕೊನೆಯಲ್ಲಿ 'ಕಣ್ಣಪುರ ಕೃಷ್ಣ'ನ ಅಂಕಿತವುಳ್ಳುವು. ಇದನ್ನು ಪಾರ್ತಿಸುಬ್ಬ ಎಂಬವನು ಬರೆದನೆಂದು ದಿ| ಮುಳಿಯ ತಿಮ್ಮಪ್ಪಯ್ಯನವರು ಒಂದು ಗ್ರಂಥದಲ್ಲಿ ತಿಳಿಸಿದ್ದಾರೆ. ಆ ಭಾವನೆ ನಮ್ಮ ಜಿಲ್ಲೆಯ ಕುಂಬಳೆ ಭಾಗದ ಜನರಲ್ಲಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕೆಲವು ಹಳಬರು ಇವು ವೆಂಕಯಾತ್ಮಜ ಸುಬ್ಬಾಭಿಧಾನನವು ಎಂದಾಗ ನನ್ನ ಕಣ್ಣು ತೆರೆಯಿತು.”

ಪುಟ ೧೮೬ರಲ್ಲಿ ಸಹ ಆ ಸಂಪುಟದ ಕೊನೆಯಲ್ಲಿರುವ ಮೈರಾವಣನ ಕಾಳಗವು ಆ ಸುಬ್ಬನ ಮಗ ವೆಂಕಟನು ಬರೆದುದು, ಅದರಲ್ಲಿ ಅವನು ತನ್ನ ತಂದೆಯನ್ನು ಸ್ತುತಿ ಸಿದ್ದಾನೆ. ಆ ಸಂಪುಟದಲ್ಲಿದ್ದ ಪ್ರಸಂಗಗಳೆಲ್ಲವೂ ಒಬ್ಬನ ಕೈಬರಹದಲ್ಲಿಯೇ ಇದ್ದಿತ್ತು ಎಂದು ಮತ್ತೊಮ್ಮೆ ಪುನರುಚ್ಚರಿಸಿ, ರಾಮಾಯಣ ಪ್ರಸಂಗಗಳ ಕೊನೆಯಲ್ಲಿ ವೆಂಕಟನ ಮೈರಾವಣನ ಕಾಳಗವಿದ್ದುದೂ, ಅವೆಲ್ಲ ಪ್ರಸಂಗಗಳು ಒಬ್ಬನ ಕೈಬರಹದಲ್ಲಿ ಇದ್ದು ದೂ ಆ ಮೈರಾವಣನ ಕಾಳಗದಲ್ಲಿ ವೆಂಕಟನು ತನ್ನ ತಂದೆಯನ್ನು ಸ್ತುತಿಸಿದ್ದನೆಂಬುದು ಸಹ ಪಾರ್ತಿಸುಬ್ಬನ ಕರ್ತೃತ್ವದಲ್ಲಿ ಸಂಶಯಪಡಲು ತಮಗೆ ಕಾರಣವಾಯಿತು ಎಂಬಂತಹ ಅತ್ಯಂತ ಪ್ರಶಿಥಿಲವಾದ ಮೂಲತರ್ಕದಿಂದ ಪ್ರಸ್ಥಾಪಿತವಾದ ಶ್ರೀ ಕಾರಂತರ ಸುಬ್ಬನ ವಾದದ ಪೂರ್ವಕೋಟಿಯು ಇನ್ನಷ್ಟು ಹಿಡಿಬುಡವಿಲ್ಲದ ತರ್ಕಸರಣಿಯಿಂದ ಮುಂದೆ ಸಾಗಿದೆ. ಇಷ್ಟು ಹಾಸ್ಯಾಸ್ಪದವಾದ ರೀತಿಯಲ್ಲಿ ಮಂಡಿಸಿದ ಕೇವಲ ಆಶ್ರಯಾಸಿದ್ಧವಾದ ಈ ವಿತಂಡಾವಾದವನ್ನು ಸಾಮಾನ್ಯ ವ್ಯಕ್ತಿಯೊಬ್ಬನು ಹೂಡುತ್ತಿದ್ದರೆ ನಗಬಹುದಾಗಿತ್ತು, ಶ್ರೀ ಕಾರಂತರ ಮಾತಾದುದರಿಂದ ಅಳಬೇಕಾಗಿದೆ!

ಹೇಗೂ ಇರಲಿ, ಸತ್ಯಸ್ಥಿತಿಯನ್ನು ಶೋಧಿಸಿ ಜನರ ಗಮನಕ್ಕೆ ತರುವುದು ಕರ್ತವ್ಯ ಎಂಬ ಸದ್ಭಾವನೆಯಿಂದ ಪಾರ್ತಿಸುಬ್ಬನ ಕರ್ತೃತ್ವ, ವ್ಯಕ್ತಿತ್ವ, ಕಾಲ, ದೇಶ, ಶೈಲಿ, ವೈಶಿಷ್ಟ್ಯ ಇತ್ಯಾದಿಗಳನ್ನು ಸಪ್ರಮಾಣವಾದ ಆಧಾರಗಳಿಂದ ಲೇಖನ ಭಾಷಣಗಳ ಮೂಲಕ ಕೆಲಮಟ್ಟಿಗೆ ಈ ಮೊದಲೇ ಪ್ರಕಾಶಪಡಿಸಿರುತ್ತೇನೆ. ರಾಮಾಯಣ ಪ್ರಸಂಗ