ಈ ಪುಟವನ್ನು ಪ್ರಕಟಿಸಲಾಗಿದೆ

ಕಾಲದ ವಿಚಾರ

[ಪಾರ್ತಿಸುಬ್ಬನ ಕಾಲದ ಕುರಿತಾಗಿ ಕುಕ್ಕಿಲರು ತಳೆದಿದ್ದ ಅಂತಿಮ, ಪರಿಷ್ಕೃತ ಅಭಿಪ್ರಾಯ ವನ್ನು, ಅವರು ಸಂಪಾದಿಸಿದ “ಪಾರ್ತಿಸುಬ್ಬನ ಯಕ್ಷಗಾನಗಳು' (ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ. ವಿ. ೧೯೭೫) ಗ್ರಂಥದ ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಸಂಬಂಧಿತ ಭಾಗವನ್ನು ಇಲ್ಲಿ ಉದ್ಧರಿಸಿ ಕೊಟ್ಟಿದೆ. - ಸಂ.]
...ಮೊದಲೇ ಹೇಳಿದಂತೆ ರಾಗ ತಾಳಗಳ ದೃಷ್ಟಿಯಿಂದ ಈತನು ೧೮ನೇ ಶತಮಾನಕ್ಕೆ ಹಿಂದಿನವನಿರಬೇಕು. ಹಾಗೂ ಕಥಕಳಿ ರಾಮಾಯಣಕ್ಕಿಂತ ಈಚಿನವನಿರ ಬೇಕೆಂಬುದರಲ್ಲಿ ಸಂಶಯವಿಲ್ಲ. ಈಗ ನಮಗೆ ದೊರೆತಿರುವ ಎರಡು ಗ್ರಂಥಪ್ರತಿಗಳೂ ಇವನನ್ನು ಆ ಮಧ್ಯದವನೆಂದೇ ತೋರಿಸುತ್ತವೆ. (೧) ಮೈಸೂರು ವಿ.ವಿ.ಕ. ಅಧ್ಯಯನ ಸಂಸ್ಥೆಯ ಲಿಖಿತ ಗ್ರಂಥಭಂಡಾರದಲ್ಲಿರುವ K- ೨೦೧ನೇ 'ಕುಶಲವರ ಕಾಳಗ', ಇದು ಪ್ರತಿಯಾದ ಕಾಲ ಪರಿಧಾವಿ ಸಂ। ಚೈತ್ರ ಬಹುಳ ೧೨ ಭಾರ್ಗವ ವಾರ, ಸ್ವಾಮಿ ಕಣ್ಣು ಪಿಳ್ಳೆಯವರ 'ಎಫಮರಿ'ಯಲ್ಲಿ ತಾ. ೧೭-೪-೧೬೧೨ಕ್ಕೆ ಸರಿಯಾದುದು (೨) ಅದೇ ಸಂಸ್ಥೆಯ K-೨೯೫ನೇ 'ಐರಾವತ', ಪ್ರತಿಯಾದ ಕಾಲ ಪರಿಧಾವಿ ಸಂಸ್ಥೆ ಮಾರ್ಗಶಿರ ಬ. ೭ ಭಾನುವಾರ, 'ಎಫಮರಿ'ಯಲ್ಲಿ ತಾ. ೧-೧೨-೧೬೭೨ಕ್ಕೆ ಸರಿಯಾದ್ದು. ಇದರ ಒಂದು ಗರಿಯಲ್ಲಿ ಬರೆದಿರುವ 'ಗಜಗೌರೀ ಸಂಕಲ್ಪ'ದ ಕಾಲ (ಪು. ೫೯೦ ಟಿ.) ಪಿಂಗಳ ಸಂ ಭಾದ್ರಪದ ಶು. ೩ ಭಾನುವಾರ. ಇದು ತಾ. ೨೪-೮-೧೬೧೭ನೇ ಭಾನುವಾರ ಆಗುವುದು. ಈ ಸಂಕಲ್ಪಮಂತ್ರವನ್ನು ನ್ಯಾಯವಾಗಿ ಕವಿಯೇ ಬರೆದಿರಬೇಕಾದ್ದು ಸಹಜವಾದುದರಿಂದ ಅದು ಆ ಪ್ರಸಂಗರಚನೆಯ ಕಾಲವೆಂದೆಣಿಸಿದರೆ ತಪ್ಪಾಗದು. ಹಾಗೂ ಸಂಭವತಃ ಇದು ಆತನ ಕೊನೆಯ ಕೃತಿಯೆಂದೆಣಿಸಿದಲ್ಲಿ, ಅವನ ಯಕ್ಷಗಾನ ಕವಿತೆಗಳು ಕ್ರಿಸ್ತ ವರ್ಷ ೧೫೯೦ರಿಂದ ೧೬೨೦ರ ವರೆಗೆ ನಡೆದಿವೆ ಎಂದು ಸ್ಕೂಲವಾಗಿ ನಿರ್ಣೈಸಬಹುದು.

ಕಥಕಳಿ ರಾಮಾಯಣ ಪ್ರಬಂಧಗಳ ರಚನೆ ಕೊಲ್ಲಂ ವರ್ಷ ೭೩೮-೭೪೨ (ಕ್ರಿ. ಶ. ೧೫೬೩-೬೭)ರ ಅವಧಿಯಲ್ಲಿ ನಡೆದಿರಬೇಕೆಂದು ಮಲಯಾಳ 'ಭಾಷಾಚರಿತ್ರ' (By P. Govinda Pillai, Revised Edition, National Bookstall, Kottayam, ೧೯೬೫) ಪು. ೧೯೬-೧೯೭ರಲ್ಲಿ ಸಾಧಾರವಾಗಿ ಪ್ರತಿಪಾದಿಸಲಾಗಿದೆ. ಅದರ ಕರ್ತೃ ಕೊಟ್ಟಾರಕರದ ರಾಜನು ಗ್ರಂಥಾರಂಭಕ್ಕೆ, ತಾನು ರೋಹಿಣೀ ನಕ್ಷತ್ರಜನ್ಮನಾದ ವಂಚಿರಾಜ ಕೇರಳವರ್ಮನ ಅಳಿಯನೆಂದೂ ಶಂಕರಕವಿಯ ಶಿಷ್ಯನೆಂದೂ ಹೇಳಿ ಕೊಂಡಿರುವ ಆಧಾರದ ಮೇಲೆ :
ಪಾಪ್ತಾನಂತ ಘನಪ್ರಿಯಃ ಪ್ರಿಯತಮ ಶ್ರೀ ರೋಹಿಣೀ ಜನ್ಮನೋ
ವಂಚಿಕ್ಷಾವರ ವೀರಕೇರಳವಿಭೋ ರಾಜ್ಯ ಸ್ವಸೋ ಸೂನುನಾ
ಶಿಷ್ಯಣ ಪ್ರವರೇಣ ಶಂಕರಕವೇ: ರಾಮಾಯಣಂ ತನ್ಯತೇ (ಪು. ೩ ನೋಡು)
ಮದ್ರಾಸು ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ವ್ಯಾಕರಣ ಸಾಹಿತ್ಯ ಶಿರೋಮಣಿ ಪಿ. ಕೃಷ್ಣನ್ ನಾಯರ್ ಇವರು ತಮ್ಮ 'ಆಟ್ಟಕಥಾ ಅಥವಾ ಕಥಕಳಿ' ಎಂಬ ಗ್ರಂಥದಲ್ಲಿ, ಕೊಲ್ಲಂ ಗಣಪತಿ ದೇವಸ್ಥಾನದಲ್ಲಿರುವ ಶಿಲಾಶಾಸನದ ಪ್ರಕಾರ ಆ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ, ಕೊಲ್ಲಂ ವರ್ಷ ೬೭೨