ಈ ಪುಟವನ್ನು ಪ್ರಕಟಿಸಲಾಗಿದೆ
ನಾಟ್ಯಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು / ೨೨೫

'ಅಂತರ್ಯವನಿಕಾ' ಪ್ರಯೋಗಕ್ರಮದಲ್ಲಿ ಮೊದಲಾಗಿ ಗಾಯಕ ವಾದಕರು ವಾದ್ಯಗಳನ್ನು ತಂದಿಟ್ಟು ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳುತ್ತಾರೆ. ಮೃದಂಗ, ಪಣವ, ದರ್ದರವೆಂಬ ಚರ್ಮವಾದ್ಯಗಳ ವಾದಕರು ರಂಗಕ್ಕೆ ಮುಖಮಾಡಿ (ಮೂಡದಿಕ್ಕು) ಸಾಲಾಗಿ ಕುಳಿತುಕೊಳ್ಳುತ್ತಾರೆ. ಗಾಯಕನು ಉತ್ತರಕ್ಕೆ ಮುಖಮಾಡಿ ಕುಳಿತುಕೊಳ್ಳುತ್ತಾನೆ. ಅವನ ಎಡಪಕ್ಕದಲ್ಲಿ ವೈಣಿಕನೂ ಬಲಪಕ್ಕದಲ್ಲಿ ವೇಣುವಾದಕನೂ ಕೂತಿರುತ್ತಾರೆ. ಗಾಯಕನಿಗೆ ಎದುರಾಗಿ ಗಾಯಕಿ ಕುಳಿತುಕೊಳ್ಳುತ್ತಾಳೆ. ವಾದ್ಯಗಳನ್ನೆಲ್ಲ ಶ್ರುತಿಮಾಡಿ ಆರಂಭದ ಸ್ತುತಿಗೀತೆಗಳನ್ನು ಬಾರಿಸುತ್ತಾರೆ. ಮೊದಲು ಕೇವಲ ವಾದ್ಯಗಳಿಂದಲೂ ಇನ್ನೊಮ್ಮೆ ಹಾಡಿನೊಂದಿಗೆಯೂ ಸ್ತುತಿಗೀತೆ ನಡೆಯುತ್ತದೆ. ಇದಾಯಿತೆಂದರೆ ಇಡೀ ಪರದೆಯನ್ನು ಎತ್ತುತ್ತಾರೆ. ಆಗ ಒಂದು ಗಾಂಧರ್ವ ಸ್ತುತಿಗೀತೆಯನ್ನು ಗಾಯಕನು ಹಾಡುವಾಗ ನಾಟ್ಯಾಚಾರ್ಯನು ರಂಗಮಧ್ಯಕ್ಕೆ ಬಂದು ನಮಸ್ಕರಿಸುತ್ತಾನೆ. ಆಮೇಲೆ ಉತ್ಥಾಪನೀ ಎಂಬ ಧ್ರುವಾಗೀತೆಯನ್ನು ಹಾಡುವಾಗ ಸೂತ್ರಧಾರನೂ ಅವನ ಹಿಂದೆ ಅಂಜಲಿಯಲ್ಲಿ ಹೂಗಳನ್ನು ಹಿಡಿದ ಮೂವರು ನರ್ತಕಿಯರೂ ಅವರ ಹಿಂದೆ ಅಲಂಕರಿಸಿದ ಧ್ವಜವನ್ನು ಹಿಡಿದುಕೊಂಡು ಇಬ್ಬರು ಪರಿಪಾರ್ಶ್ವಕರೂ ಒಟ್ಟಿಗೆ ಪ್ರವೇಶಿಸಿ ನೃತ್ಯವಿಧಿಪ್ರಕಾರ ಲೆಕ್ಕಾಚಾರದ ಹಜ್ಜೆಗಳನ್ನಿಡುತ್ತಾ, ದಿಗಂದನೆ ಮಾಡುತ್ತಾ


೩೭. ಪ್ರಯೋಗಮಿದಾನೀಂ ವಕ್ಷಾಮಃ | ತತ್ರೋಪವಿಷ್ಟೇ ಪ್ರಾಣ್ಮುಖೇ ರಂಗೇ.... ತತ್ರ
ಪೂರ್ವೋಕ್ತಯೋರ್ನೇಪಥ್ಯಗೃಹದ್ವಾರಯೋರ್ಮಧ್ಯೆ ರಂಗಾಭಿಮುಖೋ ಮೌ
ರಜಿಕಸ್ತ್ರಪಾಣವಿಕದರ್ದರಿಕೌ ವಾಮತಃ, ತತ್ರೋತ್ತರಾಭಿಮುಖ ಗಾಯಕಃ,
ಗಾಯಕಸ್ಯ ತು ವಾಮಪಾರ್ಶ್ವ ವೈಣಿಕಃ, ವೈಣಿಕಸ್ಯ ದಕ್ಷಿಣೇನ ವಂಶವಾದ,
ಗಾತುರಭಿ ಮುಖಂಗಾಯಿಕಾ- ಇತಿ ಕುತಪವಿನ್ಯಾಸಃ ǁ೨೧೫ǁ

(ನಾ. ಶಾ. ಅ ೩೪)

೩೮. ಪೂರ್ವಂ ಹಿ ಭಾಂಡವಾದೇನ ಸಿದ್ದಿರುತ್ಪಾದನೀಯಾ | ಸ್ತ್ರೀಬಾಲ

ಮೂರ್ಖಾವಕೀರ್ಣ

ಚ ರಂಗೇ ಕುತೂಹಲಜನನ ಸಮರ್ಥ೦ ವಾದ್ಯಮುಪವನ್ನಂ ಭವತಿǁ೨೨೨ǁ

(ನಾ. ಶಾ. ಅ ೩೪)

೩೯. ಏತಾನಿ ಚ ಬಹಿರ್ಗೀತಾಂತರ್ಯವನಿಕಾಗತೈಃ
ಪ್ರಯೋಕ್ಷಭಿಃ ಪ್ರಯೋಜ್ಞಾನಿ ತಂತ್ರೀಭಾಂಡಕೃತಾನಿ ತುǁ೧೧ǁ
ವಿಘಾಟ್ಯ ವೈ ಯವನಿಕಾಂ ನೃತ್ತವಾದಕೃತಾನಿಚ
ಗೀತಾನಾಂ ಮದ್ರಕಾದೀನಾಮೇಕಂ ಯೋಜ್ಯಂ ತು ಗೀತಕಂ
ವರ್ಧಮಾನಮಥಾಪೀಹ ತಾಂಡವಂ ಯತ್ರ ಯುಜ್ಯತೇǁ೧೩ǁ

(ನಾ. ಶಾ. ಅ ೩೪)

೪೦. ಗೀತಕಾಂತೇ ತತಶ್ಚಾಪಿ ಕಾರ್ಯಾ ಹುತ್ಥಾಪನೀಧ್ರುವಾ
ಕಾರ್ಯ ಮಧ್ಯಲಯಂ ತಣ್ಣೆಃ ಸೂತ್ರಧಾರ ಪ್ರವೇಶನಂǁ೬೮ǁ