ಈ ಪುಟವನ್ನು ಪ್ರಕಟಿಸಲಾಗಿದೆ

೨೨೬ / ಕುಕ್ಕಿಲ ಸಂಪುಟ

ರಂಗಭೂಮಿಯಲ್ಲಿ ಪ್ರದಕ್ಷಿಣೆ ಸುತ್ತತ್ತಾರೆ.೪೧ ಹೀಗೆ ಮೂರು ಪ್ರದಕ್ಷಿಣೆಗಳನ್ನು ಮಾಡಿ ಸೂತ್ರಧಾರನು ಮಂತ್ರಪುರಸ್ಸರವಾಗಿ ಪಾರಿಪಾರ್ಶ್ವಕರ ಕೈಯಿಂದ ಧ್ವಜವನ್ನು ಸ್ವೀಕರಿಸು ತಾನೆ. ಪುನಃ ಲಾಸ್ಯಗತಿಯಲ್ಲಿ ದಿಗ್ವಂದನೆ ಮಾಡಿ ನಾಂದೀ ಶ್ಲೋಕಗಳನ್ನು ಪಠಿಸುತ್ತಾನೆ.೪೨ ಆಗ ಮಧ್ಯಮಧ್ಯದಲ್ಲಿ ಪಾರಿರ್ಪಾಕರು 'ಹಾಗೇ ಆಗಲಿ, ನಾಟ್ಯಕ್ಕೆ ಜಯವಾಗಲಿ, ದೇವತೆಗಳಿಗೆ ಸಂತೋಷವಾಗಲಿ, ಲೋಕಕ್ಕೆ ಶುಭವಾಗಲಿ, ರಾಜನಿಗೆ ಜಯವಾಗಲಿ, ರಾಜ್ಯಸಂಪತ್ತು ವೃದ್ಧಿಯಾಗಲಿ, ನಾಟಕ ಆಡಿಸುವವರಿಗೂ, ಅಡು ವವರಿಗೂ ನಾಟಕವನ್ನು ರಚಿಸಿದ ಕವಿಗೂ ನಾಟ್ಯಪ್ರಯೋಗಕ್ಕೂ ಶುಭವಾಗಲಿ' ಎಂಬಂತೆ, ನಾಂದೀಶ್ಲೋಕಗಳಲ್ಲಿ ಹೇಳಿದ ಅರ್ಥವನ್ನು ಮಾತುಗಳಿಂದ ಘೋಷಿಸುತ್ತಿರುತ್ತಾರೆ.೪೩ ಇದಾದ ಮೇಲೆ ಸೂತ್ರಧಾರನು ಧ್ವಜವನ್ನು ತನ್ನ ನಾಭಿಯಲ್ಲಿ ನೆಟ್ಟು, ಸಮತೋಲ ವಾಗಿ೪೪ ನಿಲ್ಲಿಸಿ ಹಿಂದಕ್ಕೂ ಮುಂದಕ್ಕೂ ನಾಟ್ಯಮಾಡುತ್ತಾನೆ. ಆಮೇಲೆ ಅದನ್ನು ಪುನಃ ಪಾರಿಪಾರ್ಶ್ವಕರ ಕೈಯಲ್ಲಿ ಕೊಟ್ಟು ತಾನು ತಾಂಡವ ನರ್ತನಕ್ಕೆ ತೊಡಗುತ್ತಾನೆ.೪೫ ಆಗ ಸ್ತ್ರೀಯರ ನರ್ತನವೂ ಪ್ರಾರಂಭವಾಗುತ್ತದೆ. ಭಾಗವತನು ಆಸಾರಿತ ವರ್ಧಮಾನಾದಿ


೪೧. ಪುಷ್ಪಾಂಜಲೀಃ ಸಮಾಧಾಯ ರಕ್ಷಾಮಂಗಲ ಸಂಸ್ಕೃತಾಃ
ಶುದ್ದವರ್ಣಾ: ಸುಮನಸಃ ತಥಾ ಚಾದ್ಭುತದೃಷ್ಟಯಃ
ಸ್ಥಾನಂ ತು ವೈಷ್ಣವಂ ಕೃತ್ವಾ ಪ್ರವಿಶೇಯುಃ ಸಮಂತ್ರಯಃ
ಶೃಂಗಾರಜರ್ಝರಧರೌ ಭವೇತಾಂ ಪಾರಿಪಾರ್ಶ್ವಕೌǁ೭೦ǁ
(ನಾ. ಶಾ. ಅ ೫)
೪೨. ಪ್ರಯತ್ನಕೃತಶೌಚೇನ ಸೂತ್ರಧಾರೇಣ ಯತ್ನತಃ
ಸನ್ನಿಪಾತಸಮಗ್ರಾಹ್ಮ ಜರ್ಝರೋವಿಘ್ನ ಜರ್ಜರ:
ತತೋಭಿವಾದನಂ ಕುರ್ಯಾದೇವತಾನಾಂ ಯಥಾದಿಶಂ
ಸೂತ್ರಧಾರಃ ಪಠೇನ್ನಾಂದೀಂ ಮಧ್ಯಮಂ ಸ್ವರಮಾಶ್ರಿತಃ
(ಮಧ್ಯಮಸ್ವರೇಣ, ನಾತ್ಯುಚ್ಚೇನನಾತಿನೀಚೇನ ಮಧ್ಯಮಸ್ಥಾನೇನೇತ್ಯರ್ಥಃ)
ನಮೋಸ್ತುದೇವದೇವೇಭ್ಯಃ ದ್ವಿಜಾತಿಭ್ಯಃ ಶುಭಂ ತಥಾǁ೧೦೭ǁ
.........................................
ರಾಜ್ಯಃ ಪ್ರವರ್ಧತಾಂಚೆವ ರಂಗಶ್ಚಾಯಂ ಸಮೃದ್ಧತಾಂǁ೧೦೯ǁ
ಪ್ರೇಕ್ಷಾಕರ್ತುರ್ಮಹಾನ್‌ಧರ್ಮೋ ಭವತು ಬ್ರಹ್ಮಭಾವಿತಃ
ಕಾವ್ಯ ಕರ್ತುರ್ಯಶಶ್ಚಾಸ್ತು ಧರ್ಮಶ್ಚಾಪಿ ಪ್ರವರ್ಧತಾಂǁ೧೧೦ǁ
(ನಾ. ಶಾ. ಅ ೫)
೪೩. ನಾಂದೀಪದಾಂತರೇಶ್ವೇಷು ಏವಮತಿ ನಿತ್ಯಶಃ
ವಂದೇತಾಂ ಸಮ್ಯಗುಕ್ತಾಭಿರ್ಗೀಭಿ್ರಸ್‌ ಪಾರಿಪಾರ್ಶ್ವಕೌǁ೧೧೧ǁ
(ನಾ. ಶಾ. ಅ ೫)
೪೪. ನಾಭಿಪ್ರದೇಶೇ ವಿನ್ಯಸ್ಯ ಜರ್ಜರಂ ತು ಲಯಾಧೃತಂ
ವಾಮ ಪಲ್ಲವ ಹಸ್ತನ ಪಾದೈಸ್ತಾಲಾಂತರಸ್ಥಿತೈ
ಗಚ್ಚೇತ್ ಪಂಚಪದೀಂ ಚೈವ ಸಮೀಲಾಸಾಂಗಚೇಷ್ಟಿತೈಃ ǁǁ
(ನಾ. ಶಾ. ಅ ೫)
೪೫. ಪಾರಿಪಾರ್ಶ್ವಕರಯೋರ್ಹ ದತ್ವಾ ಜರ್ಜರಮುತ್ತಮಂ
ಮಹಾಚಾರೀಂ ತತವ ಪ್ರಯುಂಜೀತ ಯಥಾವಿಧಿǁ೧೨೭ǁ