ಈ ಪುಟವನ್ನು ಪ್ರಕಟಿಸಲಾಗಿದೆ
ನಾಟ್ಯಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು / ೨೩೧

ದಲ್ಲಿಯೂ ಇತ್ತೀಚಿನವರೆಗೆ 'ಚಾಕ್ಕಿಯಾರಕ್ಕೂತ್ತು' ಎಂಬ ಹೆಸರಿನಿಂದ ನಿಯತವಾಗಿ ನಡೆಯುತ್ತಿತ್ತೆಂಬುದನ್ನು ಕೇರಳದ ಚರಿತ್ರೆಯಿಂದ ತಿಳಿಯಬಹುದು. ಪ್ರತಿ ದೇವಾಲಯ ದಲ್ಲಿಯೂ ಇದಕ್ಕಾಗಿಯೇ ನಿರ್ಮಿಸಲ್ಪಟ್ಟಿರುವ ರಂಗಮಂಟಪಗಳನ್ನು ಅಲ್ಲಿ (ಕೂತ್ತಂಬಿಲಂ) ನೋಡಬಹುದು. ಕೇರಳದಲ್ಲಿರುವಷ್ಟು ಹಾಗೂ ಅಲ್ಲಿ ಇದುವರೆಗೆ ದೊರೆತಿರುವಷ್ಟು ಭಾಸಾದಿ ಪ್ರಾಚೀನ ಕವಿಗಳ ಸಂಸ್ಕೃತ ನಾಟಕಗ್ರಂಥಗಳೂ ನಾಟ್ಯ ಶಾಸ್ತ್ರದ ಪ್ರತಿಗಳೂ ಇತರತ್ರ ದೊರೆತಿಲ್ಲವೆಂದು ಸಂಶೋಧಕರೇ ಹೇಳುತ್ತಾರೆ. ಈಗ ಸಮಗ್ರವಾಗಿ ಪ್ರಕಾಶಕ್ಕೆ ಬಂದಿರುವ ಅಭಿನವಗುಪ್ತನ ನಾಟ್ಯಶಾಸ್ತ್ರವ್ಯಾಖ್ಯಾನವಾದರೂ ಕೇರಳದಲ್ಲೇ ದೊರೆತಿರುವುದು. ಸಂಸ್ಕೃತ ನಾಟಕಪ್ರಯೋಗದ ಆಂಶೋದ್ಧಾರದಿಂದಲೇ ಕೇರಳದ 'ಕಥಕಳಿ' ರೂಪಿತವಾಗಿರುವುದು. ದಕ್ಷಿಣ ಕನ್ನಡದಲ್ಲಿ ಪ್ರಸಿದ್ಧವಾಗಿರುವ ಯಕ್ಷಗಾನ ದೃಶ್ಯಪ್ರಯೋಗಕ್ಕೆ ಶಾಸ್ತ್ರೀಯ ಸಂಸ್ಕಾರ ದೊರೆತಿರುವುದೂ ಕೇರಳದಿಂದಲೇ ಆಗಿದೆ. ಆದುದರಿಂದಲೇ ಅದು 'ತಂಕಮಟ್ಟು' ಎಂದು ಹೆಸರಾಗಿರುವುದು. ಕೇರಳಕ್ಕೆ 'ತಂಕ'... ಎಂಬ ವ್ಯವಹಾರವು ದಕ್ಷಿಣ ಕನ್ನಡದಲ್ಲಿ ಚಿರಪ್ರಸಿದ್ಧವಾದುದೇ. ಈ 'ತೆಂಕಮಟ್ಟಿ'ನ ಪ್ರಯೋಗಸಂಪ್ರದಾಯವು ನಾಟ್ಯಶಾಸ್ರೋಕ್ತ ಲಕ್ಷಣಗಳಿಗೆ ಅದೆಷ್ಟು ಸಮನ್ವಯವಾಗಿದೆ ಎಂಬುದಕ್ಕೆ ಈ ಮೊದಲು ನಾನು ಬರೆದಿರುವ ಲೇಖನಗಳಲ್ಲಿ ವಿವೇಚಿಸಿದ್ದಾಗಿದೆ.೫೨






೫೨. ನೋಡಿ : ೧೫ನೇ ವಾರ್ಷಿಕೋತ್ಸವದ ಪ್ರಕಾಶಿಕೆ- ಯಕ್ಷಗಾನ ಕಲಾಕ್ಷೇತ್ರ. (ರಿ.), ಜಂಗಮರ ಮಠ, ಉಡುಪಿ, ದ. ಕ.






(ಮಾನವಿಕ ಕರ್ನಾಟಕ ಸಂಪುಟ ೧, ಸಂಚಿಕೆ ೨, ೧೯೭೧)