'ಯವನ' - 'ಯವನಿಕಾ'
'ಸೊನ್ನೆಯಿಂದ ಸಂಸ್ಥಾನ ಮುಳುಗಿತು' ಎಂಬ ಗಾದೆಯಂತೆ, ನಮ್ಮ ಪುರಾತನ
ಗ್ರಂಥಗಳಲ್ಲಿರುವ 'ಯವನ' ಎಂಬ ಶಬ್ದದಿಂದಲಾಗಿ, ಸಂಸ್ಕೃತ ವಾಹ್ಮಯ ಚರಿತ್ರೆಯಲ್ಲಿ
ಹಿ೦ದಿನ ಕೆಲವು ಶತಮಾನಗಳೇ ಹಾರಿಹೋದಂತಾಗಿದೆ. ಅದು ಹೇಗಾಯಿತೆಂದರೆ :
ನಮ್ಮಲ್ಲಿರುವ ಸಂಸ್ಕೃತ ಗ್ರಂಥಗಳಲ್ಲಿ ವಿಶೇಷ ಆಸಕ್ತಿ ವಹಿಸಿ ಅವುಗಳ ಕಾಲ
ಸಂಶೋಧನೆಗೆ ತೊಡಗಿದ ವಿಲ್ಸನ್, ವೆಬರ್, ಮ್ಯಾಕ್ಸ್‌ಮುಲ್ಲರ್ ಪ್ರಕೃತಿ ಪಾಶ್ಚಾತ್ಯ
ವಿದ್ವಾಂಸರು, ನಮ್ಮ ಪುರಾತನ ಕಾವ್ಯ ನಾಟಕ ಪುರಾಣಾದಿಗಳಲ್ಲೆಲ್ಲ ಭಾರತ ವರ್ಷದ
ಹೊರಗಿನ ಒಂದು ಜನಾಂಗಕ್ಕೆ 'ಯವನರು' ಎಂಬ ಹೆಸರಿರುವುದನ್ನು ಕಂಡು, ಆ
ಯವನರೆಂದರೆ ಗ್ರೀಕರೇ ಸರಿ ಎಂದು ನಿರ್ಣೈಸಿದರು. ಹೀಗೆ ನಿರ್ಣೈಸುವುದಕ್ಕೆ ಅವರಿಗೆ
ಆಧಾರವೆಂದರೆ ಅಶೋಕನ ಶಾಸನವೊಂದರಲ್ಲಿ ಆಂಟಿಯೋಕಸ್ (Antiocus) ಎಂಬ
ಗ್ರೀಕ್ ರಾಜನನ್ನು ಅಂತಿಯೋಕೋ ನಾಮ ಯೋಣರಾಜಾ ಎಂದು ಕರೆದಿರುತ್ತದೆ
ಎಂಬುದೇ ಆಗಿದೆ. ಮೌಲ್ಯರ ಕಾಲದಲ್ಲಿ ಅಲೆಕ್ಸಾಂಡರ್ ಮೊದಲಾದ ಗ್ರೀಕ್ ರಾಜರು
ಪರ್ಶಿಯಾದ ಬಹುಭಾಗವನ್ನು ಗೆದ್ದುದಲ್ಲದೆ ಅಲ್ಲಿಂದ ಮುಂದೊತ್ತಿ ಬಂದು ಭರತ
ಖಂಡದಲ್ಲಿಯೂ ರಾಜ್ಯ ಹಿಡಿದಿದ್ದ ಸಂಗತಿಯು ಚರಿತ್ರೆಯಲ್ಲಿ ಪ್ರಸಿದ್ಧವಾಗಿರುವುದಷ್ಟೆ.
ಗ್ರೀಸ್ ದೇಶದ ಒಂದು ಪ್ರಾಂತ್ಯಕ್ಕೆ 'ಅಯೋನಿಯ' (Gr. ion) ಎಂಬ ಹೆಸರಿದ್ದುದ
ರಿಂದ, ಪ್ರಾಕೃತ ಭಾಷೆಯಲ್ಲಿರುವ ಶಾಸನದಲ್ಲಿ ಅದು 'ಯೋಣ' ಎಂಬ ರೂಪಾಂತರ
ವನ್ನು ಪಡೆದಿದೆ ಎಂದೂ, ಆ 'ಯೋಣ'ವೇ ನಮ್ಮ ಪುರಾಣಾದಿಗಳಲ್ಲಿ ಸಂಸ್ಕೃತೀಕೃತವಾಗಿ
'ಯವನ' ಎಂದಾಗಿದೆ ಎಂದೂ ತೀರ್ಮಾನಿಸಿರುತ್ತಾರೆ. ಅಷ್ಟೇ ಅಲ್ಲದೆ ನಾಟ್ಯಶಾಸ್ತ್ರದಲ್ಲಿ
ಹಾಗೂ ಸಂಸ್ಕೃತನಾಟಕಗಳಲ್ಲಿ ಪರದೆಗೆ 'ಜವನಿಕಾ' ಎಂಬ ಹೆಸರೂ ಇದೇ ಸಂಬಂಧ
ದಿಂದ ಬಂದುದಾಗಿದೆ ಎಂದು ಒಮ್ಮಿಂದೊಮ್ಮೆಗೇ ನಿರ್ಣಯಿಸಿ, ಗ್ರೀಕರಲ್ಲಿ ಆ ಮೊದಲೇ
ನಾಟಕಪ್ರಯೋಗವು ಪ್ರಸಿದ್ಧವಾಗಿದ್ದುದರಿಂದ, ನಮ್ಮಲ್ಲಿಗೂ ರಂಗಸಂಪ್ರದಾಯ
ವೆಂಬುದು ಅವರಿಂದಲೇ ಬಂದುದಿರಬೇಕೆಂದೂ ಕಲ್ಪಿಸಿರುತ್ತಾರೆ. ಹಾಗೂ ಶಾಕುಂತಲಾದಿ
ಕೆಲವು ನಾಟಕಗಳಲ್ಲಿ ನಾಯಕನಿಗೆ ಆಯುಧಾದಿಗಳನ್ನು ತಂದುಕೊಡುವ ಸ್ತ್ರೀಪಾತ್ರಕ್ಕೆ
'ಯವನೀ' ಎಂಬ ಹೆಸರಿರುವುದನ್ನೂ ಗ್ರೀಕರ ಋಣಕ್ಕೆ ಸಮರ್ಥನೆಯೆಂದೆಣಿಸುತ್ತಾರೆ.
ಹೀಗೆ 'ಯವನ' ಸಂಬಂಧದ ಪದಗಳಿರುವ ಗ್ರಂಥಗಳೇನಿವೆಯೋ ಅವೆಲ್ಲ ನಮಗೆ ಗ್ರೀಕರ
ನಿಕಟ ಸಂಪರ್ಕವಾದ ಮೇಲಿನ, ಎಂದರೆ ಅಲೆಕ್ಸಾಂಡರನು ನಮ್ಮ ದೇಶಕ್ಕೆ ದಂಡೆತ್ತಿ
ಬಂದ ಮೇಲಿನ ರಚನೆಗಳಾಗಿರಬೇಕೆಂದೆಣಿಸಿ, ಅದರ ಮೇಲೆ ನಮ್ಮ ಕಾವ್ಯ ಪುರಾಣಾದಿ
ಗಳ ಕಾಲನಿರ್ಣಯವನ್ನು ಮಾಡಿರುತ್ತಾರೆ.
ಸಂಸ್ಕೃತಿ, ಕಲೆ ಎಂಬುದು ಹುಟ್ಟಿದ್ದೇ ಗ್ರೀಸಿನಲ್ಲಿ, ಇಡೀ ಪ್ರಪಂಚವೇ ಗ್ರೀಕರಿಗೆ
ಹಾಗೂ ರೋಮನರಿಗೆ ಆ ಮಟ್ಟಿಗೆ ಋಣಿಯಾಗಿದೆ ಎಂಬ ಪೂರ್ವಾಭಿನಿವೇಶವುಳ್ಳ
ಪಾಶ್ಚಾತ್ಯ ಪಂಡಿತರ ಈ ಅಭಿಪ್ರಾಯವನ್ನು ನಮ್ಮಲ್ಲಿಯ ಪ್ರಾಚ್ಯವಿದ್ಯಾವಿಮರ್ಶಕರೂ
ಅನುಮನ್ನಿಸುತ್ತ ಬಂದಿರುವಂತೆ ಕಾಣುತ್ತದೆ. ಆದರೆ ನಮ್ಮ ಪುರಾಣಾದಿಗಳನ್ನು
ಪರಿಶೀಲಿಸಿದ್ದಾದರೆ ಅಲ್ಲಿ ಈ ಯವನ ಪದವು ಗ್ರೀಕ್ ಜನಾಂಗವನ್ನು ಉದ್ದೇಶಿಸಿ
ಪ್ರಯೋಗಿಸಲ್ಪಟ್ಟಿರುವಂತೆ ಕಾಣುವುದಿಲ್ಲ. ಆದುದರಿಂದ, ಗ್ರೀಕ್ ರಾಜನನ್ನು 'ಯೋಣ