ಗ್ರಾಮ್ಯಧರ್ಮಪ್ರವೃತ್ತೇ ತು ಕಾಮಲೋಭವಶಂಗತೇ।
ಈರ್ಷ್ಯಾಕ್ರೋಧಾಭಿಸಂಮೂಡೇ ಲೋಕೇ ಸುಖಿತದುಃಖಿತೇ ॥
ದೇವದಾನವಗಂಧರ್ವಯಕ್ಷ ರಕ್ಷ ಮಹೋರಗೈ ।
ಜಂಬೂದ್ವೀಪೇ ಸಮಾಕ್ರಾಂತೇ ಲೋಕಪಾಲಪ್ರತಿಷ್ಠಿತೇ॥
ಹಿಂದೆ ಹೇಳಿರುವಂತೆ ವಿಶ್ವವಸು ಮೊದಲಾದ ದಾನವರು ಭೂಲೋಕವನ್ನು
ಆಕ್ರಮಿಸಿದ್ದ ತ್ರೇತಾಯುಗದಲ್ಲಿ ಆ ಮೊದಲ ಕಾಲದಲ್ಲಿ ಪ್ರಯೋಗಿಸಿದ್ದ ಆರಭಟೀ
ಪ್ರಾಯವಾದ ಯುದ್ಧ ಪ್ರಕರಣಗಳಾದರೂ ನಮ್ಮ ಬಯಲಾಟದಂತೆಯೇ ಬೇಕಾದಲ್ಲಿ
ರಂಗಸ್ಥಳವನ್ನು ತತ್ಕಾಲ ನಿರ್ಮಿಸಿ ನಾಲ್ಕು ಕಂಬಗಳನ್ನು ನೆಟ್ಟು ಮಾಡಿದ ಚಪ್ಪರದಡಿ
ಯಲ್ಲಿ ಪ್ರಯೋಗಿಸಲ್ಪಡುತ್ತಿದ್ದವೆಂಬುದು ನಾಟ್ಯಶಾಸ್ತ್ರದಿಂದ ತಿಳಿಯಬಹುದಾಗಿದೆ.
ಭರತನು ಹೇಳುವ 'ಬಾಹ್ಯಪ್ರಯೋಗ', 'ಅಭ್ಯಂತರ ಪ್ರಯೋಗ' ಎಂಬ ಎರಡು
ವಿಧಾನಗಳಲ್ಲಿ ಅಭ್ಯಂತರ ಪ್ರಯೋಗವೆಂಬುದು ಪ್ರೇಕ್ಷಕರಿಗೆ ಸುಖಾಸನಗಳಲ್ಲಿ ಕುಳಿತು
ನೋಡಲು ಅನುಕೂಲತೆಗಳನ್ನು ಕಲ್ಪಿಸಿ ಹೊರಗಿನಿಂದ ದುಷ್ಟರು ವಿಘ್ನು ಉಂಟುಮಾಡ
ದಂತ ಸುತ್ತಲೂ ಭದ್ರವಾದ ಗೋಡೆ ಆವರಣಗಳುಳ್ಳ ಪ್ರಮಾಣಬದ್ಧವಾದ ನಾಟ್ಯ
ಮಂದಿರ ಅಥವಾ ನಾಟ್ಯಶಾಲೆಯೊಳಗೆ ನಾಲ್ಕು ಅಡಿಗಳಷ್ಟು ಎತ್ತರಿಸಿ ಮಣ್ಣಿನಿಂದ
ಮಟ್ಟಸ ಮಾಡಿ ನಿರ್ಮಿಸಿದ ರಂಗಸ್ಥಳದಲ್ಲಿ ನಡೆಯುವಂಥದ್ದು, ಬಾಹ್ಯಪ್ರಯೋಗ
ವೆಂಬುದಾದರೆ, ಆಡಿಸುವವರ ಅಪೇಕ್ಷೆ ಪ್ರಕಾರ ಎಲ್ಲಿ ಬೇಕೆಂದರಲ್ಲಿ, ನಮ್ಮ ಬಯಲಾಟ
ದಂತಹ ಸಾದಾ ರಂಗಸ್ಥಳದಲ್ಲಿ ಪ್ರಯೋಗಿಸಲ್ಪಡುವಂಥಾದ್ದು. ಹಿಂದೆ ಹೇಳಿದ ಯುದ್ಧ
ನಿಯುದ್ಧ ರೂಪಕಗಳು 'ಬಾಹ್ಯಪ್ರಯೋಗ' ಎಂದರೆ ಬಯಲಾಟವಾಗಿಯೇ ಪ್ರದರ್ಶನಕ್ಕೆ
ಬಂದಂಥವು, ರೂಪಕ ಉಪರೂಪಕಗಳೆಂದು ಕರೆಯಲ್ಪಟ್ಟ, ಆ ದೃಶ್ಯಕಾವ್ಯಗಳು
ಯಕ್ಷಗಾನ ಕೃತಿಗಳಂತೆ ಪದ್ಯಾತ್ಮಕವಾಗಿಯೇ ಇರುತ್ತಿದ್ದವೆಂದೂ, ಪಾತ್ರಗಳು ಭಾರತೀ
ವೃತ್ತಿಯಲ್ಲಿ ಎಂದರೆ ಸ್ವಂತ ಮಾತುಗಳಿಂದ ಸಂಭಾಷಣೆ ಮಾಡುವುದಾಗಿತ್ತೆಂದೂ
ಶಾಸ್ತ್ರಗ್ರಂಥಗಳೇ ಹೇಳುತ್ತವೆ. ಅಲ್ಲದೆ ಅವು ಆ ಕಾಲದಲ್ಲಿ ಭರತಖಂಡದ ಬೇರೆ ಬೇರೆ
ಪ್ರಾಂತಗಳಲ್ಲಿ ವ್ಯವಹಾರದಲ್ಲಿದ್ದ ಜನಸಾಮಾನ್ಯರ ಆಡುಮಾತಿನಲ್ಲಿ ರಚಿಸಿದ
ಗೇಯಕಾವ್ಯಗಳು ಆಗಿದ್ದವು. ಭರತನು ಮುಂದಿನ ಕಾಲದಲ್ಲಿ ಸಹ ಆಯಾ ದೇಶದ
ಜನಸಾಮಾನ್ಯರ ಭಾಷೆಯಲ್ಲೇ ನಾಟ್ಯಕೃತಿಗಳನ್ನು (ಜಾತಿ ಭಾಷೆಗಳಲ್ಲಿ) ರಚಿಸಿಕೊಳ್ಳ
ಬೇಕೆಂದು ಸ್ಪಷ್ಟ ಹೇಳಿರುತ್ತಾನೆ. ಅಥವಾ ಛಂದತಃ ಕಾರ್ಯಾ ದೇಶಭಾಷಾ
ಪ್ರಯೋಕೃಭಿಃ”। (ಭ. ನಾ. ೧೮-೩೮) ಅಲ್ಲದೆ ಅವು ಸಾಮಾನ್ಯರಿಗೆ ಸುಲಭವಾಗಿ
ಅರ್ಥವಾಗುವಂತೆ ಸರಳವಾದ ರಚನೆಗಳಾಗಿರಬೇಕೆಂದೂ ಹೇಳುತ್ತಾನೆ :
ಉದಾ :
ಮೃದುಲಲಿತಪದಾರ್ಥಂ ಗೂಢಶಬ್ದಾರ್ಥಹೀನಂ
ಬಹುಜನಸುಖಬೋಧ್ಯಂ ಋದ್ಧಿ ಮನ್ನಯೋಗ್ಯಂ ।
ಬಹುರಸಕೃತಮಾರ್ಗ ಸಂಧಿಸಂಧಾನಯುಕ್ತಂ
ಭವತಿ ಜಗತಿ ಯೋಗ್ಯಂ ರೂಪಕಂ ಪ್ರೇಕ್ಷಕಾಣಾಂ ।।
ಗೀತೇ ಪ್ರಯತ್ನ: ಪ್ರಥಮಸ್ತು ಕಾರ್ಯ
ಶಯ್ಯಾಂ ತು ನಾಟ್ಯಸ್ಯ ವದಂತಿ ಗೀತಂ ।
ಗೀತೇಪಿ ವಾದ್ಯಪಿ ಚ ಸಂಪ್ರಯುಕ್ತ
ನಾಟ್ಯಪ್ರಯೋಗೋ ನ ವಿಪತ್ತಿ ಮೇತಿ ।।
ಸುಶಿಷ್ಟಸಂಧಿಯೋಗಂ ಚ ಸುಪ್ರಯೋಗಂ ಸುಖಾಶ್ರಯಂ।}}