ಈ ಪುಟವನ್ನು ಪ್ರಕಟಿಸಲಾಗಿದೆ

೮ | ಕುಕ್ಕಿಲ ಸಂಪುಟ

ತತೋ ಹಿಮವತಃ ಪೃಷ್ಟೇ ನಾನಾನಗಸಮಾವೃತೇ ।
ಬಹುಭೂತಗಣಾಕೀರ್ಣೇ ರಮ್ಯಕಂದರನಿರ್ಝರೇ ।।
ಪೂರ್ವರಂಗೇ ಕೃತೇ ಪೂರ್ವಂ ತಾಯಂ ದ್ವಿಜಸತ್ತಮಾಃ ।
ತಥಾ ತ್ರಿಪುರದಾಹಶ್ಚ ಡಿಮಸಂಜ್ಞ ಪ್ರಯೋಜಿತಃ ।।
ತತೋ ಭೂತಗಣಾ ದೃಷ್ಟಾಃ ಕರ್ಮಭಾವಾನುಕೀರ್ತನಾತ್ । ಎ೦ದಿದ.

ಇವಲ್ಲದೆ ನಾಟ್ಯಶಾಸ್ತ್ರದ ದಶರೂಪಕವಿಧಾನವೆಂಬ ಅಧ್ಯಾಯದಲ್ಲಿ ಹೇಳಿದ ಇನ್ನುಹಲವು ಪ್ರಯೋಗಗಳು, ಶೃಂಗಾರರಸವರ್ಜಿತವಾಗಿ ಭಾರತೀ, ಸಾತ್ವತೀ, ಆರಭಟೀ ವೃತ್ತಿ ಗಳು ಪ್ರಧಾನವಾದ ಯುದ್ಧ ಪ್ರಸಂಗಗಳೇ ಆಗಿವೆ. ಭಾರತವರ್ಷದಲ್ಲಿ ಎಂದರೆ ನಮ್ಮ ಭರತಭೂಮಿಯಲ್ಲಿ ಯುದ್ಧ ಸಂದರ್ಭ ವಿಶಿಷ್ಟವಾದ ದೃಶ್ಯಕಾವ್ಯಗಳೇ ಪ್ರಶಸ್ತವಾದು ವೆಂದು ನಾಟ್ಯಶಾಸ್ತ್ರದಲ್ಲಿ ಭರತನೇ ಹೇಳಿರುವುದನ್ನು ಕೇಳಿ :

ಉತ್‌ಸೃಷ್ಟಿಕಾಂಕೋ ವ್ಯಾಯೋಗೋ ಡಿಮಃ ಪ್ರಹಸನಂ ತಥಾ ।
ಕೈಶಿಕೀವೃತ್ತಿಹೀನಾನಿ ರೂಪಾಹ್ಯತಾನಿ ಕಾರಯೇತ್ ।। (ಅ - ೨೦೩, ೮)
ಯದ್ದಿವ್ಯನಾಯಕಕೃತಂ ದೃಶ್ಯಂ ಸಂಗ್ರಾಮಬಂಧವಧಯುಕ್ತಂ ।
ತದ್ಭಾರತೇ ತು ವರ್ಷ ಕರ್ತವ್ಯಂ ಕಾವ್ಯಬಂಧೇಷು ।। (ಅ-೨೦ ಶ್ಲೋಕ ೧೦೧)

ಇಂದ್ರ, ವಿಷ್ಣು, ರಾಮ, ಕೃಷ್ಣ, ನರಸಿಂಹಾದಿ ಅವತಾರಪುರುಷರೇ ದಿವ್ಯ ನಾಯಕರು. ಅವರ ಕರ್ತೃತ್ವದಲ್ಲಿ ನಡೆದ ಸಂಗ್ರಾಮಬಂಧವಧೆಗಳೆಂದರೆ ರಾಮಾಯಣ, ಮಹಾಭಾರತ, ಭಾಗವತಾದಿ ಪುರಾಣ ಇತಿಹಾಸಗಳಲ್ಲಿ ಇರುವಂಥದ್ದೇ. ನಾಟ್ಯಶಾಸ್ತ್ರ ವ್ಯಾಖ್ಯಾನದಲ್ಲಿ ಅಭಿನವಗುಪ್ತಾಚಾರ್ಯನು 'ರಾಘವ ವಿಜಯ', 'ಮಾರೀಚವಧೆ' ಎಂಬ (ಉಪರೂಪಕ) ಗೇಯಕಾವ್ಯಗಳು ಅಥವಾ ರಾಗಕಾವ್ಯಗಳು ದೃಶ್ಯಪ್ರಯೋಗಗಳಾಗಿದ್ದು ಎಂದು ಹೇಳುತ್ತಾನೆ. (ನಾಟ್ಯಶಾಸ್ತ್ರ, ಗಾಯಕವಾದ ಪ್ರತಿ, ಭಾಗ ೧ ಅಧ್ಯಾಯ ೪, ಪುಟಸಂಖ್ಯೆ ೧೮೧) ಹಾಗೂ ಡಿಮ್, ಸಮವಕಾರ, ಸಿಂಗಕ, ಡೋಂಬಿಕಾ, ಭಾಣ, ಪ್ರಸ್ಥಾನ, ಭಾಣಿಕ, ರಾಮಾಕ್ರೀಡ, ಹಲ್ಲೀಸ, ರಾಸಕ ಎಂಬವೆಲ್ಲ ರಾಗಕಾವ್ಯಗಳು ನೃತ್ಯಾತ್ಮಕವಾದವು ಹೊರತು ನಾಟ್ಯರೂಪಕಗಳಲ್ಲವೆನ್ನುತ್ತಾನೆ.

ವಾಗ್ನಟನ ಕಾವ್ಯಾನುಶಾಸನದಲ್ಲಿಯೂ 'ಡೋಂಬಿಕಾ, ಭಾಣ, ಪ್ರಸ್ಥಾನ, ಭಾಣಿಕಾ, ಪೇರಣ, ಶಿಂಗಕ, ರಾಮಾಕ್ರೀಡಾ, ಹಿಸಕ, ರಾಸಕ, ಶ್ರೀಗದಿತ, ಗೋಷ್ಠಿ ಪ್ರಜ್ಞತೀನಿ, ಗೇಯಾನಿ” ಎಂದಿರುವುದಲ್ಲದೆ ಪ್ರತಿಯೊಂದಕ್ಕೂ ಪ್ರತ್ಯೇಕ ಲಕ್ಷಣ ಕೊಡಲಾಗಿದೆ. 'ಕಂಸವಧೆ', 'ಬಲಿಬಂಧ' ಎಂಬ ನೃತ್ಯಪ್ರಯೋಗಗಳಿದ್ದುವೆಂದು ಪತಂಜಲಿಯ ಮಹಾ ಭಾಷ್ಯದಿಂದ ತಿಳಿಯಬಹುದು. ಆದ್ದರಿಂದ ಶೃಂಗಾರ ಪ್ರಧಾನವಾದ ನಾಟಕ, ನಾಟಕಾ ಪ್ರಕರಣಗಳೆಂಬ ದೃಶ್ಯಕಾವ್ಯಗಳು ಅನಂತರ ಕಾಲದ ಬೆಳವಣಿಗೆಯಲ್ಲಿ ಪ್ರಯೋಗಕ್ಕೆ ಬಂದವೆಂಬುದರಲ್ಲಿ ಸಂದೇಹವಿಲ್ಲ. ನಾಟ್ಯ ವೇದವೆಂದೇ ಶಾಸ್ತ್ರಪ್ರಸಿದ್ದಿಯನ್ನು ಪಡೆದ ರುದ್ರನಾಟಕ ಪ್ರಯೋಗವು ಮೂಲತಃ ಹುಟ್ಟಿದ್ದು ತ್ರೇತಾಯುಗದಲ್ಲಿ. ಚಾರಿತ್ರಿಕವಾಗಿನೋಡಿದರೆ ಅದೇ ವೇದಕಾಲವು ಹೌದು. ಲೋಕಕಂಟಕರಾದ ದೈತ್ಯದಾನವರೂ, ದುಷ್ಕ್ಷತ್ರಿಯರೂ ಪುನಃ ಚೇತನಗೊಂಡು ಪ್ರವೃದ್ಧರಾಗಿದ್ದ ಕಾಲವದು. ನಾಟ್ಯಶಾಸ್ತ್ರದಆರಂಭದಲ್ಲೇ ಉಲ್ಲೇಖಿತವಾದ ಆ ಲಕ್ಷಣಶ್ಲೋಕಗಳು ಹೀಗಿವೆ :

ಪೂರ್ವಂ ಕೃತಯುಗೇ ವಿಪ್ರಾ ವೃತ್ತೇ ಸ್ವಾಯಂಭವೇsಂತರೇ ।
ತ್ರೇತಾಯುಗೇಽಥ ಸಂಪ್ರಾಪ್ತ ಮನೋರೈವತಸ್ಯ ಚ ।।