ಈ ಪುಟವನ್ನು ಪ್ರಕಟಿಸಲಾಗಿದೆ

೨೪೬ / ಕುಕ್ಕಿಲ ಸಂಪುಟ

ಝಂಪೆ, ತ್ರಿಪುಟ, ಆಟ, ಏಕ ಎಂಬ ಅಧುನಾಪ್ರಸಿದ್ಧ ಸಪ್ತತಾಳಗಳಿಗೆ ಮತ್ತು ಅವುಗಳಲ್ಲಿ ನಿಬದ್ಧವಾದ ಗೀತಗಳಿಗೆ ಸಮಷ್ಠಿಯಿಂದ ಸೂಡ, ಸೂಳೆ, ಸೂಳಾದಿ ಎಂಬ ಸಂಜ್ಞೆ ಕಾಣುತ್ತದೆ. ಕೆಲವರು ಈ ಸೂಡದಲ್ಲಿ ಆದಿತಾಳವನ್ನೂ ಸೇರಿಸುತ್ತಾರೆ. ಇನ್ನು ಕೆಲವರು ಝಮರಿ, ಯತಿ ಎಂಬೆರಡು ತಾಳಗಳನ್ನು ಸೇರಿಸಿ ಒಂಬತ್ತು ತಾಳಗಳೆನ್ನು ತ್ತಾರೆ. ಇಷ್ಟೇ ಅಲ್ಲ ಸೂಡ ಎಂದರೆ ಹನ್ನೊಂದು ತಾಳಗಳೆಂಬ ಇನ್ನೊಂದು ಮತವೂ ಇದೆ. ಇಂತಹ ಕೆಲವು ಮತಭೇದಗಳನ್ನು ಘನಶ್ಯಾಮದಾಸರ 'ಸಂಗೀತಸಾರಸಂಗ್ರಹ ಎಂಬ ಗ್ರಂಥದಿಂದಲೂ ತಿಳಿಯಬಹುದು. (ಪುಟ ೨೮) ಪುರಂದರದಾಸಾದಿ ವಾಗ್ಗೇಯ ಕಾರರು ಈ ತಾಳಗಳಲ್ಲಿ ಅಸಂಖ್ಯಾತವೆಂಬಷ್ಟು ಕೃತಿಗಳನ್ನು ರಚಿಸಿ ವಿಶೇಷ ಪ್ರಚಾರಕ್ಕೆ ತಂದುದರಿಂದ ಹಿಂದಿನ ಲಕ್ಷ್ಮಮಾರ್ಗದಲ್ಲಿದ್ದ ನೂರಾರು ದೇಶೀಯ ತಾಳಗಳೂ ಪ್ರಬಂಧಜಾತಿಗಳೂ ಕ್ರಮಶಃ ನಾಮಾವಶೇಷವಾದುವು. ಇತರ ಸೂಡಗಳು ಪ್ರಯೋಗ ದಲ್ಲಿಲ್ಲದಾಗಿ ಸಾಲಗಸೂಳವೇ ಸೂಳ, ಪುರಂದರದಾಸಾದಿಗಳು ಧುವಾದಿ ತಾಳಗಳಲ್ಲಿ ರಚಿಸಿದ ಕೃತಿಗಳೇ ಅದಕ್ಕೆ ಲಕ್ಷ ಎಂದಾಯಿತು. ಇವುಗಳಲ್ಲಿ ಎಂದರೆ ಸಾಲಗಸೂಡ ಪ್ರಬಂಧಗಳಲ್ಲಿ ಮೊದಲನೆಯದಾದ, ಪ್ರಾಚೀನ ಲಕ್ಷಣಗ್ರಂಥಗಳಲ್ಲಿ ಧ್ರುವ ಎಂಬ ಹೆಸರಿದ್ದ ಅದೊಂದು ವಿಶಿಷ್ಟ ಪ್ರಬಂಧವು ಅನೇಕ ತಾಳಗಳ ರಚನೆ. ಧ್ರುವಾದಿ ಸಪ್ತ ತಾಳಗಳಲ್ಲದೆ ಯತಿ (ಜತಿ) ಎಂಬ ತಾಳವೂ ಅದರಲ್ಲಿ ಸೇರಿದೆ. ದಾಸರ ಕೃತಿಗಳಲ್ಲಿ 'ಸೂಳಾದಿ' ಎಂಬ ವಿಶೇಷ ಸಂಜ್ಞೆ ಇರುವುದೂ ತಾಳಮಾಲಿಕೆಯಂತಿರುವ ಆ ಪ್ರಬಂಧಕ್ಕೇ ಅದರ ಒಂದೊಂದು ಖಂಡಗಳೂ ಬೇರೆ ಬೇರೆ ತಾಳಗಳಲ್ಲಿರುವುವು. ಆದುದರಿಂದಲೇ ಇತರ ಪ್ರಬಂಧಗಳಂತೆ ಅದನ್ನು ಒಂದು ತಾಳದ ಹೆಸರಿನಿಂದ ಕರೆಯುವುದಾಗಲಿಲ್ಲ. ಮೊದಲಿದ್ದ ಧ್ರುವ ಎಂಬ ಹೆಸರಿನಿಂದಲೇ ಕರೆಯಬಹುದಿತ್ತಲ್ಲ ಎಂದರೆ ಆ ಕಾಲದಲ್ಲಿ ಒಂದು ತಾಳಕ್ಕೂ ಅದೇ ಹೆಸರಿದ್ದು ಆ ತಾಳದಲ್ಲಿ ಕೃತಿಗಳನ್ನು ಬೇರೆ ರಚಿಸಿರುವುದರಿಂದ ಅದೂ ಅನುಚಿತವಾಗಿ ಪರಿಣಮಿಸಿತು. ಹಾಗಾಗಿ ವ್ಯಾಸರಾಯಾದಿ ವಾಗ್ಗೇಯಕಾರರು ಸೂಳದ ಆದ ಪ್ರಬಂಧವೆಂದು ಅದನ್ನು ಅನ್ವರ್ಥವಾಗಿಯೇ 'ಸೂಳಾದಿ' ಎಂದು ಕರೆದರು ಎಂದು ತಿಳಿಯಬೇಕು. ಕೆಲವು ಲಕ್ಷಣ ಗ್ರಂಥಗಳಲ್ಲಿ ಅದಕ್ಕೆ 'ಸೂಳಾದ' ಎಂಬ ಹೆಸರನ್ನೇ ಕೊಡಲಾಗಿದೆ. ಸಾಲಗಸೂಡದ ಆದ್ಯ ಪ್ರಬಂಧ- 'ಸೂಲಾದಿ'. ಸಂವತ್ಸರದ ಮೊದಲನೆಯ ದಿನವನ್ನು 'ಯುಗಾದಿ' ಎನ್ನುವ ಹಾಗೆ.

ದಾಸರ ಕೃತಿಗಳ ಸಮುದಾಯಕ್ಕೂ ಸರ್ವಸಾಮಾನ್ಯವಾಗಿ 'ಸೂಳಾದಿಗಳು' ಎಂಬ ವ್ಯವಹಾರವಿರುವುದು ಕೆಲವೆಡೆಗಳಲ್ಲಿ ಕಂಡುಬರುತ್ತದೆ. ದಾಸರ ಪದಗಳ ಕೆಲವು ಸಂಗ್ರಹ ಗ್ರಂಥಗಳಿಗೆ ಈ ಹೆಸರಿರುವುದು ಕಾಣುತ್ತದೆ. ಅವುಗಳೊಳಗೆ ಸೂಳೆಗಳು ಮಾತ್ರವಲ್ಲದೆ ಹರಿದಾಸಕರ್ತೃಕವಾದ ಇತರ ತಾಳಗಳ ರಚನೆಗಳೂ ತಾಳಬದ್ಧವಲ್ಲದ ಶ್ಲೋಕ, ಚೂರ್ಣಿಕೆ, ದಂಡಕ ಮೊದಲಾದ ಬಂಧವಿಶೇಷಗಳೂ ಇರುವುದರಿಂದ


೧. ಚತುರ್ದಂಡೀ- ಸ್ವರಪ್ರಕರಣ. ಶೇ. ೧೦೮-೧೧೧.
೨. ಸಂಗೀತ ಸಾರಸಂಗ್ರಹ, ಪುಟ ೨೭ ಶೂ, ೨೧೨-೨೧೩.
೩. ಸಂ, ಸಾರಾಮೃತ, ಪ್ರಬಂಧಪ್ರಕರಣ, ಪು. ೧೫೦.
೪. ಭರತ ಕಲ್ಪಲತಾ ಮಂಜರಿ, ಪುಟ ೯೯. ಸೂಳಾದ್ಯಾದಿ ಚತುರ್ವಿಧ ಭಾವಪ್ರಬಂಧ ಲಕ್ಷಣಂ- ಸೂಳಾದ್ಯಾನಾಮವಳಿತಂ ಚೂರ್ಣಿಕಾ ನಾಟಕಂ ತಥಾ.