ಸರ್ವಂಗ್ರಾಹಕವಾಗಿ, ಸೂಳ ಮೊದಲಾದ ಪ್ರಬಂಧಗಳು ಎಂಬ ಅರ್ಥದಲ್ಲಿ ಹಾಗೆ ಕರೆಯುವುದೂ ತಪ್ಪಲ್ಲ.
ಸಾಲಗ : ಸಂಗೀತರತ್ನಾಕರದಲ್ಲಿ 'ಛಾಯಾಲಗಕ್ಕೆ ಪರ್ಯಾಯವಾಗಿ ಈ ಪದವು ಪ್ರಯೋಗಿಸಲ್ಪಟ್ಟಿದೆ. ಕಲ್ಲಿನಾಥನು ವ್ಯಾಖ್ಯಾನದಲ್ಲಿ 'ಸಾಲಗ ಎಂಬ ಪದವು 'ಛಾಯಾಲಗ'ದ ಅಪಭ್ರಂಶರೂಪವಾಗಿ ರೂಢಿಯಲ್ಲಿದೆ ಎಂದಿದ್ದಾನೆ. ಇತರ ಲಾಕ್ಷಣಿಕರೂ ಹಾಗೆಯೆ ಹೇಳುತ್ತಾರೆ.೧
ಛಾಯಾಲಗವೆಂಬ ಹೆಸರು ದೇಶೀಯ ಪ್ರಬಂಧಗಳಿಗೆ ಯಾವುದರಿಂದ ಬಂತು, ಆ ಪದದ ವ್ಯುತ್ಪತ್ತಿ ಹೇಗೆ ಎಂಬ ವಿಚಾರ ಸಂಗೀತರತ್ನಾಕರಾದಿ ಗ್ರಂಥಗಳಲ್ಲಿ ಕಾಣುವುದಿಲ್ಲ. 'ಶುದ್ಧ ಪ್ರಬಂಧಗಳ ಸಾದೃಶ್ಯವನ್ನು ಪಡೆದಿರುವುದು' ಎಂಬ ಅರ್ಥದಲ್ಲಿ ಈ ಹೆಸರಾಗಿದೆ ಎಂಬ ಅಭಿಪ್ರಾಯವು ಕಲ್ಲಿನಾಥನ ವ್ಯಾಖ್ಯಾನದಲ್ಲಿ ಕಾಣುತ್ತದೆ: ಶುದ್ಧಾಯಾಲಗ ಶೃತಿ ದ್ವಿವಿಧಃ ಸೂಡ ಉಚ್ಯತೇ | ಏಲಾದಿಃ ಶುದ್ಧ ಇತ್ಯುಕೋ ಧ್ರುವಾದಿಃ ಸಾಲಗೋ ಮತಃ ಎಂಬ ರತ್ನಾಕರದ ಶ್ಲೋಕಕ್ಕೆ ಶುದ್ಧ; ಶಾಸ್ರೋಕ್ತ ನಿಯಮೇನ ಪ್ರಕೀರ್ತಿತಃ ಛಾಯಾಲಗಃ ಛಾಯಾಂ ಶುದ್ಧ ಸಾದೃಶ್ಯಂ ಲಗತಿ ಗಚ್ಛತಿ ಸಃ” ಎಂಬ ವ್ಯಾಖ್ಯಾನವಿದೆ. ಆದರೆ ಕಲ್ಲಿನಾಥನು ಕೊಟ್ಟಿರುವ ಈ ಅರ್ಥವು ಸಂಗೀತ ರತ್ನಾಕರದಲ್ಲಿರುವ ಇದರ ಮುಂದಿನ ಶ್ಲೋಕದ ಅಭಿಪ್ರಾಯಕ್ಕೆ ವಿರುದ್ಧವಾಗಿದೆ. ಆ ಶ್ಲೋಕವು ಇದು-
ಛಾಯಾಲಗತ್ವ ಮೇಲಾದೇರ್ಯದೃಥಾಚಾರ್ಯಸಮ್ಮತಂ |
ತಥಾಪಿ ಲೋಕೇ ಶುದ್ಯೋಗೌ ಶುದ್ಧ ಸಾದೃಶ್ಯತೋ ಮತಃ ǁ
೧. ಸಂ, ಸಾರಾಮೃತ ಪುಟ ೧೪೩, ಚರ್ತುದಂಡೀ ಪ್ರಕಾಶಿಕಾ, ಗೀತ, ಪ್ರ. ಶ್ಲೋ, ೭-೮
'ಅಥ ಛಾಯಾಲಗೋ ಯಸ್ತು ಸೂಡಃ ಸಏವ ಸಾಲಗಃ'. ಸಂ. ಸಾರ ಸಂ. ಪುಟ ೨೭.
ಧ್ರುವಾದಿ ಸಪ್ತ ತಾಳಾ (ಶ) ಸ್ವರಭಾಷಾಪದಾನ್ಯಪಿ
(ಸರ್ವ) ಸ್ವರರಾಗೈಃ ಪ್ರಗಾಯಂತೇ ಸೂಳಾದ್ಯಮಿತಿ ಕಥ್ಯತೇ
ಹಳೆಗನ್ನಡದಲ್ಲಿ 'ಸೂಟ್ ಎಂಬ ಪದಕ್ಕೆ ಶಬ್ದ ಮತ್ತು ಸರ್ತಿ ಎಂಬ ಅರ್ಥ
ವಿರುವುದರಿಂದ ಸೂಳ ಪದವು ಅದರಿಂದ ಹುಟ್ಟಿರಬಹುದೆಂದು ಕೆಲವರು ತರ್ಕಿಸು
ತ್ತಾರೆ. ಹಾಗೂ ಪುರಂದರದಾಸಾದಿ ಹರಿದಾಸರು ಸೂಳಾದಿಗಾನದಲ್ಲಿ ಸಶಬ್ದ ಘಾತ
ಗಳಿಂದಲೇ ತಾಳ ಹಾಕುವ ಸಂಕ್ಷಿಪ್ತತಾಳ (ಛಾಪು) ಪದ್ಧತಿಯನ್ನು ಹೊಸತಾಗಿ
`ರೂಢಿಗೆ ತಂದರೆಂದು ಕಲ್ಪಿಸಿ ಸೂಳ ಎಂಬ ಹೆಸರು ಮೂಲತಃ ತಾಳಗಳಿಗೆ ಅನ್ವರ್ಥ
ವಾಗಿ ಬಂದುದೆಂದು ಸಮರ್ಥಿಸುವಂತೆಯೂ ಕಾಣುತ್ತದೆ. ಆದರೆ ಪುರಂದರಾದಿ
ಹರಿದಾಸರ ಕಾಲಕ್ಕಿಂತ ಪೂರ್ವದಲ್ಲಿದ್ದ ಸಂಗೀತರತ್ನಾಕರಾದಿ ಪ್ರಾಚೀನಶಾಸ್ತ್ರಗ್ರಂಥ
ಗಳಲ್ಲಿ ' 'ಸೂಡ ಎಂಬ ಹೆಸರು ಪ್ರಬಂಧಗಳಿಗೇ ಇರುವುದು ಹೊರತು
ತಾಳಗಳಿಗಲ್ಲ. ಮಾತ್ರವಲ್ಲ ಮಾರ್ಗಪದ್ಧತಿಯ ಪ್ರಬಂಧಗಳಿಗೂ ಸೂಡ ಎಂಬ
ಹೆಸರಿದ್ದುದು ಆ ಛಾಪು ತಾಳವೆಂಬುದು ಸೂಳಾದಿ ತಾಳಗಳಲ್ಲಿ ಸೇರಿದುದಲ್ಲ.
ಸೂಳಾದಿ ಎಂಬ ಪ್ರಬಂಧಕ್ಕೆ ಆ ತಾಳ ನಿರ್ದೇಶವಿರುವುದೂ ಇಲ್ಲ. ಆದುದರಿಂದ
ಕೇವಲ ಕಾಲ್ಪನಿಕವಾದ ಈ ತರ್ಕಕ್ಕೆ ಅರ್ಥವಿಲ್ಲವೆಂಬುದು ಸ್ಪಷ್ಟ. ಹಳೆಗನ್ನಡ
ಕಾವ್ಯಗಳಲ್ಲಿಯೆ 'ಸೂಕ್ಷ್ಮ' ಎಂಬುದು ಸರ್ವತ್ರ ಅಟವಾಗಿರುವುದನ್ನೂ 'ಸೂಳ'ವು
ಸರ್ವತ್ರ ಕುಳವಾಗಿರುವುದನ್ನೂ ಈ ಸಂದರ್ಭದಲ್ಲಿ ಲಕ್ಷಿಸಬಹುದು.