ಅದರದ್ದೇ ಒಂದು ಅಂಗ, ನಾಟ್ಯವಿಲ್ಲದ ಸಂಗೀತವಿಲ್ಲ, ಸಂಗೀತ ಬಿಟ್ಟರೆ ನಾಟ್ಯವಿಲ್ಲ.
ಇವೆರಡೂ ಇಲ್ಲದ ನಾಟಕವೆಂಬುದೇ ಇಲ್ಲ. ನಾಟ್ಯವೆಂದರೆ ಕುಣಿತ, “ನೃತ್ತಂ ಗೀತಂ ಚ
ವಾದ್ಯಂ ಚ ತ್ರಯಂ ಸಂಗೀತಮುಚ್ಯತೇ- ಎಂಬುದು ಸಂಗೀತ ಶಬ್ದಕ್ಕೆ ಶಾಸ್ತ್ರದಲ್ಲಿ
ಕೊಟ್ಟಿರುವ ಅರ್ಥ.
ಭರತನ ಗಾಂಧರ್ವದ ಲಕ್ಷಣ ಹೀಗೆ :
ಗಾಂಧರ್ವ೦ ಯನ್ಮಯಾ ಸೃಷ್ಟಂ ಸ್ವರತಾಲಪದಾತ್ಮಕಂ |
ಪದಂ ತಸ್ಯ ಭವೇದ್ವಸ್ತು ಸ್ವರತಾಲಾನುಭಾವಕಂ|
ಸ್ವರ, ತಾಲ, ಪದ ಈ ಮೂರೂ ಸೇರಿದ್ದು ಗಾಂಧರ್ವ, ಪದ ಎಂದರೆ ಗೇಯ ವಸ್ತು ಅಥವಾ ಪ್ರಬಂಧ; ಸ್ವರ ತಾಲಗಳು ಆ ಪದವನ್ನು ಹೊಂದಿಕೊಂಡು ಅದಕ್ಕೆ ಅಧೀನ ವಾಗಿರಬೇಕು. ಈ ಮೂರರೊಳಗೆ ಪದವೇ ಪ್ರಧಾನವಾದ್ದು ಎಂಬ ತಾತ್ಪರ್ಯ.
ಹಾಡುವ ಪದ್ಯಕ್ಕೆ ವಸ್ತು, ಪ್ರಬಂಧ, ಗೀತ, ರೂಪಕ, ಜಾತಿ ಇತ್ಯಾದಿ ಬೇಕಷ್ಟು ರೂಢಿಯಲ್ಲಿರುವ ಹೆಸರುಗಳನ್ನು ಬಿಟ್ಟು 'ಪದ' ಎಂಬ ಹೊಸ ಹೆಸರನ್ನು ಕೊಡುತ್ತಾನೆ. ಏನಿದರ ಔಚಿತ್ಯ? ಎಂದರೆ ಪದ ಶಬ್ದದ ನಿಜವಾದ ಅರ್ಥ- ಹಜ್ಜೆ, ಪಾದವಿನ್ಯಾಸ (Foot Step), ಪದ-ಗತ -ಇದು ಧಾತ್ಪರ್ಥ, ಪದ್ಯತೇ, ಪದಂ ವ್ಯತೇ ಇತಿ ಪದಂ' -ವ್ಯುತ್ಪತ್ತಿ. ಹಜ್ಜೆಯಿಟ್ಟು ಕುಣಿಯಲಿಕ್ಕಿರುವ ಪದ್ಯ ಎಂಬುದಕ್ಕಾಗಿ ಈ ಸಂಜ್ಞೆ.
ಕುಣಿತದ ಪದ್ಯಕ್ಕೆಲ್ಲ ಮುಂದೆ ಈ ಹೆಸರೇ ರೂಢಿಯಾಗಿ ಬಂತು. “ಪದ್ಮಾವತೀ ಚರಣಚಾರಣ: ಚಕ್ರವರ್ತಿ'- ಜಯದೇವ, ಕುಣಿತಕ್ಕಾಗಿ ರಚಿಸಿದ “ಗೀತಗೋವಿಂದ'. ಅದನ್ನು ಪದ ಎಂದೇ ಕರೆದಿದ್ದಾನೆ- ಲಲಿತ ಕೋಮಲ ಕಾಂತ ಪದಾವಲೀಂ ಶ್ರುಣುತ ರೇ ಜಯದೇವಸರಸ್ವತೀಂ ಶ್ರುಣುತ ರೇ ಜಯದೇವ ಪದಾವಲೀಂ'. ಎಷ್ಟೊಂದು ನೃತ್ತ ರೂಪಗಳಿವೆ. ನಮ್ಮಲ್ಲಿ, .. ಅದರ ಅದರ ಹಾಡುಗಳೆಲ್ಲ ಪದಗಳೆಂದೇ ಕರೆಯಲ್ಪಟ್ಟಿವೆ- ರಾಸಲೀಲಾಪದ, ಗೊಲ್ಲಪದ, ಗೊಬ್ಬಿ ಪದ, ರಾಮಲೀಲಾ ಪದ, ಗರ್ಭೀಪದ, ಜಕ್ಕಿಣೀಪದ, ಚಿಂದು ಪದ, ಕೊರವಂಜಿ ಪದ, ಜಕ್ಕುಲ ಪದ, ಯಕ್ಷಗಾನ ಪದ, ಇಂತಹದೇ ಆಟಕ್ಕೆ ನೇಪಾಳದಲ್ಲಿ ಗಂಧರ್ವಗಾನವೆಂದು ಹೆಸರು. ಅದರ ಹಾಡು ಗಂಧರ್ವ ಪದ, ಕೇರಳದಲ್ಲಿ ಕೃಷ್ಣಾಟ್ಟಂ ಪದ, ಕಥಕಳಿ ಪದ, ಕ್ಷೇತ್ರಜ್ಞನ ಪದ, ದಾಸರ ಪದ ಇವೂ ಕುಣಿತದ ಪದಗಳೇ.
ಸಂಸ್ಕೃತ ನಾಟಕದಲ್ಲಿ ಬೇರೆಬೇರೆ ರಸಭಾವಗಳ
ರಸಭಾವಗಳ ಪದರಚನೆಗೆ ಪ್ರತ್ಯೇಕ
'ಧ್ರುವಾಪದ'ಗಳೆಂದು ಹೆಸರು ಕೊಟ್ಟಿದ್ದಾನೆ. ಧ್ರುವಾ' ಎಂದರೇನು? ವರ್ಣ,
ಅಲಂಕಾರ, ಯತಿ, ತಾಳ, ಲಯ ಇವೆಲ್ಲ ಒಂದೊಂದು ರಸಭಾವಗಳಿಗೆ ಇಂತಿಂಥವೇ
ಇರಬೇಕೆಂಬ ನಿರ್ಣಯ. ಅದರಂತೆ ಪದ್ಯರಚನೆ, ಕುಣಿತದ ಅಡುವು ಅಕ್ಷರಗಳಲ್ಲಿ
ಬರಬೇಕು-
ಧ್ರುವಾ ವರ್ಣಾಲಂಕಾರಾ ಯತಯಃ ಪಾಣಯೋ ಲಯಾ: |
ಧ್ರುವಮನ್ನೋನ್ಯಸಂಬಂಧಾ ಯಸ್ಮಾತ್ಮಸ್ಮಾತ್ ಧ್ರುವಾಃ ಸ್ಮೃತಾಃ ||
(ಧ್ರುವಾಪದಗಳ ಕುರಿತು ಹೆಚ್ಚಿನ ವಿವರಕ್ಕೆ 'ನಾಟ್ಯಶಾಸ್ತ್ರವೂ ಸಂಸ್ಕೃತ ನಾಟಕಗಳೂ'
ಎಂಬ ನನ್ನ ಲೇಖನವನ್ನು ನೋಡಬಹುದು.- 'ಮಾನವಿಕ ಕರ್ಣಾಟಕ' ಸಂ. ರಾ. ಸಂಚಿಕೆ
೨., ವಿ. ವಿ. ನಿಲಯ, ಮೈಸೂರು.)