೨೬೮ / ಕುಕ್ಕಿಲ ಸಂಪುಟ
ನಾನಾವಿಧ ರಚನೆಯ ಈ ಧ್ರುವಗಳಲ್ಲಿ ಮುಖ್ಯವಾಗಿ ಎರಡು ವರ್ಗ ಎಂದರೆ- ಪದರಚನೆಯ ಎರಡು ಮಾರ್ಗ. ಒಂದು ಶೃಂಗಾರ ರಸಪ್ರಧಾನವಾದ ಕೈಶಿಕೀ ವೃತ್ತಿ ಯದು- 'ಅಡ್ಡಿತ' ಮಾರ್ಗ, ತಾಳಲಯ ಪ್ರಧಾನವಾದ್ದು. ಲಾಸನೃತ್ಯದ ದ್ರುತಗತಿಯ ಲಯವೈಚಿತ್ರ್ಯವುಳ್ಳ ರಚನೆ.
ಇನ್ನೊಂದು, ಇದಕ್ಕೆ ಪ್ರತಿ ವಿರುದ್ಧವಾದ್ದು, 'ಅಪಕೃಷ್ಟ' ಮಾರ್ಗ, ಕರುಣ, ವಿಪ್ರಲಂಭ, ನಿರ್ವೇದಭಾವಗಳಿಗೆ ವಿಶಿಷ್ಟವಾದ್ದು. ಈ ಭಾವಗಳಲ್ಲಿ ಕುಣಿತ ಕಡಿಮೆ. ವಿಳಂಬಿತ ಗತಿಯಲ್ಲಿ ಹಾಡುವ ಪದ್ಯ. ಇದರ ಪದ್ಯಗಳಲ್ಲಿ ಅಕ್ಷರಗಳು ಕಡಿಮೆ. ದೀರ್ಘಾಕ್ಷರಗಳೇ ಹೆಚ್ಚು. ಲಯಚಮತ್ಕಾರವಿಲ್ಲದ ಚಿಕ್ಕ ಚಿಕ್ಕ ಪದ್ಯಗಳು!
ಮೊದಲನೆಯದರಲ್ಲಿ ಅಕ್ಷರಗಳು ಸಾಂದ್ರ, ತಾಳದ ಘಾತ-ಪಾತಗಳು ಆಯಾ
ಅಕ್ಷರಗಳಿಗೇ ಬೀಳುವಂತಿರಬೇಕು. ತಾಳದ ಗುರುವಿರುವಲ್ಲಿ ಅಕ್ಷರವೂ ಗುರು, 'ತಾಳದ
ಲಘುವಿಗೆ ಸರಿಯಾಗಿ ಅಕ್ಷರವೂ ಲಘು. ಹೀಗೆ “ಸತಾಲ ಪತನಾಕ್ಷರ'ವೆನ್ನಲಾದ ರಚನೆ.
ಗುರುಲಘಕ್ಷರಗಳ ಸಾಪೇಕ್ಷ ಪ್ರಮಾಣ ತಪ್ಪಬಾರದು. ಎಳೆದು ತಾಳಕ್ಕೆ ಹೊಂದಿಸು
ವಂತಿರಬಾರದು. ಈ ನಿಯಮಗಳು ಕಟ್ಟುನಿಟ್ಟು, ಗಾನದಲ್ಲಿ ದ್ರುತಮಧ್ಯ 'ಲಯಭೇದ
ಗಳು ಉತ್ತರೋತ್ತರ ದ್ವಿಗುಣಿತ ಪ್ರಮಾಣದಲ್ಲೇ ನಡೆಯಬೇಕು. ಇದು ತಾಳದ ಮಾರ್ಗ
ಲಯ (ದೇಶಿಯಲ್ಲಿ ತ್ರಿಮಾರ್ಗ ಸೂಳಕ್ರಮವೆನ್ನುವುದು ಇದನ್ನೇ). ಇಂತಹ ನಿಬದ್ದ
ರಚನೆ ಅನುಬದ್ಧ ಧ್ರುವಾಪದ ಎಂದೂ ಕರೆಯಲ್ಪಟ್ಟಿದೆ. ಭರತನ ಆ ಲಕ್ಷಣ ಶ್ಲೋಕ-
ಅಡ್ಡಿತ
ಯತಿಂ ಲಯಂ ವಾದ್ಯಗತಿಂ ಪದಂ ವರ್ಣಾನ್ ಸ್ವರಾಕ್ಷರಂ |
ಅನುಬಮ್ಮಾತಿ ಯತ್ರ್ಯವಮನುಬದ್ಧಾ ಭವೇತ್ತುಸಾ ||
ಆಕ್ರೀಡಿತ ಪ್ರವೃತ್ರೋಯಶ್ಚತುರ್ಥಲಯಕಾರಕಃ
ನಾತ್ಯೋಪಚಾರಜನಿತಃ ಸೋನುಬಂಧಃ ಪ್ರಕೀರ್ತಿತಃ
ನಾಟ್ಯ ತ್ವರಿತ ಸಂಚಾರಾ ನಾಟ್ಯಧರ್ಮಮನುವ್ರತಾ |
ಅಲ್ಪತಾತೂತ್ಕಟಗುಣಾ ಶೃಂಗಾರರಸ ಸಂಭವಾ ||
ಅಪಕೃಷ್ಟ
ಅನ್ಯಭಾಷೇಷು ಕೃಷ್ಣಾ ಚ ಕೃಷ್ಣ ಹೇತುಷು ಗೀಯತೇ
ಯಸ್ಮಾತ್ಕಾರುಣ್ಯಸಂಯುಕ್ತಾಷ್ಯ ಪಕೃಷ್ಣಾ ಭವೇತ್ತು ಸಾ |
ಅಪಕೃಷ್ಟ ಗಾನದಲ್ಲಿ ದ್ರುತವಿಲಂಬಿತ ಕಾಲಭೇದಗಳು ದ್ವಿಗುಣಿತ ಕ್ರಮದಲ್ಲಿಯಲ್ಲ. ಸ್ವಲ್ಪಸ್ವಲ್ಪವೇ ಏರುತ್ತಾ ಇಳಿಯುತ್ತಾ ಸಾಗುವುದು. ಇವೆರಡರೊಳಗೆ ಕೈಶಿಕೀ ವೃತ್ತಿಯ ಅಡ್ಡಿತ ಮಾರ್ಗದ ನಾಟ್ಯಪ್ರಯೋಗವೇ ದಕ್ಷಿಣ ದೇಶಕ್ಕೆ ಪ್ರಶಸ್ತವಾದ್ದು ಎನ್ನುತ್ತಾನೆ-
ವೃತ್ತಿ ಸಂಠಿತೇಷ್ಟಮೀಷು ಪ್ರಯೋಗೇಷು ಅಭಿರತಾಃ ದೇಶಾ: ಯತಃ
ಪ್ರವೃತ್ತಿ ಚತುಷ್ಟಯಮಭಿನಿವೃತ್ತಂ ಪ್ರಯೋಗಕ್ಕೋತ್ಪಾದಿತಃ |
ತತ್ರ ದಾಕ್ಷಿಣಾತ್ಯಾಸ್ತ್ರಾವತ್ ಬಹು ನೃತ್ಯಗೀತವಾದ್ಯಾ ಕೈಶಿಕೀ ಪ್ರಾಯಾಃ
ಚತುರ ಮಧುರ ಲಲಿತಾಂಗಾಭಿನಾಯಾಶ್ಚ | ತದೃಥಾ
ದಕ್ಷಿಣಸ್ಯ ಸಮುದ್ರ ತಥಾ ವಿಂಧ್ಯಸ್ಯಚಾಂತರೇ |
ಯೇ ದೇಶಾಃ ಸಂಶ್ರಿತಾಸ್ತೇಷು ದಾಕ್ಷಿಣಾತ್ಯಾತು ನಿತ್ಯಶಃ |