ಈ ಪುಟವನ್ನು ಪ್ರಕಟಿಸಲಾಗಿದೆ

೨೭೮ / ಕುಕ್ಕಿಲ ಸಂಪುಟ

ಕ್ರಮವಾಗಿ ೪, ೩, ೨, ೪, ೪, ೩, ೨ರಂತೆ ಶ್ರುತಿಗಳನ್ನು ಪಡೆಯುತ್ತವೆ ಎಂದಿರುವುದ ರಿಂದ ಆಯಾ ಸ್ವರಗಳು ಅಷ್ಟಷ್ಟು ಶ್ರುತಿಗಳಿಂದಾಗಿವೆ ಎಂದಾಯಿತಷ್ಟೆ? ಅವುಗಳಲ್ಲಿ ಸ್ವರಗಳಿರುವುದು ೪ನೇ, ೩ನೇ ಇತ್ಯಾದಿ ಒಂದೊಂದೇ ಶ್ರುತಿಗಳಲ್ಲಿ ಎಂದು ಮತ್ತೆ ಹೇಳಿರುವ ಪ್ರಕಾರ ಷಡ್ಕದ ಹಿಂದೆ ೩, ಋಷಭದ ಹಿಂದೆ ೨ ಮುಂತಾಗಿರುವ ಪೂರ್ವ ಶ್ರುತಿಗಳು ಸ್ವರಕ್ಕೆ ಕಾರಣವಾಗುವುದು ಹೇಗೆ? ಎಂಬ ಆಕ್ಷೇಪಕ್ಕೆ ಸಮಾಧಾನವೇನೆಂದರೆ- ೪ನೇ, ೩ನೇ ಇತ್ಯಾದಿ ಸ್ವರಸ್ಥಾನದ ಶ್ರುತಿಗಳು, ಒಂದು ಸ್ವರವು ಅದರಿಂದಲೇ ಹಿಂದಿನ ಸ್ವರದಿಂದ ಇಂತಿಷ್ಟೇ ಏರಿನಲ್ಲಿದೆ ಎಂದು ನಿರ್ಧರಿಸಲಿಕ್ಕೆ ಒಂದಾದ ಮೇಲೊಂದರಂತೆ ಶ್ರುತಿಗಳನ್ನು ಏರಿಸಿದಲ್ಲದೆ ಸಾಧ್ಯವಿಲ್ಲ. ಹಾಗೂ ಶ್ರವಣಪರಿಮೇಯವಾದ 'ಧ್ವನ್ಯಂತರಾ ಶ್ರುತಿ' ಎಂಬ ಪರೀಕ್ಷೆಯಿಂದ ಒಮ್ಮೆಗೆ ಒಂದೇ ಶ್ರುತಿಭೇದವನ್ನು ಗುರುತಿಸುವುದು ಸಾಧ್ಯ. ಹಾಗಾಗಿ, ನಾಲ್ಕನೇ, ಮೂರನೇ ಇತ್ಯಾದಿ ಸ್ವರಸ್ಥಾನಗಳಲ್ಲಿರುವ ಸ್ವರಗಳ ಉಚ್ಚತ್ವ ನಿರ್ಣಯಕ್ಕೆ ಹಿಂದಿರುವ ೩, ೨ ಇತ್ಯಾದಿ ಗಣನೆಯೂ ಕಾರಣವಾಗುತ್ತದೆ. ಅದೂ ಅಲ್ಲದೆ ಒಂದು ಶ್ರುತಿಗೆ ನಾಲ್ಕನೆಯದು ಅಥವಾ ಮೂರನೆಯದು ಎಂಬಂತೆ ಸಂಖ್ಯಾ ನಿರ್ದೇಶ ಮಾಡಬೇಕಿದ್ದರೆ ಹಿಂದೆ ಮೂರು ಅಥವಾ ಎರಡು ಶ್ರುತಿಗಳು ಸರಿಯಾಗಿ ಲೆಕ್ಕಕ್ಕೆ ಸಿಕ್ಕಬೇಕು ತಾನೆ? ಕಲ್ಲಿನಾಥನೂ ತನ್ನ ವ್ಯಾಖ್ಯಾನದಲ್ಲಿ ಇದನ್ನೆ ಹೇಳಿದ್ದಾನೆ- ಪೂರ್ವಪೂರ್ವಾಭಿಕಾಂಕ್ಷಯೇತಿ | ಉಚೊಚ್ಚತರತಾರೂಪೇಣಲಕ್ಷಣೇನ ಸೋತ್ವತಾ ಸಂಖ್ಯಯಾ ತುರ್ಯಾದಿ ವ್ಯಪದೇಶಚ ಪೂರ್ವಸ್ಯಾ ಆಕಾಂಕ್ಷಾ ತಯಾಯತೋ ನಿರ್ಧಾರ್ಯತೇ ಅತಃ ಇತ್ಯರ್ಥ' ಸ್ವರಗಳು ತಮ್ಮ ನಿಗದಿಯಾದ ಶ್ರುತಿಸ್ಥಾನಗಳಲ್ಲಿರು ಇವೆಯೇ ಎಂಬುದನ್ನು ಹಿಂದಿನ ಶ್ರುತಿಗಳ ಎಣಿಕೆಯಿಂದಲೇ ನಿರ್ಧರಿಸಬೇಕಾಗುವುದ ರಿಂದ ಹಿಂದಿನ ಶ್ರುತಿಗಳೂ ಸ್ವರ ನಿರ್ಣಯಕ್ಕೆ ಕಾರಣವಾಗುತ್ತವೆ ಎಂಬ ತಾತ್ಪರ್ಯ.

ಮುಂದೆ ಸ್ವರಗಳ ನಾನಾ ವಿಕೃತಭೇದಗಳನ್ನು ಹೇಳಲಿಕ್ಕಿರುವುದರಿಂದ ಆ ವಿಕೃತ ಸ್ವರಗಳ ಪ್ರತ್ಯೇಕ ಶ್ರುತಿಸ್ಥಾನಗಳನ್ನು ಸಂಕೀರ್ಣವಾಗದಂತೆ ತಿಳಿಯುವ ಸೌಲಭ್ಯಕ್ಕಾಗಿ ಶಿಕ್ಷಾ ಗ್ರಂಥಗಳಲ್ಲಿ ಹೇಳಿರುವ ಪ್ರಕಾರ ನಾದಗುಣಗಳಿಗನುಸಾರವಾಗಿ ಶ್ರುತಿಗಳನ್ನು ಐದು ಜಾತಿಗಳಾಗಿ ವರ್ಗೀಕರಿಸುವ ಮೂಲಕ ಪ್ರತಿಯೊಂದು ಶ್ರುತಿಗೂ ಪ್ರತ್ಯೇಕ ಸಂಜ್ಞೆಗಳನ್ನು ಕೊಡುತ್ತಾನೆ.

ದೀಪ್ರಾಯತಾ ಚ ಕರುಣಾ ಮೃದುರ್ಮಪ್ರೀತಿ ಜಾತಯ: |
ಶ್ರುತೀನಾಂ ಪಂಚ ತಾಸಾಂ ಚ ಸ್ವರೇವಂ ವ್ಯವಸ್ಥಿತಿ:||೨೯||
ದೀಪ್ತಾಯತಾ ಮೃದುರ್ಮಧ್ಯಾ ಷಡೋಸ್ಯಾದೃಷಭೇ ಪುನಃ |
ಸಂಸ್ಕೃತಾ ಕರುಣಾ ಮಧ್ಯಾ ಮೃದುರ್ಗಾಂಧಾರಕೇ ಪುನಃ||೩೦||
ದೀಪ್ರಾಯತೇ ಮಧ್ಯಮೇತೇ ಮೃದುಮಧ್ಯೆ ಚ ಸಂಸ್ಕೃತೇ |
ಮೃದುರ್ಮಧ್ಯಾಯ ತಾಖ್ಯಾಚ ಕರುಣಾ ಪಂಚಮೇ ಸ್ಥಿತಾ |
ಕರುಣಾಚಾಯತಾ ಮಧ್ಯಾಧೈವತೇ ಸಪ್ತಮೇ ಪುನಃ |
ದೀಪ್ತಾಮದ್ಯೆತಿ ತಾಸಾಂಪಜಾತೀನಾಂ ಬ್ರಮಹೇ ಭಿದಾಂ ||

ಶ್ರುತಿಗಳಲ್ಲಿ ದೀಪ್ತಾ, ಆಯತಾ, ಮೃದು, ಮಧ್ಯಾ, ಕರುಣಾ ಎಂಬ ಐದು ಜಾತಿ ಗಳಿರುತ್ತವೆ. ಷಡ್ವಾದಿ ಸ್ವರಗಳ ಶ್ರುತಿಗಳಲ್ಲಿ ಈ ಜಾತಿಗಳು ಕ್ರಮವಾಗಿ ಹೀಗಿವೆ- ಷಡ್ಡಕ್ಕಿರುವ ನಾಲ್ಕು ಶ್ರುತಿಗಳು ಕ್ರಮವಾಗಿ ದೀಪ್ತಾ, ಆಯತಾ, ಮೃದು, ಮಧ್ಯಾ ಎಂಬ ಜಾತಿಗಳಿಗೆ ಸೇರಿದಂಥವು. ಋಷಭದ ಮೂರು ಶ್ರುತಿಗಳು ಕರುಣಾ, ಮಧ್ಯಾ, ಮೃದು ಎಂಬ ಜಾತಿಗಳವು. ಗಾಂಧಾರದ ಎರಡು ಶ್ರುತಿಗಳು ದೀಪ್ತಾ, ಆಯತ ಜಾತಿಗಳವು.