ಮಧ್ಯಮದ ನಾಲ್ಕು ದೀಪ್ತಾ, ಆಯತಾ, ಮೃದು, ಮಧ್ಯಾ ಜಾತಿಗಳ ಶ್ರುತಿಗಳು.
ಪಂಚಮದ ನಾಲ್ಕು ಶ್ರುತಿಗಳು ಮೃದು, ಮಧ್ಯಾ, ಆಯತಾ, ಕರುಣಾ ಜಾತಿಗಳವು.
ಧೈವತದಲ್ಲಿ ಕರುಣಾ, ಆಯತಾ, ಮಧ್ಯಾ ಎಂಬ ಮೂರು ಜಾತಿಯ ಶ್ರುತಿಗಳಿರುವು
ದಾಗಿದೆ. ದೀಪ್ತಾ, ಮಧ್ಯಾ ಎಂಬೆರಡು ಜಾತಿಯ ಶ್ರುತಿಗಳು ನಿಷಾದ ಸ್ವರದಲ್ಲಿರುವವು.
ಇನ್ನು ಈ ಐದೂ ಜಾತಿಗಳಲ್ಲಿ ಭೇದಗಳಲ್ಲಿ ಭೇದಗಳನ್ನು ಹೇಳುತ್ತಾನೆ.
ತೀವ್ರಾ ರೌದ್ರೀ ವಜ್ರಕೋಗ್ರೆತ್ಯಕ್ಕಾದೀಪ್ತಾ ಚತುರ್ವಿಧಾ |
ಕುಮುದ್ವತ್ಯಾಯತಾ ಯಾಃ ಸ್ಯಾತ್ ಕ್ರೋಧಾ ಚಾಥ ಪ್ರಸಾರಿಣೀ |
ಸಂದೀಪಿನೀ ರೋಹಿಣೀ ಚ ಭೇದಾಃ ಪಂಚೇತಿ ಕೀರ್ತಿತಾಃ |
ದಯಾವತೀ ತಥಾ ಲಾಪಿನ್ಯಥ ಪ್ರೋಕ್ತಾ ಮದಂತಿಕಾ |
ತ್ರಯಸ್ಸೇ ಕರುಣಾ ಭೇದಾ ಮೃದೋರ್ಭೇದ ಚತುಷ್ಟಯಂ ||
ಮಂದಾ ಚ ರತಿಕಾ ಪ್ರೀತಿ: ಕ್ಷೇತಿ ಮಧ್ಯಾತು ಷಡ್ತಿದಾ |
ಛಂದೋವತೀ ರಂಜನೀ ಚ ಮಾರ್ಜನೀ ರಕಾ ತಥಾ |
ರಮ್ಯಾ ಚ ಕ್ಷೇಭಿಣೀತ್ಯಾಸಾಮಥ ಬೂಮಃ ಸ್ವರಸ್ಥಿತಿಂ |
ದೀಪ್ತಾ ಜಾತಿಯಲ್ಲಿ ತೀವ್ರಾ, ರೌದ್ರೀ, ವಜ್ರಕಾ, ಉಗ್ರಾ ಎಂಬ ನಾಲ್ಕು ಭೇದಗಳಿವೆ. ಆಯತ ಜಾತಿಯಲ್ಲಿ ಕುಮುದ್ವತೀ, ಕ್ರೋಧಾ, ಪ್ರಸಾರಿಣೀ, ಸಂದೀಪಿನೀ, ರೋಹಿಣೀ ಎಂಬ ಐದು ಭೇದಗಳಿರುತ್ತವೆ. ದಯಾವತೀ, ಆಲಾಪಿನೀ, ಮದಂತಿಕಾ ಎಂಬ ಮೂರು ಕರುಣಾ ಜಾತಿಯ ಭೇದಗಳು, ಮಂದಾ, ಪ್ರೀತಿ, ರತಿಕಾ, ಕ್ಯಾ ಎಂಬ ನಾಲ್ಕು ಭೇದಗಳು ಮೃದು ಜಾತಿಯವು. ಮಧ್ಯಾಜಾತಿಯಲ್ಲಿ ಛಂದೋವತೀ, ಮಾರ್ಜನೀ, ರಂಜನೀ, ರಕ್ತಿಕಾ, ಕೋಭಿಣೀ, ರಮ್ಯಾ ಎಂಬ ಆರು ಭೇದಗಳಿರುತ್ತವೆ. ಈ ಭೇದಗಳಲ್ಲಿ ಯಾವ ಯಾವುವು ಷಾದಿ ಸ್ವರಗಳ ಶ್ರುತಿಗಳಲ್ಲಿರುವಂಥವೆಂಬುದನ್ನು ಹೇಳುತ್ತಾನೆ.
ತೀವ್ರಾ ಕುಮುದ್ವತೀ ಮಂದಾ ಛಂದೋವತ್ಯಸ್ತು ಷಡ್ಡಗಾ
ದಯಾವತೀ ರಂಜನೀ ಚ ರತಿಕಾ ಚರ್ಷಭೇ ಸ್ಥಿತಾಃ ||
ರೌದ್ರೀ, ಕ್ರೋಧಾಚ ಗಾಂಧಾರೇ ವಜ್ರಕಾಥ ಪ್ರಸಾರಣೀ
ಪ್ರೀತಿಶ್ಚ ಮಾರ್ಜಿನೀತ್ಯತಾಃ ಶ್ರುತಯೋ ಮಧ್ಯಮಾಶ್ರಿತಾಃ
ಪ್ರತೀ ರಕ್ತಾಚ ಸಂದೀಪಿನ್ಯಾಲಾಪಿನ್ಯಪಿ ಪಂಚಮೇ
ಮದಂತೀ ರೋಹಿಣೀ ರಮ್ಯತಾಸ್ತಿ ಪ್ರಸ್ತು ಧೈವತೇ
ಉಗ್ರಾ ಚ ಕ್ಷೇಭಿಣೀತಿ ದ್ವೇ ನಿಷಾಧೇ ವಸತಃ ಶ್ರುತೀ
|| ೩೯ ||
ಷಡ್ಕದ ಶ್ರುತಿಗಳಲ್ಲಿ ತೀವ್ರಾ, ಕುಮುದ್ವತೀ, ಮಂದಾ, ಛಂದೋವತೀ ಎಂಬ ಭೇದ
ಗಳಿರುವುದಾಗಿದೆ. ಋಷಭದಲ್ಲಿ ದಯಾವತೀ, ರಂಜನೀ, ರತಿಕಾ ಎಂಬ ಭೇದಗಳಿರುವು
ದಾಗಿದೆ. ಗಾಂಧಾರದಲ್ಲಿ ರೌದ್ರೀ ಮತ್ತು ಕ್ರೋಧಾ ಎಂಬವೂ, ಮಧ್ಯಮದಲ್ಲಿ ವತ್ರಿಕಾ,
ಪ್ರಸಾರಿಣೀ, ಪ್ರೀತಿ, ಮಾರ್ಜನೀ ಎಂಬವೂ ಇರುತ್ತವೆ. ಕ್ಷಿ, ರಕ್ತಾ, ಸಂದೀಪಿನೀ,
ಆಲಾಪಿನೀ ಎಂಬವು ಪಂಚಮದಲ್ಲಿರುವ ಜಾತಿಭೇದಗಳು, ಮದಂತೀ, ರೋಹಿಣೀ
ರಮ್ಯಾ ಎಂಬವು ಧೈವತ ಶ್ರುತಿಗಳಲ್ಲಿಯೂ, ಉಗ್ರಾ, ಕೋಭಿಣೀ ಎಂಬೆರಡು ಭೇದಗಳು
ನಿಷಾದದ ಶ್ರುತಿಗಳಲ್ಲಿಯೂ ಇರುತ್ತವೆ.
ದೀಪ್ತಾಯವಾದಿ ಈ ಐದು ಶ್ರುತಿಗಳು ಸಾಮಗಾನ ಪ್ರಯೋಗದಲ್ಲಿ ರಂಜನಾರ್ಥ ವಾಗಿ ಸ್ವರಗಳಲ್ಲಿ ಸಾಧಿಸತಕ್ಕ ಗುಣವಿಶೇಷಗಳು, ಹೊರತು ಉಚ್ಚನೀಚ ಶ್ರುತಿಗಳಲ್ಲ.