ಈ ಪುಟವನ್ನು ಪ್ರಕಟಿಸಲಾಗಿದೆ
ಸಂಗೀತ ರತ್ನಾಕರ - ವ್ಯಾಖ್ಯಾನ

ಮಧ್ಯಮಸ್ಸಾಪಿಗಮಯೇರೇವಂ ಸಾಧಾರಣಂ ಮತಂ ǁ
ಸಾಧಾರಣಂ ಮಧ್ಯಮ ಮಧ್ಯಮಗ್ರಾಮಗಂ ಧ್ರುವಂǁ೮ǁ

ನಿಷಾದವು ಷಡದ ಮೊದಲ ಶ್ರುತಿಯನ್ನೂ ಋಷಭವು ಷಡದ ಕೊನೆಯ ಶ್ರುತಿ ಯನ್ನೂ ಪಡೆದು ಷಡ್ಡ ಸಾಧಾರಣವೆಂದಾಗುವುದು. ಇದೇ ರೀತಿ ಗಾಂಧಾರವು ಮಧ್ಯಮದ ಆದಿಶ್ರುತಿಯನ್ನೂ, ಪಂಚಮವು ಮಧ್ಯಮದ ಅಂತ್ಯಶ್ರುತಿಯನ್ನೂ ಪಡೆದರೆ ಆಗ ಮಧ್ಯಮ ಸಾಧಾರಣವೆಂದಾಗುವುದು. ಮಧ್ಯಮ ಸಾಧಾರಣವು ಮಧ್ಯಮ ಗ್ರಾಮದಲ್ಲಿ ಹೊರತು ಷಡ್ಡ ಗ್ರಾಮದಲ್ಲಿ ಪ್ರಯೋಗಿಸುವಂತಹುದಲ್ಲ. ಈ ಸಾಧಾರಣಕ್ರಿಯೆಗಳು ಅತಿಸೂಕ್ಷ್ಮವಾದ್ದರಿಂದ ಇವಕ್ಕೆ ಎಂದರೆ ಈ ಷಡ್ಡಮಧ್ಯಮಗಳಿಗೆ, ಕೈಶಿಕಗಳೆಂಬ ಹೆಸರಿದೆ. ಇವುಗಳನ್ನೇ ಕೆಲವರು ಗ್ರಾಮಸಾಧಾರಣಗಳೆಂದೂ ಹೇಳುತ್ತಾರೆ.

ಜಾತಿಸಾಧಾರಣವನ್ನೂ ಹೇಳುತ್ತಾನೆ-

ಏಕ ಗ್ರಾಮೋದ್ಭವಾಕಾಂಶಾಸು ಜಾತಿಪು ಯದ್ಭವೇತ್
ಸಮಾನಂ ಗಾನ ಮಾರ್ಯಾಸ್ತಜ್ಞಾತಿ ಸಾಧಾರಣಂ ಜಗು:|
ಜಾತಿ ಸಾಧಾರಣಂ ಕೇಚಿದ್ರಾಗಾನೇವ ಪ್ರಚಕ್ಷತೇǁ೧೦ǁ

ಒಂದೇ ಗ್ರಾಮದಲ್ಲಿ ಒಂದೇ ಸ್ವರವು ಅಂಶವಾಗಿಯುಳ್ಳ ಒಂದಕ್ಕಿಂತ ಹೆಚ್ಚು ಜಾತಿಗಳ ಗಾನದಲ್ಲಿ ಸಮಾನತೆಯುಂಟಾಗುವುದನ್ನೇ ಜಾತಿ ಸಾಧಾರಣವೆಂದು ಹೇಳು ತಾರೆ. ರಾಗವೆಂದರೂ ಇದೇ ಆಗಿದೆ ಎಂದೂ ಕೆಲವರು ಹೇಳುತ್ತಾರೆ.

“ಇತಿ ಸ್ವರಾಧ್ಯಾಯೇ ಪಂಚಮಂ ಸಾಧಾರಣ ಪ್ರಕರಣಂ”





(ಬಹುಶಃ ಅಪ್ರಕಟಿತ ಲೇಖನ. ಕುಕ್ಕಿಲರು ಆರಂಭಿಸಿದ್ದ “ಸಂಗೀತ ರತ್ನಾಕರ - ವ್ಯಾಖ್ಯಾನದ” ಒಂದು ಭಾಗ ಇರಬೇಕು.)