ಈ ಪುಟವನ್ನು ಪರಿಶೀಲಿಸಲಾಗಿದೆ
ಪೀಠಿಕೆ / ೩೪೫


Music of Hindustan, pp 217, 218_by Fox Strangeways, quoted in Music of India by H Popely, pp.74

ಗತಿ : ಛಂದಸ್ಸಿನಲ್ಲಿ 'ಗತಿ' ಎಂದರೆ ನಿರಂತರವಾದ ವರ್ಣೋಚ್ಚಾರ. ಈ ಗತಿ ವಿಚ್ಛಿನ್ನ ವಾಗುವುದು 'ಯತಿ'ಸ್ಥಾನದಲ್ಲಿ ಮಾತ್ರ. ಆದುದರಿಂದಲೇ ಯತಿಗೆ ವಿಚ್ಛೇದವೆಂಬ ಅರ್ಥ ವಿರುವುದು (ಯತಿರ್ವಿಚ್ಛೇದಃ ಪಿಂ. ಸೂ, ೬-೧), ಗುರುಲಘಕ್ಷರಗಳ ವಿನ್ಯಾಸವಿಶೇಷ ದಿಂದ ಈ ಗತಿಯಲ್ಲಿ ನಾನಾ ನಾನಾ ವೈಚಿತ್ರಗಳುಂಟಾಗುವುದನ್ನು ವರ್ಣವೃತ್ತಗಳಲ್ಲಿ ಕಾಣಬಹುದು. ಮಾತ್ರಾಗಣ ಛಂದಸ್ಸುಗಳ ಶ್ರವ್ಯಗುಣವು ಲಯಾಶ್ರಯವಾಗಿರುವುದಾದರೆ ವರ್ಣವೃತ್ತಗಳ ಶ್ರವ್ಯತ್ವವು ಈ ಗತಿಯಲ್ಲಿರುವುದಾಗಿದೆ. ಮಾತ್ರಾವೃತ್ತಗಳಲ್ಲಿಯೂ ಗತಿಯುಂಟು; ಅದು ಲಯಬದ್ಧವಾದ ಸಮಗತಿ, ವರ್ಣವೃತ್ತಗಳದ್ದಾದರೆ ಲಯಹೀನ ವಾದ ವಿಷಮಗತಿ. ಆ ವೈಷಮ್ಯದಲ್ಲಿರುವ ಗುರುಲಘಕ್ಷರಗಳಿಂದ 'ದಿತ್ತಾಂ ದಿತಾಂ ಆಗೇತಾಂ ಧಿಮಿತಕ ಧಿಕತಾಂ' ಎಂಬಂತಿರುವ ಮೃದಂಗದ 'ಜತಿ'ಗಳಿಗೆ ಸಮಾನವಾದ ವ್ಯಗುಣವನ್ನು ಸಂಪಾದಿಸುವುದೇಅಕ್ಷರ ಛಂದಸ್ಸುಗಳ ಪರಾಯಣವಾಗಿದೆ.* ಯಥಾಕ್ಷರವಾದ ಪಾಠದಿಂದ ಮಾತ್ರ ಈ ಶೋಭೆಯುಂಟಾಗುವುದು. ಹಾಡಿದರೆ ಅದರ ಸ್ವಾರಸ್ಯ ಕೆಟ್ಟುಹೋಗುವುದು. ಯಾವ ವೃತ್ತಗಳಲ್ಲಿ ಈ ಶೋಭೆ ಇರುವುದಿಲ್ಲವೋ ಅಥವುಗಳಲ್ಲಿ ಮಾತ್ರ ಗಾನದ ಮೂಲಕ ಶ್ರವ್ಯಗುಣವನ್ನುಂಟುಮಾಡಬೇಕು ಹೊರತು ರಚನೆಯಲ್ಲಿ ಈ ಗುಣವಿರುವ ಶಾರ್ದೂಲವಿಕ್ರೀಡಿತಾದಿ ವೃತ್ತಗಳು ಪಾಠಕ್ಕೇ ಪ್ರಶಸ್ತ ವಾದವುಗಳೆಂದು ಭರತನೇ ಹೇಳಿರುತ್ತಾನೆ- (ಭ. ನಾ. ಅ. ೧೪-೧೧೨) ವ್ಯಾಖ್ಯಾನದಲ್ಲಿ ಅಭಿನವಗುಪ್ತನೂ 'ಗೀಯಮಾನತಯಾ ಶೋಭಾತಿಶಯೋ ಭವತಿ ಶ್ಲೋಕಃ, ಸ್ರಗ್ಧರಾದೀನಾಂ ತು ಪಾಠೇನ' ಎನ್ನುತ್ತಾನೆ.

ಯತಿ : ಛಂದಶಾಸ್ತ್ರದಲ್ಲಿ 'ಯತಿ' ಎಂದರೆ ಮೇಲೆ ಹೇಳಿದಂತೆ ವಿಚ್ಛೇದ, ಪಾದವು ಅಲ್ಲಿ ತುಂಡಾಗುವುದು ಎಂದರ್ಥ 'ನಿಯತಃ ಪದವಿಚ್ಛೇದೋ ಯತಿರಿತ್ಯಭಿದೀ ಯತೇ'- (ಭ. ನಾ. ೧೫-೯೦), ತುಂಡಾಗುವುದೆಂದರೆ ವರ್ಣೋಚ್ಚಾರದಲ್ಲಿ ಎಡೆಕಡಿಯ ವುದು ಅಥವಾ ವಿರಮಿಸುವುದು. ಈ ವಿರಾಮವಿರುವುದು ವರ್ಣೋಚ್ಚಾರಕ್ಕೆ ಹೊರತು ಅದು ನಾದವಿರಾಮವಲ್ಲ. ಆದುದರಿಂದಲೇ ಶಾಸ್ತ್ರದಲ್ಲಿ 'ವಾಗ್ನಿ ರಾಮೋ ಯತಿಃ ಸಾ ಸಂಸ್ಥಾಪ್ಯತೇ ಶ್ರುತಿಸುಂದರಂ ಎಂಬ ಲಕ್ಷಣವಿರುವುದಾಗಿದೆ. ವಿರಾಮಸ್ಥಾನದಲ್ಲಿ ವರ್ಣಾಲಂಕಾರಗಳನ್ನು ಪ್ರಯೋಗಿಸಬಹುದೆಂದು ಭರತನು ಹೇಳಿರುವುದನ್ನೂ ಗಮನಿಸಿರಿ- 'ಯೇವಿರಾಮಾಃ ಸ್ಮೃತಾ ವೃತ್ತೇ ತೇಷ್ಟಲಂಕಾರ ಇಷ್ಯತೇ' | (ಭ. ನಾ. ೧೭-೧೩೮), ಅಲ್ಲಿ ತಪ್ಪದೇ ವಿರಮಿಸಬೇಕೆಂಬ ನಿಯಮಾರ್ಥದಲ್ಲಿ ಈ ವಿಚ್ಛೇದ ಸ್ಥಾನಕ್ಕೆ 'ಯತಿ' ಎಂಬ ಸಂಜ್ಞೆಯನ್ನು ಕೊಟ್ಟಿರುವುದಾಗಿದೆ. 'ಯಮ್ಯತೇ ಇತಿ ಯತಿಃ' ಎಂದು ಈ ಶಬ್ದದ ನಿಷ್ಪತ್ತಿಯಾಗುವುದು.

ಸಂಗೀತಶಾಸ್ತ್ರದಲ್ಲಿ 'ಯತಿಗೆ ವಿರಾಮ ಎಂಬ ಅರ್ಥವಿಲ್ಲ. ಅಲ್ಲಿ ಇದು ತಾಳ ಲಯಕ್ಕೆ ಸಂಬಂಧಿಸಿದ ಕಾಲನಿಯಮವಾಗಿದೆ. ತಾಳದ ಆ ಯತಿಗಳೆಂದರೆ ಪ್ರಧಾನವಾಗಿ


ಅಪದಾನ್ಯನಿಬದ್ಧಾನಿ ತಾಲೇನ ರಹಿತಾನಿ ತು | ಆತೋಷು ನಿಯುಕ್ತಾನಿ ತಾನಿತಾನಿ ತು ಕಾರಯೇತ್ || ಅನಿಬದ್ಧಾಕ್ಷರಾಣಿಸ್ಸು ರ್ಯಾನಿ ಜಾತಿಕೃತಾನಿ ತು | ಆತೋದ್ಯ ಕರಣೇಷಾಂ ವಿಧಾನಮಭಿನಿರ್ಮಿತಂ || (J. J. 2220)