ಈ ಪುಟವನ್ನು ಪ್ರಕಟಿಸಲಾಗಿದೆ

೩೪೬ / ಕುಕ್ಕಿಲ ಸಂಪುಟ

ಸಮ, ಪ್ರೋಗತ, ಗೋಪುಚ್ಚ ಎಂದು ಮೂರು ವಿಧವಾಗಿದೆ. ಗುರು, ಲಘು, ಶ್ರುತಗಳೆಂಬ ತಾಳಾಂಗಗಳಲ್ಲಿ ಇವುಗಳ ಕಾಲಮಾನಕ್ಕೆ ಕ್ರಮವಾಗಿ ವಿಲಂಬಿತ, ಮಧ್ಯ, ದ್ರುತಗಳೆಂಬ ಸಂಜ್ಞೆ- ಮೊದಲು ಗುರು, ಮಧ್ಯ, ಲಘು ಕೊನೆಗೆ ದ್ರುತ ಇದ್ದರೆ ತೋಗತವೆಂದೂ, ಇದಕ್ಕೆ ವಿರುದ್ಧ ಕ್ರಮದಲ್ಲಿದ್ದರೆ ಗೋಪುಚ್ಛಯತಿ ಎಂದೂ, ಒಂದೇ ಲಯದ ಅಂಗಗಳಿರುವುದಾದರೆ ಸಮಯತಿ ಎಂದೂ ಕರೆಯಲ್ಪಡುತ್ತದೆ. ಇವಲ್ಲದೆ ಮೃದಂಗಯತಿ, ಡಮರುಯತಿ, ಎಂಬ ಇನ್ನೆರಡು ವಿಧದ ಲಯವಿನ್ಯಾಸಗಳೂ ಇವೆ. ಮಧ್ಯದ ಅಂಗ ದೊಡ್ಡದಾಗಿದ್ದರೆ ಅದು 'ಮೃದಂಗಯತಿ' (Isl, olo, oso). ಮಧ್ಯ ಸಣ್ಣದಾಗಿರುವುದು 'ಡಮರು' (SOS, sls, lol, sol). ಮೂರಕ್ಕಿಂತ ಹೆಚ್ಚು ಅಂಗಗಳಿದ್ದರೂ ಇದೇ ಕ್ರಮ. ಅಂಥಲ್ಲಿ ಸೋತೋಗತವೆಂದರೆ (slosol) ಹೀಗೆ ಮೃತಮವಾಗಿರುವುದು ಎಂಬ ಲಕ್ಷಣವನ್ನು ಕೆಲವರು ಹೇಳುತ್ತಾರೆ. ಇಲ್ಲಿಯೂ ನಿಯಮಾರ್ಥದಲ್ಲಿಯೇ 'ಯತಿ' ಎಂಬ ಹೆಸರು ಬಂದಿರುವುದಾಗಿದೆ.

ಗಣ : ಛಂದಸ್ಸಿನಲ್ಲಿ ಗಣವೆಂದರೆ ಚತುರ್ಮಾತ್ರಾಗಣವೆಂದೇ ಗೃಹೀತವಾದ ಅರ್ಥವಿರು ವುದು- 'ಲಃ ಸಮುದ್ರಾ ಗಣಃ (ಪಿಂ. ಸೂ.-). ಈ ಮಾತ್ರಾಗಣವೇ 'ಅಂಶ'ವೆಂದೂ ಕರೆಯಲ್ಪಡುತ್ತದೆ. ಗಣಕ್ಕೆ ಒಳಪಟ್ಟ ಅಕ್ಷರಗಳು ಮಧ್ಯವಿಚ್ಛೇದವಿಲ್ಲದೆ ಗುಂಪಾಗಿ ಉಚ್ಚರಿಸಲ್ಪಡುವುದರಿಂದ ಗಣ ಎಂಬ ಹೆಸರು ಅನ್ವರ್ಥವಾಗಿ ಬಂದಿದೆ. 'ಅಂಶ'ವೆಂದರೆ ಪ್ರತ್ಯೇಕ ವಿಭಾಗವೆಂದರ್ಥ. ಈ ಗುಂಪು ಅಥವಾ ವಿಭಾಗವು ಗುರುಲಕ್ಷರಗಳನ್ನು ಆಶ್ರಯಿಸಿಕೊಂಡಿರುವುದು- 'ಮಾತ್ರಾಗಣವಿಭಾಗಸು, ಗುರುಲಘಾಕ್ಷರಾಶ್ರಯಃ' (ಭ. ನಾ. ೧೪-೧೨೪). ಎಂದರೆ ಗುರ್ವಕ್ಷರವು ಎರಡು ಗಣಗಳ ಮಧ್ಯಕ್ಕೆ ಸಿಕ್ಕದಂತೆ ಅಕ್ಷರ ವಿನ್ಯಾಸವಿರುವುದರಿಂದ ಈ ವಿಭಾಗವು ವ್ಯಕ್ತವಾಗುವುದು ಎಂದರ್ಥ. ಮ ಯ ರಸಾದಿ ಸಂಜ್ಞೆಗಳುಳ್ಳ ಮೂರು-ಮೂರು ಅಕ್ಷರಗಳಿಗೆ ರೂಢಿಯಲ್ಲಿರುವ 'ಗಣ' ಎಂಬ ಹೆಸರು ಸಾರ್ಥಕವಲ್ಲ. ಏಕೆಂದರೆ ಅವು ಬಂಧದಲ್ಲಿ ಪ್ರತ್ಯೇಕ ಗುಂಪುಗಳಾಗಿ ಇರುವುದಿಲ್ಲ. ವರ್ಣೋಚ್ಚಾರದಲ್ಲಿಯೂ ಈ ವಿಭಾಗವು ವ್ಯಕ್ತವಾಗತಕ್ಕದಲ್ಲ. ವರ್ಣವೃತ್ತಗಳಲ್ಲಿಯ ಗುರುಲಘುವಿನ್ಯಾಸವನ್ನು ಸೂತ್ರದಲ್ಲಿ ಸಂಕ್ಷೇಪಿಸಿ ಹೇಳುವ ಸೌಲಭ್ಯಕ್ಕಾಗಿ ಮಾತ್ರ ಪಿಂಗಳನು ಈ 'ತ್ರಿಕ'ಗಳನ್ನು ಕಲ್ಪಿಸಿಕೊಂಡದ್ದಾಗಿದೆ ಹೊರತು ಬೇರಾವ ಪ್ರಯೋಜನವೂ ಇದಕ್ಕಿದ್ದಂತೆ ಕಾಣುವುದಿಲ್ಲ.* ಮೂರು ಅಕ್ಷರಗಳ ಗಣಗಳನ್ನೇ ಕಲ್ಪಸಿದ್ದರ ಔಚಿತ್ಯ ವಾದರೂ ಲಕ್ಷಣವನ್ನು ಸೂತ್ರಗಳಲ್ಲಿ ಸಂಕ್ಷೇಪಿಸಿ ಹೇಳುವ ಸೌಲಭ್ಯದೃಷ್ಟಿಯಿಂದಲೇ ಆಗಿದೆ. ಹೇಗೆಂದರೆ, ನಾಲ್ಕು ಅಕ್ಷರಗಳದ್ದಾದರೆ ಗಣಗಳ ಸಂಖ್ಯೆ ಹದಿನಾರಾಗುವುದರಿಂದ ಪ್ರತಿಯೊಂದರ ಗುರುಲಘುವಿನ್ಯಾಸಗಳು ನೆನಪಿನಲ್ಲಿ ಉಳಿಯುವುದು ಸುಲಭವಲ್ಲ, ಐದು ಅಕ್ಷರಗಳದ್ದಾದರೆ ಮತ್ತೂ ಕಷ್ಟ. ಎರಡಕ್ಷರಗಳದ್ದಾದರೆ ಗಣಸಂಖ್ಯೆ ಕಡಿಮೆ ಯಾಗುವುದಾದರೂ ವೃತ್ತಲಕ್ಷಣಗಳನ್ನು ನಿರೂಪಿಸಲು ಸಂಜ್ಞಾಕ್ಷರಗಳ ಸಂಖ್ಯೆ ಹೆಚ್ಚು


  • ಪಿಂಗಳನಿಗಿಂತ ಹಿಂದಕ್ಕೆ (ಭರತನ ಕಾಲದಲ್ಲಿ) ಮ ಯ ರ ಸಾದಿ ಅಕ್ಷರಗಣಗಳಿಂದ ಲಕ್ಷಣ ಹೇಳುವ ಸಂಪ್ರದಾಯವಿದ್ದಿಲ್ಲವೆಂದು ಅಭಿನವಗುಪ್ತನೇ ಹೇಳಿದ್ದಾನೆ- “ತತ್ರೇಹಾಧ್ಯಾಯೇ ಭರತಮುನಿಕೃತಮಿತಿ ತ್ರಿಕೈರ್ಮಕಾರಾದಿಭಿಃ ಕೈಶ್ಚಿತ್ ಕಂಚಿಲ್ಲ ಕ್ಷಣಂ ಸ್ವೀಕೃತಮಿತಿ ದ್ವಿವಿಧಃ ಪಾಠದೃಶ್ಯತೇ ||- (ಭ, ನಾ. ೧೪-೧೨); ಟಿ-ಪಿಂಗರ್ಲಾ ಪೂರ್ವಂ ಛಂದೋಲಕ್ಷಣಂ ಗುರುಲಘುಸಂಖ್ಯಾನೇನೈವ ವ್ಯವಹೃತ ಮಿತಿ ದೈತ್ಯತೇ ನ ತು ತ್ರಿಕೈರಿತಿ ||