ಈ ಪುಟವನ್ನು ಪ್ರಕಟಿಸಲಾಗಿದೆ

೩೮೬ / ಕುಕ್ಕಿಲ ಸಂಪುಟ

ಕೋಷ್ಟಕಗಳಲ್ಲಿ ಭಾರತೀಯ ಸಂಗೀತ, ಪಾಶ್ಚಾತ್ಯ ಸಂಗೀತ ಮತ್ತು ಅರಬೀ ಸಂಗೀತಗಳ ಪುರಾತನ ಸ್ವರಗ್ರಾಮಗಳಲ್ಲಿನ ಸ್ವರಭೇದಗಳು, ಕಂಪನಪ್ರಮಾಣಗಳು, ಸ್ವರಕಂಪನ ಸಂಖ್ಯೆಗಳು, ಶ್ರುತಿಪ್ರಮಾಣಗಳು ಮತ್ತು ಮುಕ್ತ ತಂತ್ರೀವಾದದಿಂದ ಪ್ರತಿಯೊಂದು ಶ್ರುತಿನಾದಕ್ಕಿರುವ ಉತ್ತರೋತ್ತರ ಉತ್ಕರ್ಷ ಪ್ರಮಾಣಗಳನ್ನು ಕೊಟ್ಟಿದ್ದಾರೆ. ಅಲ್ಲದೆ ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ಸುಮಾರು ೭೫ ಸಂಸ್ಕೃತ ಮತ್ತು ಇಂಗ್ಲಿಷ್ ಗ್ರಂಥಗಳ ಅಧ್ಯಯನದ ಫಲವಾಗಿ ಈ ಗ್ರಂಥ ರೂಪುಗೊಂಡಿದೆ ಎಂದು ಸ್ಪಷ್ಟವಾಗುತ್ತದೆ. ಓದುಗನಿಗೆ ದಿಗ್ರಮೆಯನ್ನುಂಟುಮಾಡುವ ಈ ಗ್ರಂಥಕ್ಕೆ ಚಿಕ್ಕದೊಂದು ಮುನ್ನುಡಿಯಲ್ಲಿ ಬರೆದ ಶ್ರೀ ಸೇಡಿಯಾಪು ಕೃಷ್ಣಭಟ್ಟರ ಮಾತುಗಳು ಪುಸ್ತಕದ ಮಹತ್ವವನ್ನೂ, ಯೋಗ್ಯತೆಯನ್ನೂ ಸಾರುತ್ತವೆ. “ವಿದ್ವತ್ ಪರೀಕ್ಷೆಗಾಗಿ ಅಭ್ಯಾಸ ಮಾಡುತ್ತಿದ್ದ ಸಮಯ ದಲ್ಲಿ ಛಂದಸೃತ್ವವನ್ನು ಮನನ ಮಾಡತೊಡಗಿದಾಗ ಅದಕ್ಕೂ, ಸಂಗೀತಶಾಸ್ತ್ರಕ್ಕೂ ಇರುವ ಅಭೇದ್ಯವಾದ ಸಂಬಂಧವು ನನಗೆ ಗೋಚರವಾಯಿತು. ಮತ್ತು ಛಂದಸ್ಸಿನ ಯಥಾರ್ಥ ಜ್ಞಾನಕ್ಕೆ ಸಂಗೀತದ ಮೂಲತತ್ವಗಳ ಜ್ಞಾನವು ಅಪರಿಹಾರ್ಯವೆಂಬ ಸತ್ಯವೂ ಸ್ಪುಟವಾಯಿತು... ಅದಕ್ಕಾಗಿ ಅನೇಕ ಸಂಗೀತ ಪಠ್ಯಪುಸ್ತಕಗಳನ್ನೂ, ಭಾರತೀಯ ಸಂಗೀತ ಸಿದ್ಧಾಂತಗಳನ್ನು ವಿವರಿಸಹೊರಟ ಆಧುನಿಕ ವಿಮರ್ಶಕರ ಹಲವು ಲೇಖನ ಗಳನ್ನೂ ಓದಿ ನೋಡಿದೆ. ಇಷ್ಟರಿಂದ ತೃಪ್ತನಾಗದೆ ನೇರವಾಗಿ ನಮ್ಮ ಸಂಗೀತಶಾಸ್ತ್ರ ಗ್ರಂಥಗಳನ್ನೇ ಓದುವ ಪ್ರಯತ್ನ ಮಾಡಿದೆ. ಈ ಪರಿಶ್ರಮದ ಫಲವಾಗಿ ಛಂದಸ್ತತ್ವಗಳ ಜ್ಞಾನಕ್ಕೆ ಸಾಕಷ್ಟು ಸಾಹಾಯ ದೊರಕಿದರೂ, ಕುತೂಹಲವು ಕವಲೊಡೆದು ಬೇರೆ ಹಲವು ಸಮಸ್ಯೆಗಳು ಹುಟ್ಟಿಕೊಂಡವು. ಶ್ರುತಿ ಎಂದರೇನು? ಸ್ವರವೆಂದರೇನು? ಇವುಗಳ ಪರಸ್ಪರ ಭೇದವೇನು, ಸಂಬಂಧವೇನು? ಇವು ಸ್ವರಾವಯವಗಳೇ? ಸಹಜವಾಗಿ ಸಮ ವಿಭಾಗಗಳೇ ಆಗಿರಬೇಕಾದ ಇಪ್ಪತ್ತೆರಡು ಶ್ರುತಿಗಳಲ್ಲಿ ಏಳೋ ಹನ್ನೆರಡೋ ಆಗಿರುವ ಪ್ರಚಲಿತ ಸ್ವರಗಳ ಸಮನ್ವಯ ಹೇಗೆ? ಹಾಗೂ ಶ್ರುತಿಗಳೆಂದರೆ ಆಪಾತತಃ ನಾದಭೇದ ಗಳೆಂದೇ ತೋರುತ್ತಿರುವಾಗ, ಸ್ವರಗಳೆಂದರೂ ನಾದಭೇದಗಳೇ ಆಗಿರುವಾಗ, ಶ್ರುತಿ, ಸ್ವರ ಎಂಬ ಭಿನ್ನ ಕಲ್ಪನೆಗಳೇಕೆ? ಶ್ರುತಿಗಳು ಸ್ವರಾವಯವಗಳೆಂದಾದರೆ, ಸ್ವರದಲ್ಲಿ ಅವು ಬೇರೆಬೇರಾಗಿ ಏಕೆ ಶ್ರವಣ ಗೋಚರವಾಗುವುದಿಲ್ಲ? ಇತ್ಯಾದಿ ಇತ್ಯಾದಿ. ನನಗೆ ಈ ಸಮಸ್ಯೆಗಳ ಪರಿಹಾರವು ಸ್ವತಃ ಸಾಧ್ಯವಾಗದೆಂದರಿತು, ಅನೇಕ ಮಂದಿ ಸಂಗೀತ ಗಾರರನ್ನು, ಸಂಗೀತ ವಿದ್ವಾಂಸರನ್ನು ಸಂಗೀತ ಶಾಸ್ತ್ರ ಪರಿಣತರನ್ನು ಸಹ ಕಂಡು ಪ್ರಶ್ನಿಸಿದೆ. ಒಬ್ಬೊಬ್ಬರು ಒಂದೊಂದು ವಿಧವಾಗಿ ಹೇಳಿದರು ಹೊರತು, ಮನವೊಪ್ಪುವ ಯಾವ ಸಮಾಧಾನವೂ ನನಗೆ ಲಭಿಸಲಿಲ್ಲ... ಇದೀಗ ಆ ನನ್ನ ಕುತೂಹಲಕ್ಕೆ ವಿಶ್ರಾಂತಿ ಲಭಿಸಿರುವುದನ್ನು ತಿಳಿಸಲು ಸಂತೋಷವಾಗುತ್ತದೆ. ಗಾತ್ರದಲ್ಲಿ ಚಿಕ್ಕದಾದರೂ ಅತಿ ಮಹತ್ವವುಳ್ಳ ಈ ಶಾಸ್ತ್ರೀಯ ನಿಬಂಧದಿಂದ ನಮ್ಮ ಪುರಾತನ ಸಂಗೀತಸ್ವರೂಪದ ಮೇಲೆ ಹೊಸ ಬೆಳಕು ಬಿದ್ದಂತಾಗಿದೆ. ಭರತ, ಮತಂಗ, ಅಭಿನವಗುಪ್ತಾದಿ ಪುರಾತನ ಶಾಸ್ತ್ರಕಾರರು 'ಶ್ರುತಿ' ಎಂಬುದನ್ನು ಷಡ್ವಾದಿ ಸ್ವರಸ್ಥಾನಗಳ ನಿರ್ಣಯಕ್ಕಿರುವ 'ನಾದದ ಒಂದು ಮಾನ' ಎಂಬ ಪಾರಿಭಾಷಿಕವಾದ ಅರ್ಥದಲ್ಲಿ ಬಳಸಿದ್ದರೆಂಬುದನ್ನೂ, ಅದಕ್ಕಿಂತ ಈಷನ್ನಿನ್ನವಾಗಿ ಶಾರ್ಙ್ಗದೇವನು 'ಶ್ರುತಿ' ಎಂಬುದನ್ನು 'ನಾದಭೇದ'ವಾಗಿ ಏಕೆ ಪ್ರತಿಪಾದಿಸಿದನೆಂಬುದನ್ನೂ ಅನಂತರಕಾಲೀನ ಶಾಸ್ತ್ರಕಾರರು ಹಾಗೂ ಆಧುನಿಕ ವಿಮರ್ಶಕರು ಭರತೋಕ್ತವಾದ ಪರಿಭಾಷಾರ್ಥವನ್ನು ಗ್ರಹಿಸದೆ ತಮ್ಮ ಕಾಲದಲ್ಲಿ ಸ್ಥಾನಚ್ಯುತವಾಗಿದ್ದ ಸಪ್ತಸ್ವರಗಳಲ್ಲಿ ಆ ಇಪ್ಪತ್ತೆರಡು ಶ್ರುತಿಗಳನ್ನು ಶಾಸ್ತ್ರಗೌರವಕ್ಕಾಗಿ ಮಾತ್ರ ಹೇಗೆ ಸಮನ್ವಯಿಸುವ ವ್ಯರ್ಥ ಪ್ರಯತ್ನ ಮಾಡಿದರು ಮತ್ತು ಶ್ರುತಿಗಳ