ಈ ಪುಟವನ್ನು ಪ್ರಕಟಿಸಲಾಗಿದೆ
ಒಂದು ಮಹಾ ಭಾರತೀಯ ವ್ಯಕ್ತಿತ್ವ / ೩೮೭

(ಶ್ರುತಿನಾದಗಳ) ಪ್ರಮಾಣದಲ್ಲಿ ಅಸಮತೆಯನ್ನು ಹೇಗೆ ಪ್ರತಿಪಾದಿಸಿದರೆಂಬುದನ್ನೂ ಇದರಿಂದ 'ಇಪ್ಪತ್ತೆರಡು ಶ್ರುತಿಗಳು' ಎಂಬುದು ಇಂದಿನ ನಮ್ಮ ಸಂಗೀತಜ್ಞರಿಗೆ ಆಜ್ಞೆಯ ವಾದ ಒಂದು ಕೇವಲ ಶ್ರದ್ಧಾ ವಿಷಯವಾಗಿ ಪರಿಣಮಿಸಿರುವುದನ್ನೂ, ಪ್ರಚಲಿತ ಸ್ವರಗಳು ಶಾಕ್ರೋಕ್ತ ಶ್ರುತಿನಿಯತಗಳಲ್ಲವೆಂಬುದನ್ನೂ ಈ ನಿಬಂಧದಿಂದ ತಿಳಿದುಕೊಳ್ಳಬಹು ದಾಗಿದೆ... ಸಂಸ್ಕೃತದಲ್ಲಿರುವ ನಮ್ಮ ಪುರಾತನ ಸಂಗೀತ ಶಾಸ್ತ್ರಗ್ರಂಥಗಳನ್ನೆಲ್ಲ ವೆಂಬಂತೆ ಸಾವಧಾನವಾಗಿ, ಕೂಲಂಕಷವಾಗಿ ಪರಾಮರ್ಶಿಸಿ ನಿಜಾರ್ಥಗಳನ್ನು ಸಂಶೋಧಿಸಿ ತೆಗೆದು ವಾಚಕ ಲೋಕದ ಮುಂದಿಟ್ಟಿರುವ ಈ ಗ್ರಂಥದ ಮಹತ್ವವನ್ನು ಸಂಗೀತಶಾಸ್ತ್ರ ಜಿಜ್ಞಾಸೆಯುಳ್ಳವರು ಓದಿಯೇ ತಿಳಿದುಕೊಳ್ಳಬೇಕು."
ಕುಕ್ಕಿಲರ ಈ ಗ್ರಂಥದಲ್ಲಿ ಪ್ರತಿಪಾದಿತವಾಗಿರುವ ಕೆಲವಂಶಗಳು ಕ್ರಾಂತಿಕಾರಕ ಸ್ವರೂಪವುಳ್ಳವುಗಳು, ಅನೇಕ ಸ್ವಯಂಘೋಷಿತ ವಿದ್ವಾಂಸರಿಗೂ ಅವುಗಳಿಂದ ಅಸಮಾಧಾನ ಉಂಟಾದರೆ ಆಶ್ಚರ್ಯವಿಲ್ಲ. ಆದರೆ ಶಾಸ್ತ್ರಗ್ರಂಥಗಳ ತಲಸ್ಪರ್ಶಿಯಾದ ಅಧ್ಯಯನ, ಸತ್ಯಾನ್ವೇಷಣೆಯನ್ನೇ ಲಕ್ಷ್ಮವಾಗಿರಿಸಿಕೊಂಡ ಚಿಂತನಕ್ರಮ, ಇವುಗಳಿಂದ ಅವರು ರೂಢಿಸಿಕೊಂಡ ಅಸಾಮಾನ್ಯವಾದ ಆತ್ಮವಿಶ್ವಾಸದಿಂದ ಮೂಡಿಬಂದ ಅವರ ಸಿದ್ಧಾಂತಗಳನ್ನು ಅದೇ ಸ್ತರದಲ್ಲಿ ಪ್ರಶ್ನಿಸುವುದು ಯಾರಿಗಾದರೂ ಅಸಾಧ್ಯವೆಂದೇ ಹೇಳಬೇಕು. ಹಾಗಾಗಿ ಕುಕ್ಕಿಲ ಕೃಷ್ಣ ಭಟ್ಟರ ಕೃತಿಗಳು, ಅವುಗಳ ಮೂಲಕ ಅವರು ಪ್ರತಿಪಾದಿಸಿದ ಸಿದ್ದಾಂತಗಳು ಸಾವಿರ ಕಾಲ ಎಣೆಯಿಲ್ಲದ ಮರುಗಿನಿಂದ ಹೊಳೆಯು ತ್ತಿರುತ್ತವೆ.
ಕುಕ್ಕಿಲರ ಸತ್ಯನಿಷ್ಠೆಯ ಕುರಿತು ಒಂದು ಮಾತು ಹೇಳಬೇಕೆನಿಸುತ್ತದೆ. ಪಾರ್ತಿಸುಬ್ಬನ ಯಕ್ಷಗಾನ ಪ್ರಬಂಧಗಳ ಮೇಲೆ ಕೇರಳದ ಕೊಟ್ಟಾರಕರ ರಾಜನ ರಾಮಾಯಣ ಪ್ರಬಂಧಗಳ ಪ್ರಭಾವ ಇದೆ ಎಂದು ಸೋದಾಹರಣವಾಗಿ ಅವರು ತಮ್ಮ ಬರಹಗಳಲ್ಲಿ ಸಮರ್ಥಿಸಿದ್ದಾರೆ. ಆದರೆ ಕೇರಳೀಯರಾದ ಒಬ್ಬ ಶಾಲಾ ಇನ್ಸ್‌ ಪೆಕ್ಟರರು ಯಕ್ಷಗಾನದ ಪ್ರೇರಣೆಯಿಂದ ಕಥಕಳಿ ಹುಟ್ಟಿಕೊಂಡಿತು ಎಂದು ಹೇಳಿದ್ದರಂತೆ. ಅವರ ಈ ಮಾತನ್ನು ಕೇಳಿ ಹಲವರು ಅದನ್ನೇ ಪ್ರತಿಧ್ವನಿಸತೊಡಗಿದ್ದರು. ಕುಕ್ಕಿಲರು ಅದನ್ನು ಖಂಡಿಸಿದ್ದರು. ಅವರ ಸಮರ್ಥನೆಯನ್ನು ಸಂಯುಕ್ತಿಕವಾಗಿ ನಿರಾಕರಿಸಲಾಗದಿದ್ದರೂ “ಏನೇ ಇರಲಿ. ಇದು ಕಾಸರಗೋಡು ಕನ್ನಡ ನಾಡಿನ ಭಾಗ ಎಂದು ಸಾಧಿಸಲಿಕ್ಕೆ ಅನುಕೂಲವಾಗುತ್ತದೆ' ಎಂದೂ ಹೇಳಿದರು. ಅದನ್ನು ಕೇಳಿ ಕುಕ್ಕಿಲರಿಗೆ ತುಂಬ ಬೇಸರವೂ ಆಯಿತು. “ಸಂಶೋಧನೆಯ ಗುರಿ ಸತ್ಯಾನ್ವೇಷಣೆಯೇ ಹೊರತು ತಾತ್ಕಾಲಿಕ ವಾದ ರಾಜಕೀಯಾದಿ ಪ್ರಯೋಜನಗಳಲ್ಲ. ಸಂಶೋಧನೆಯ ಸಂದರ್ಭದಲ್ಲಿ ಇಂತಹ ವಿಷಯಗಳನ್ನು ಎಳೆದು ತರುವುದು ತಪ್ಪು, ಸತ್ಯಕ್ಕೆ ಅಪಚಾರ” ಎಂದಿದ್ದರು.
ಸಂಶೋಧನೆಯ ವಿಷಯ ಯಾವುದೇ ಇರಲಿ, ಅದಕ್ಕೆ ಸಂಬಂಧಿಸಿದಂತೆ ವಿಶಾಲವಾದ ಕ್ಷೇತ್ರದಲ್ಲಿ ಅಧ್ಯಯನ ಮಾಡಿ ಆ ಕ್ಷೇತ್ರದಲ್ಲಿ ತಮ್ಮ ಸಂಶೋಧನೆಯ ವಿಷಯವನ್ನು ಗುರುತಿಸಿಕೊಂಡು ತೌಲನಿಕ ಪರಾಮರ್ಶೆಯ ಮೂಲಕ ತೀರ್ಮಾನಕ್ಕೆ ಬರುವ ಪ್ರವೃತ್ತಿ ಕುಕ್ಕಿಲರದು. ವಿಷಯಕ್ಕೆ ಸಂಬಂಧಿಸಿದ ಮೂಲಗ್ರಂಥಗಳನ್ನು, ಆಕರಗಳನ್ನು ನೇರವಾಗಿ ಅಧ್ಯಯನ ಮಾಡುವುದು ಅವರ ಕಾರ್ಯವೈಖರಿಯಾಗಿತ್ತು ವಿನಾ ಎರವಲಾಗಿ ತಂದ ತಿಳುವಳಿಕೆಯಿಂದ ಬರುವ 'ಪ್ರತಿಫಲಿತ ವೈಭವ' (reflected glory)ವನ್ನು ಅವರು ಎಂದೂ ಹಂಬಲಿಸಲಿಲ್ಲ. ಮುಳಿಯ ತಿಮ್ಮಪ್ಪಯ್ಯ, ಮಂಜೇಶ್ವರ ಗೋವಿಂದ ಪೈ, ಸೇಡಿಯಾಪು ಕೃಷ್ಣ ಭಟ್ಟ, ಮೊದಲಾದ ಕೆಲವೇ ಕೆಲವು ಮಂದಿಯಲ್ಲಿ ಕಂಡುಬರುವ,