ಈ ಪುಟವನ್ನು ಪರಿಶೀಲಿಸಲಾಗಿದೆ

ಪ್ರಸ್ತಾವನೆ

ಕನ್ನಡದ ಅಗ್ರಗಣ್ಯ ಸಂಶೋಧಕ ವಿದ್ವಾಂಸರಲ್ಲೊಬ್ಬರಾದ ಶ್ರೀ ಕುಕ್ಕಿಲ ಕೃಷ್ಣ ಭಟ್ಟರ (೧೯೧೧-೧೯೮೮) ಬಿಡಿ ಬರಹಗಳ ಮತ್ತು ಅವರ ಕುರಿತಾದ ಕೆಲವು ಸಂಸ್ಮರಣ ಲೇಖನಗಳ ಈ ಸಂಪುಟವನ್ನು ವಾಚಕರ ಮುಂದಿಡಲು ತುಂಬ ಸಂತೋಷವಾಗುತ್ತಿದೆ. ಹಲವು ವರ್ಷಗಳ ಹಿಂದೆಯೆ ಸಂಕಲ್ಪಿಸಿದ್ದ ಈ ಕೆಲಸ, ಈಗ ಕೈಗೂಡಿದೆ. ಈ ಸಂಪುಟ ದಲ್ಲಿ ಎರಡು ಭಾಗಗಳಿದ್ದು, ಮೊದಲ ಭಾಗದಲ್ಲಿ ಕುಕ್ಕಿಲರ ಪ್ರಕಟಿತ ಅಪ್ರಕಟಿತ ಲೇಖನಗಳಿದ್ದು, ಎರಡನೆಯ ಭಾಗವಾದ 'ಕುಕ್ಕಿಲ ಪ್ರಶಸ್ತಿ'ಯಲ್ಲಿ ಅವರನ್ನು ಹತ್ತಿರ ದಿಂದ ಬಲ್ಲ ನಾಲ್ಕಾರು ಮಹನೀಯರು ಬರೆದ ಸಂಸ್ಮರಣ ಲೇಖನಗಳಿವೆ.

ದಿ| ಕೃಷ್ಣ ಭಟ್ಟರ ಬರವಣಿಗೆಯು ಗಾತ್ರದಲ್ಲಿ ದೊಡ್ಡದಲ್ಲ. ಆದರೆ ಅವರು ಬರೆದುದೆಲ್ಲ ಘನವಾದುದು, ಆ ಆ ಕ್ಷೇತ್ರದಲ್ಲಿ ಮೌಲಿಕವೂ, ಮಾರ್ಗದರ್ಶಕವೂ ಆದುದು. ಅವರು ಸಂಪಾದಿಸಿದ 'ಛಂದೋಂಬುಧಿ', 'ಪಾರ್ತಿಸುಬ್ಬನ ಯಕ್ಷಗಾನಗಳು ಮತ್ತು ಅವರ ಸಂಶೋಧನಾತ್ಮಕ ಕೃತಿ 'ಭಾರತೀಯ ಸಂಗೀತ ಶಾಸ್ತ್ರ'- ಇವು ಸಂಬಂಧಿತವಾದ ಮೂರು ಕ್ಷೇತ್ರಗಳಲ್ಲಿ ಆಚಾರಕೃತಿಗಳೆಂದು ಮನ್ನಣೆ ಗಳಿಸಿವೆ. 'ಛಂದೋಂಬುಧಿ'ಯು ಸುವ್ಯವಸ್ಥಿತ ಗ್ರಂಥ ಸಂಪಾದನೆಗೆ, ತಾತ್ವಿಕ ವಿವರಣೆಗಳಿಗೆ ಮಾದರಿ. 'ಪಾರ್ತಿಸುಬ್ಬನ ಯಕ್ಷಗಾನಗಳು ಯಕ್ಷಗಾನ ಸಾಹಿತ್ಯ ರಂಗದಲ್ಲಿ ಅಂತಹ ಮೊದಲ ಕೃತಿಯಾಗಿದೆ. 'ಭಾರತೀಯ ಸಂಗೀತ ಶಾಸ್ತ್ರ' ಕೃತಿಯಲ್ಲಿ ಸಂಗೀತಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ಕಠಿನವಾದ ತಾತ್ವಿಕ, ಪರಿಕಲ್ಪನಾತ್ಮಕ ವಿಷಯಗಳ ಕುರಿತು ಅತ್ಯಂತ ಖಚಿತವಾದ ನೋಟಗಳು, ವಿವರಣೆ, ತೀರ್ಮಾನಗಳು ಇವೆ. ಇನ್ನೋರ್ವ ಮಹಾನ್ ಪಂಡಿತ ದಿ| ಸೇಡಿಯಾಪು ಅವರು ಹೇಳಿರುವಂತೆ, ಸಂಗೀತ ಸಂಗೀತ ಶಾಸ್ರೋಕ್ತವಾದ 'ಇಪ್ಪತ್ತೆರಡು ಶ್ರುತಿಗಳ' ವಿಚಾರವಾಗಿ, ಪ್ರಾಯಃ ಬೇರಾವ ವಿದ್ವಾಂಸರೂ ನೀಡದ ತೃಪ್ತಿಕರವಾದ ವಿವರಣೆಯನ್ನು ಕುಕ್ಕಿಲರು ನೀಡಿದ್ದಾರೆ.

ಹೀಗೆ, ಪಾಂಡಿತ್ಯ ಸಂಶೋಧನೆಗಳ ಕ್ಷೇತ್ರದಲ್ಲಿ ಗಣ್ಯರಾದ ದಿ| ಕುಕ್ಕಿಲರ ಪ್ರಕಟಿತ, ಅಪ್ರಕಟಿತ ಬಿಡಿ ಬರಹಗಳು ಒಂದೆಡೆ ಸಂಕಲಿತವಾಗಿ ಪ್ರಕಾಶಿತವಾಗುವುದು ಅಗತ್ಯವೆಂಬ ಭಾವನೆ, ಈ ಸಂಪುಟದ ಹಿಂದಿನ ಪ್ರೇರಣೆಯಾಗಿದೆ. ಇಲ್ಲಿಯ ಲೇಖನಗಳು, ಸಂಶೋಧನ ಪ್ರಪಂಚಕ್ಕೆ ಬೆಲೆಯುಳ್ಳ ಕೊಡುಗೆಗಳಾಗಿದ್ದು, ಹಲವು ಹೊಸ ತಿಳುವಳಿಕೆ ಗಳನ್ನು ಸಾಧಾರವಾಗಿ, ಮುಂದಿಡುತ್ತವೆಯೆಂಬುದು ನಮ್ಮ ನಂಬುಗೆಯಾಗಿದೆ.

ಇಲ್ಲಿ ಕೃಷ್ಣ ಭಟ್ಟರ ಒಟ್ಟು ಇಪ್ಪತ್ತಾರು ಲೇಖನಗಳಿವೆ. ಇವು ಯಕ್ಷಗಾನ, ಛಂದಶಾಸ್ತ್ರ, ನಾಟ್ಯಶಾಸ್ತ್ರ, ಸಂಗೀತಶಾಸ್ತ್ರಗಳಿಗೆ ಸಂಬಂಧಿಸಿವೆ. ಈ ಮೂರು ಕ್ಷೇತ್ರ ಗಳಲ್ಲಿ ಮತ್ತು ಸಾಂದರ್ಭಿಕವಾಗಿ ವ್ಯಾಕರಣ, ಕಾವ್ಯ, ಭಾಷಾಶಾಸ್ತ್ರ ಮೊದಲಾದುವು ಗಳಲ್ಲೂ ಅವರಿಗಿದ್ದ ಅಸಾಧಾರಣವಾದ ಪಾಂಡಿತ್ಯ ಮತ್ತು ಅತ್ಯಂತ ಸೂಕ್ಷ್ಮ, ವ್ಯಾಪಕ, ಮೂಲಗಾಮಿ ಚಿಂತನೆಗಳಿಗೆ, ನಿಖರವಾದ ಪರಿಶೀಲನಕ್ರಮ, ಐತಿಹಾಸಿಕ ದೃಷ್ಟಿ, ಬಹುಶ್ರುತತ್ವ, ಪಾಠನಿರ್ಣಯ ಶಕ್ತಿಗಳಿಗೆ ಈ ಲೇಖನಗಳ ಪುಟಪುಟಗಳು ಸಾಕ್ಷಿ ನುಡಿಯುತ್ತವೆ. ಕೃಷ್ಣ ಭಟ್ಟರ ಪಾಂಡಿತ್ಯವು ಬರಿಯ ಗ್ರಂಥಪಾಂಡಿತ್ಯ ಅಥವಾ ಪರಂಪರಾ ವಾದಿ ವಿದ್ವತ್ತಾಗದೆ, ಐತಿಹಾಸಿಕ ದೃಷ್ಟಿಯನ್ನು, ಅಂತರ್ವಿಷಯ ನೆಲೆಗಳನ್ನು, ಭೇದಕ