ಈ ಪುಟವನ್ನು ಪರಿಶೀಲಿಸಲಾಗಿದೆ

ಶೋಧನವೃತ್ತಿಯನ್ನು ಹೊಂದಿದೆ. ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಮಲೆಯಾಳ ಭಾಷೆಗಳಲ್ಲಿ ಅವರಿಗಿದ್ದ ಪಾಂಡಿತ್ಯವು ಅವರ ಸಂಶೋಧನೆಗಳಿಗೆ ಗಟ್ಟಿತನ ನೀಡಿದೆ. ಯಕ್ಷಗಾನ ಸಂಬಂಧಿಯಾದ ಬರಹಗಳಲ್ಲಿ ಕುಕ್ಕಿಲರ ಒಲವು ಮುಖ್ಯವಾಗಿ ಸಂಶೋಧನಾತ್ಮಕ, ಅರ್ಥಾತ್ ಅದರ ಮೂಲ ಮತ್ತು ಶಾಸ್ತ್ರೀಯತೆಗೆ ಸಂಬಂಧಿಸಿದ್ದು. ಯಕ್ಷಗಾನವು ಮೂಲತಃ ಒಂದು ಪ್ರಬಂಧವಾಚಿ ಶಬ್ದವೆಂದೂ, ಯಕ್ಷಗಾನ ರಂಗ ಪ್ರಕಾರವು ನಾಟ್ಯಶಾಸ್ತ್ರ ಪರಂಪರೆಯ ಶಾಸ್ತ್ರೀಯ ಕಲೆಯೆಂದೂ ಕುಕ್ಕಿಲರ ಎರಡು ಬಲವಾದ ನಿಲುಮೆಗಳು. ಅವುಗಳನ್ನವರು ಸಶಕ್ತವಾಗಿ ಪ್ರತಿಪಾದಿಸಿದ್ದಾರೆ. ನಾಟ್ಯಶಾಸ್ತ್ರ ದಲ್ಲಿ ವಿವೃತವಾದ ರಂಗಸಂಪ್ರದಾಯವು ಈಗಿನವರೆಗೆ ನಡೆದು ಬಂದಿರುವುದು ಯಕ್ಷಗಾನದಂತಹ ಪ್ರಾದೇಶಿಕ ಕಲೆಗಳ ಮೂಲಕ ಎಂದು ಬಹುಮಂದಿ ವಿದ್ವಾಂಸರು ಒಪ್ಪಿದ್ದಾರೆ. ಮೂಲತಃ ನಾಟ್ಯಶಾಸ್ತ್ರದ ರಚನೆಯೆ, ಪಾರಂಪರಿಕ ರಂಗಕಲೆಗಳನ್ನು ಆಧರಿಸಿದ್ದು. ಹಾಗಾಗಿ, ನಾಟ್ಯಶಾಸ್ತ್ರಕ್ಕೆ ಯಕ್ಷಗಾನ- ತತ್ಸಮಾನ ಕಲೆಗಳು ಮೂಲ ಎನ್ನುವುದೂ ನಿಜ. ಯಕ್ಷಗಾನದ ಸಭಾಲಕ್ಷಣದ ವಿವರಗಳು, ನಾಟ್ಯಶಾಸ್ತ್ರ ಪರಂಪರೆಗೆ ಪೂರ್ತಿಯಾಗಿ ಹೊಂದುತ್ತವೆ. ಅಂತೆಯೆ ಇನ್ನಿತರ ವಿವರಗಳೂ ಶಾಸೂಕ್ತ ರೀತಿಯಲ್ಲಿವೆ ಎಂಬುದು ಕೃಷ್ಣಭಟ್ಟರ ಮಂಡನೆ- ಬಹ್ವಂಶ ಇದು ಸತ್ಯ. ಆದರೆ ಕೆಲವೊಮ್ಮೆ ಸ್ಕೂಲ ಸಾಮ್ಯ ಮತ್ತು ಎಲ್ಲ ರಂಗಗಳಿಗೆ ಸಾಮಾನ್ಯವಾಗಿರುವ ನೆಲೆಯ ಹೋಲಿಕೆಗಳನ್ನೂ ಅವರು ಈ ಪ್ರತಿಪಾದನೆಯಲ್ಲಿ ತರುತ್ತಾರೆ.

('ಯಕ್ಷಗಾನ' ಎಂಬುದರಲ್ಲಿರುವ 'ಗಾನವನ್ನು ಆಧರಿಸಿ ಅದು ಮೂಲತಃ ಗಾನಶೈಲಿ ಎಂದು ಹಲವರಿಂದ ಪ್ರಚಲಿತವಾಗಿರುವ ಅಭಿಮತವನ್ನು ಕುಕ್ಕಿಲರು ಒಪ್ಪುವುದಿಲ್ಲ. ಇಲ್ಲಿ 'ಯಕ್ಷ' ಎಂದರೆ ಪೂಜಾರ್ಥಕ, ಅರ್ಥಾತ್ ದೇವಾಲಯ ಸೇವಾರ್ಥವೆಂದೂ, 'ಗಾನ' ಎಂದರೆ ಹಾಡಲಿಕ್ಕಿರುವ ರಚನೆ ಎಂದೂ, ತೋರಿಸಿ, ಜನಪ್ರಿಯ-ಪ್ರಚಲಿತ ಅಭಿಪ್ರಾಯವನ್ನು ನಿರಾಕರಿಸಿದ್ದಾರೆ. ಅದೇ ರೀತಿ ಕನ್ನಡ ಕಾವ್ಯಗಳಲ್ಲಿ ಉಕ್ತವಾದ 'ಎಕ್ಕಲಗಾಣ'ವೆಂಬುದು ಯಕ್ಷಗಾನವೇ ಎಂಬ ದಿ| ಮುಳಿಯ, ಕಾರಂತ ಮೊದಲಾದವರ ನಿಲುವನ್ನೂ ಇವರು ಪ್ರಶ್ನಿಸಿ ಎಕ್ಕಲಗಾಣವು ಏಕಲಗಾಯನವೆಂದೂ,. ಯಕ್ಷಗಾನಕ್ಕೂ ಸಂಬಂಧವಿಲ್ಲವೆಂದೂ ಸಾಧಾರವಾಗಿ ಸ್ಥಾಪಿಸಿದ್ದಾರೆ. 'ಎಕ್ಕಲಗಾಣ?' ಎಂಬುದು ಕುಕ್ಕಿಲರ ಅರ್ಥವಿಶ್ಲೇಷಣಾ ಸಾಮರ್ಥ್ಯದ ಉಜ್ವಲ ದೃಷ್ಟಾಂತವಾಗಿದ್ದು, ಈ ಸಂಕಲನದ ಉತ್ಕೃಷ್ಟ ಲೇಖನಗಳಲ್ಲಿ ಒಂದಾಗಿದೆ. ಯಕ್ಷಗಾನದ ಶಾಸ್ತ್ರೀಯತೆಯ ಕುರಿತು ಹೇಳುವಾಗ, ಆ ಶಾಸ್ತ್ರೀಯತೆಯು ಯಕ್ಷಗಾನದ ತೆಂಕುತಿಟ್ಟಿಗೆ ಹೆಚ್ಚು ಅನ್ವಯಿಸುತ್ತದೆ ಎಂಬ ಸೂಚನೆಯಿದೆ. ಅವರು ನೇರವಾಗಿ ಹಾಗೆ ಹೇಳದಿದ್ದರೂ, ಆ ಅಭಿಪ್ರಾಯ ಧ್ವನಿತವಾಗುತ್ತದೆ. ಇದು, ಬಡಗುತಿಟ್ಟು ಎಂಬುದೇ ಪ್ರಾತಿನಿಧಿಕ ಯಕ್ಷಗಾನ ಎಂಬ ಡಾ| ಶಿವರಾಮ ಕಾರಂತರ ನಿಲುವಿಗೆ ಪ್ರಾಯಃ ಪ್ರತಿಕ್ರಿಯಾರೂಪದ್ದಾಗಿದೆ. ಕುಕ್ಕಿಲರ ಯಕ್ಷಗಾನ ಸಂಬಂಧಿಯಾದ ಬರಹಗಳಿಗೆ, ಕಾರಂತರ ಬರಹಗಳೇ ಒಂದು ರೀತಿಯಲ್ಲಿ (ಪೂರ್ವಪಕ್ಷದ ನೆಲೆಯಲ್ಲಿ) ಒಂದು ಮುಖ್ಯ ಪ್ರೇರಣೆಯೆನ್ನಬಹುದು.

( ಯಕ್ಷಗಾನದ ಕುರಿತು ಕುಕ್ಕಿಲರ ಇನ್ನೊಂದು ಮುಖ್ಯ ಅಭಿಪ್ರಾಯವೆಂದರೆ ಅದರ ಸಾಹಿತ್ಯ ಮತ್ತು ರಂಗರೂಪಗಳೆರಡೂ ಆಂಧ್ರಮೂಲದವುಗಳು ಎಂಬುದು. ವಿಷಯವು ಆಂಧ್ರ ಯಕ್ಷಗಾನ-ತುಲನಾತ್ಮಕ ವಿವೇಚನೆ' ಲೇಖನದಲ್ಲಿ ವಿವರಿಸಲ್ಪಟ್ಟಿದೆ, ಬೇರೆ ಕಡೆಯೂ ಸಾಂದರ್ಭಿಕವಾಗಿ ಬಂದಿದೆ. ಈ ತೀರ್ಮಾನವೂ ಸಂಯುಕ್ತಿಕವೆಂದು ತೋರುತ್ತದೆ. ಹಾಗೆಯೇ ತೆಂಕುತಿಟ್ಟು ಯಕ್ಷಗಾನವು ಕಥಕಳಿಯ (ಅಂದರೆ ಅಂದಿನ