ಈ ಪುಟವನ್ನು ಪ್ರಕಟಿಸಲಾಗಿದೆ

೩೬ / ಕುಕ್ಕಿಲ ಸಂಪುಟ

ಹಾರುವುದಕ್ಕೆ 'ಕರಸ್ಪರ್ಶಾಲಗಭ್ರಮರೀ'ಎಂದೂ ಶಾಸ್ರೋಕ್ತವಾದ ಹೆಸರುಗಳು. ಅಭಿಮನ್ಯು, ವೃಷಸೇನಾದಿ ಪುಂಡುವೇಷಗಳು ಈ 'ಕರಸ್ಪರ್ಶಾಲಗ ಭ್ರಮರಿ'ಯಿಂದ ಯುದ್ದಾದಿ ಸಂದರ್ಭಗಳಲ್ಲಿ ಕುಣಿಯುತ್ತವೆ. ತಿರುಗುಲಾಗದಲ್ಲಿ ರಂಗಸ್ಥಳದ ನಾಲ್ಕು ದಿಕ್ಕಿಗೂ ನಿತ್ತು ನಿತ್ತು ಹಾರಿ ಸುತ್ತುವುದಕ್ಕೆ 'ಸ್ಕಂಧ ಭ್ರಾಂತ'ವೆಂದು ಹೆಸರು. (ಭ್ರಾಂತ್ವಾ ತಿಷ್ಯತ್ಪತಿದಿರಂ ಸ್ಕಂಧಭ್ರಾಂತಂ ತದಾ ಬುದ್) ಮೇಲೆ ಹೇಳಿದ 'ಉತ್ಸುತೀಕರಣ'ಕ್ಕೆ ನಾವು 'ದೊಡ್ಡ ಲಾಗ'ವನ್ನುತ್ತೇವೆ. ಅದನ್ನು ಶಾಸ್ತ್ರದಲ್ಲಿ 'ದೊಾಡಲಾಗ ನೃತ್ತ'ವೆಂದೇ ಹೇಳಿದೆ. ನರ್ತನದ ಕುರಿತಾಗಿ ಯಂಚಿತ್ ಪರಿಶೀಲಿಸಿದೆವು. ಇನ್ನು ನಮ್ಮ ಯಕ್ಷಗಾನದ ಹಾಡುವಿಕೆಯ ವಿಚಾರ. ಸಾಮವೇದವೇ ಮೂಲವೆಂದು ಪ್ರಸಿದ್ದಿ ಇರುವ ನಮ್ಮ ಸಂಗೀತವು ಮೂಲತಃ ಗೀತ ವಾದ್ಯ ನೃತ್ತಗಳು ಸಂಗತವಾಗಿರುವುದಕ್ಕೆ ಸಂಗೀತವೆಂಬ ಹೆಸರು ಶಾಸ್ತ್ರಸಿದ್ಧವಾದುದು. ಈ ಸಂಗೀತ ಶಾಸ್ತ್ರ ಗ್ರಂಥಗಳು ಅನೇಕ ಹುಟ್ಟಿಕೊಂಡಿವೆ. ಭರತನು ಅತ್ಯುಕ್ತಾ, ಪ್ರತಿಷ್ಠಾ, ಮಧ್ಯಾ ಗಾಯತ್ರಾದಿ ಛಂದಸ್ಸುಗಳಿಂದ ಹುಟ್ಟಿದ ನಾನಾ ವಿಧ ವೃತ್ತ ಜಾತಿಗಳಲ್ಲಿ ತಾಲಬದ್ಧವಾಗಿ ಹಾಡಲು ಯೋಗ್ಯವಾದುವುಗಳನ್ನು ಧ್ರುವ ಪದ ಗಳೆಂದು ವಿಂಗಡಿಸಿ ನಾಟ್ಯ ಪ್ರಯೋಜವಾದ ಗೀತಸಾಹಿತ್ಯವನ್ನು ವಿಸ್ತರಿಸಿದನು-

ಗಾಂಧರ್ವ೦ ಯನ್ಮಯಾ ಪ್ರೋಕ್ತಂ ಸ್ವರತಾಲಪದಾತ್ಮಕಂ |
ಪದಂ ತಸ್ಯ ಭವೇದ್ವಸ್ತು ಸ್ವರತಾಲಾನುಭಾವಕಂ ǁ
ಯತ್ಕಿಂಚಿದಕ್ಷರಕೃತಂ ತತ್ಸರ್ವಂ ಪದಸಂಜಿತಂ |
ಅತಾಲಂ ಚ ಸತಾಲಂ ಚ ದ್ವಿಪ್ರಕಾರಂ ಚ ತದ್ಭವೇತ್ ǁ
ಸತಾಲಂ ಚ ಧ್ರುವಾರ್ತೇಷು ನಿಬದ್ಧಂ ತಚ್ಚ ವೈ ಸ್ಮೃತಂ|

(ಭ. ನಾ.)

ಈ ಧ್ರುವಪದಗಳ ಗಾನಕ್ರಮವು ಷಡ್ಡ ಮಧ್ಯಮಗ್ರಾಮಾಶ್ರಿತವಾದ ಅಷ್ಟಾದಶ ಜಾತಿಗಳ ಲಕ್ಷಣಕ್ಕೆ ಒಳಪಟ್ಟುವಾಗಿ 'ಯತ್ಕಿಂಚಿದ್ಗೀಯತೇ ಲೋಕೇ ತತ್ಸರ್ವಂ ಜಾತಿಷು ಸ್ಥಿತಂ' ಎಂಬಂತೆ ಭರತನ ಧ್ರುವ ಪದಗಳು 'ಗಾಂಧರ್ವ' (ಜಾತಿಗಾನ)ವೆಂದು ಹೆಸರು ಗೊಂಡುವು. ಮತಂಗನು ತನ್ನ ಬೃಹದ್ದೇಶಿಯಲ್ಲಿ ನಾನಾ ದೇಶಗಳಲ್ಲಿ ಆ ಕಾಲದ ರೂಢಿ ಯಲ್ಲಿದ್ದ ಗಾನಕ್ರಮಗಳನ್ನೆಲ್ಲ ಭಿನ್ನಜಾತಿಗಳ ಲಕ್ಷಣಾನುಸಾರ ವಿಶ್ಲೇಷಿಸಿ, ಆಯಾ ಜಾತಿಲಕ್ಷಣಕ್ಕೆ ಒಳಪಡುವಂಥವುಗಳನ್ನು ನೈಕಭೇದ ಭಿನ್ನವಾದ ಜಾತಿಜನ್ಯರಾಗಗಳೆಂದು ವರ್ಗೀಕರಿಸಿ ಅವುಗಳಿಗೆ ತತ್ತದ್ದೇಶನಾಮಸೂಚಕವಾದ ಹೆಸರುಗಳನ್ನು ಕೊಟ್ಟು, ಗಾಂಧರ್ವಗೀತ ಸಾಹಿತ್ಯವಾದ 'ಧ್ರುವಪದಗಳ ಬದಲು ದೇಶ ಸಾಮಾನ್ಯ ರೂಢಿಯಲ್ಲಿ 'ಏಲೆ'ಗಳೆಂದು ಪ್ರಸಿದ್ಧವಾಗಿದ್ದ ಗೀತಪ್ರಬಂಧಗಳನ್ನು 'ಏಲಾಪದ'ಗಳೆಂದು ಹೆಸರಿಸಿ ಅವುಗಳಲ್ಲಿ ದೇಶೀಯ ರೂಢಿಗೆ ಅನುಗುಣವಾಗಿ ಕರ್ಣಾಟಕ್ಕೆಲಾ, ದ್ರವಿಡೈಲಾ, ಆಂಧ್ರಲಾ ಇತ್ಯಾದಿ ವರ್ಗೀಕರಣವನ್ನು ಮಾಡಿ, ಸ್ವರತಾಲಪದಾತ್ಮಕವಾದ 'ಗಾಂಧರ್ವ'ವನ್ನು ಸರ್ವಾತ್ಮನಾ 'ದೇಶಿ'ಯನ್ನಾಗಿ ಪರಿವರ್ತಿಸಿದನು. ಅದರಿಂದಲೇ ಅವನ ಸಂಗೀತ ಶಾಸ್ತ್ರ ಗ್ರಂಥವು 'ಬೃಹದ್ದೇಶೀ' ಎಂದಾಯಿತು. ಅನಂತರ ಶಾರ್ಙ್ಗದೇವನು ಮತಂಗನ ಮತಾನು ಸಾರವಾಗಿಯೇ ತನ್ನ ಕಾಲಕ್ಕೆ ದೇಶದ ನಾನಾ ಭಾಗಗಳ ಲಕ್ಷ್ಯಮಾರ್ಗದಲ್ಲಿ ವಿಕೃತವಾಗಿದ್ದ ಮತ್ತು ವ್ಯತ್ಯಸ್ತವಾಗಿದ್ದ ದೇಶೀಯಗಾನ ಸಂಪ್ರದಾಯಗಳನ್ನೆಲ್ಲ ಸಂಗ್ರಹಿಸಿ 'ದೇಶಿ'ಯನ್ನು ಮತ್ತಷ್ಟು ವಿಸ್ತರಿಸಿ, ಆ ದೇಶೀರಾಗಗಳನ್ನು 'ಪ್ರಾಕ್ ಪ್ರಸಿದ್ಧ' 'ಅಧುನಾಪ್ರಸಿದ್ಧ' ಎಂದು ದ್ವಿಧಾ ವರ್ಗೀಕರಿಸಿದನು. ಗೀತ ಪ್ರಬಂಧಗಳಲ್ಲಿಯೂ ಆ ಕಾಲದಲ್ಲಿ ಪ್ರಸಿದ್ಧವಾದ ಭಿನ್ನ ದೇಶೀಯ ಏಲಾಪದಗಳನ್ನೂ, ಏಲೆಗಳ ಲಕ್ಷಣಗಳಿಂದ ಸ್ಪಲಿತವಾಗಿ ಅವುಗಳ ಛಾಯೆಯನ್ನು ಮಾತ್ರ ಉಳಿಸಿಕೊಂಡು ಛಂದೋಬಂಧದಲ್ಲಿಯೂ ತಾಳಗಳಲ್ಲಿಯೂ ಭಿನ್ನ