ಈ ಪುಟವನ್ನು ಪ್ರಕಟಿಸಲಾಗಿದೆ

೬೮ / ಕುಕ್ಕಿಲ ಸಂಪುಟ

ಆಸರು

(ಈ ಪದ್ಯವನ್ನೂ ದಿ| ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ತಮ್ಮ 'ಪಾರ್ತಿಸುಬ್ಬ' ಗ್ರಂಥದಲ್ಲಿ ಕೊಟ್ಟಿರುತ್ತಾರೆ.)
ಈ ಪದ್ಯದಿಂದ, ಸುಬ್ಬನು ಆಗ ವೃದ್ಧಾಪ್ಯದಲ್ಲಿದ್ದವನೆಂದು ಸ್ಪಷ್ಟವಾಗುವುದು. ಆ ಕಾರಂತರು, ದೂರ ಊರಿನ ಕುಂಬಳೆಯಲ್ಲಿದ್ದ ಮುದುಕನಾದ ಸುಬ್ಬನನ್ನೇ ಭಾಗವತಿಕ ಗಾಗಿ ಅಥವಾ ಇನ್ನಾವುದಕ್ಕೇ ಆಗಿ ಕರೆದೊಯ್ಯಬೇಕಾಗಿದ್ದರೆ ಪ್ರಾಯಶಃ ಯಕ್ಷಗಾನ ವೆಂಬುದು ಈ ಊರಿಗೆ ಅದೇ ಹೊಸತಾಗಿತ್ತೆಂದು ನ್ಯಾಯವಾಗಿ ಅನುಮಾನಿಸ ಬಹುದಾಗಿದೆ.
(ಬಾಸಿಗ : ದ. ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ ೧೯೭೧ರ ಸ್ಮೃತಿಸಂಪುಟ, ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ, ಕಾರ್ಕಳ, ೧೯೭೨)