ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ಶಾಸ್ತ್ರೀಯತೆ / ೭೧

ಎಂದರೆ ಅದು ಸಂಸ್ಕೃತ 'ಏಕಲ ಗಾಯನಃ' ಎಂಬುದರ ಅಪಭ್ರಂಶ ರೂಪ. ಯಾವುದೇ ವಾದ್ಯದ ಸಹಾಯವಿಲ್ಲದೆ ಒಬ್ಬೊಂಟಿಗನಾಗಿ ಹಾಡುವವನು ಎಂದರ್ಥ. ಎಲ್ಲ ಸಂಗೀತ ಶಾಸ್ತ್ರ ಗ್ರಂಥಗಳಲ್ಲಿಯೂ ಗಾಯಕ ಲಕ್ಷಣವನ್ನು ಹೇಳುವಲ್ಲಿ ಇದು ಬರುತ್ತದೆ. ಶಾರ್ಙ್ಗದೇವನ 'ಸಂಗೀತ ರತ್ನಾಕರ'ದಲ್ಲಿರುವ ಆ ಲಕ್ಷಣ ಶ್ಲೋಕವನ್ನು ಪರಾಂಬರಿಸಿ ದಲ್ಲಿ ಇದು ಸ್ಪಷ್ಟವಾಗುತ್ತದೆ.
ಏಕಲೋ ಯಮಲೋ ವೃಂದಗಾಯನಶ್ಚತಿ ತೀತ್ರಿಧಾ
ಏಕ ಏವ ತು ಯೋ ಗಾಯದ ಸಾವೇಕಲ ಗಾಯನಃ |
ಸದ್ವಿತೀಯೋ ಯಮಲಕೋ ಸಂದೋ ವೃಂದ ಗಾಯನ: ||

“ಏಕಲ, ಯಮಲ, ವೃಂದ-ಎಂದು ಗಾಯಕರಲ್ಲಿ ಮೂರು ಭೇದಗಳು, ಯಾವ ಗಾಯಕನು ಒಂಟಿಯಾಗಿ ಒಬ್ಬನೇ ಹಾಡುತ್ತಾನೋ ಅವನು ಏಕಲ ಗಾಯನನು, ಎರಡನೆಯವನನ್ನು ಕೂಡಿಕೊಂಡು ಹಾಡುವವನು ಯಮಲ ಗಾಯನನು, ಅನೇಕರೊಡನೆ (ವಾದಕಗಾಯಕರು) ಹಾಡುವವನು ವೃಂದಗಾಯನನೆನಿಸುತ್ತಾನೆ."

ಇದನ್ನು ಸಾಧಾರವಾಗಿಯೂ, ಸವಿಸ್ತಾರವಾಗಿಯೂ ಇತರಡೆಗಳಲ್ಲಿ ವಿವೇಚಿಸಿರು ತೇನೆ." ವಿಸ್ತಾರಭಯದಿಂದ ಇಲ್ಲಿ ಅತಿ ಸಂಕ್ಷೇಪವಾಗಿ ಸೂಚಿಸಿದ್ದೇನಷ್ಟೆ.
ಹೀಗೆ ಜಾನಪದ ಗಾನಪದ್ಧತಿ ಎಂಬುದರಿಂದ ಯಕ್ಷಗಾನವೆಂಬ ಹೆಸರು ಬಂದುದಿರ ಬೇಕೆನ್ನುವವರು, ಯಕ್ಷಗಾನವೆಂದು ಕರೆಯಲ್ಪಟ್ಟಿರುವುದೂ, ಪಡುತ್ತಿರುವುದೂ ಆ ಗೇಯ ಪ್ರಬಂಧಗಳೇ ಎಂಬ ವಾಸ್ತವಾಂಶವನ್ನು ಗಮನಿಸುವುದಿಲ್ಲ. ಇಂದಿಗೂ ಸರ್ವತ್ರ ರೂಢಿಯಲ್ಲಿ ಪಂಚವಟಿ ಯಕ್ಷಗಾನ, ಕರ್ಣಾರ್ಜುನ ಯಕ್ಷಗಾನ, ಪಾರಿಜಾತ ಯಕ್ಷಗಾನ, ಯಕ್ಷಗಾನ ನಳಚರಿತ್ರೆ ಎಂಬಂತೆ ವ್ಯವಹಾರವಿರುವುದಲ್ಲದೆ ಕವಿಗಳೇ ತಮ್ಮ ಆ ಕಾವ್ಯಗಳನ್ನು ಯಕ್ಷಗಾನಗಳೆಂದು ಕರೆದಿರುವುದು ಆ ಕೃತಿಗಳಲ್ಲೇ ಕಂಡುಬರುತ್ತದೆ. ಪ್ರತ್ಯೇಕ ಗಾನಪದ್ಧತಿ ಎಂಬ ಅರ್ಥದಲ್ಲಿ ಯಾರೂ ವ್ಯವಹರಿಸಿದ್ದಿಲ್ಲ. ಉದಾಹರಣೆಗಾಗಿ ದೇವಿದಾಸನೆಂಬ ಕವಿ ತನ್ನ 'ದೇವೀ ಮಹಾತ್ಮ' ಎಂಬ ಯಕ್ಷಗಾನದಲ್ಲಿ ಗ್ರಹಿಸಿ ಕೊಂಡಮಲ ದೇವೀ ಮಹಾತ್ಮಗಳ ವಿಹಿತಮನನಾಗಿ ವರ ಯಕ್ಷಗಾನಗಳ ಕೂಡಿ ತಿಳಿದಂತೊರೆವೆ" ಎಂದಿರುತ್ತಾನೆ. (ಇನ್ನೊಬ್ಬ ಯಕ್ಷಗಾನ ಕವಿ) ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ಎಂಬವನು, ಸಿಂಧುಶಯನನ ದಯದಿ ಯಕ್ಷಗಾನವ ಗೈದೆ' ಎಂದು ತನ್ನ 'ರುಕ್ರಾಂಗದ ಚರಿತ್ರೆ' ಯಕ್ಷಗಾನದ ಕೊನೆಯಲ್ಲಿಯೂ ಚೆನ್ನಪ್ಪನೆಂಬ ವೀರಶೈವ ಕವಿ ತನ್ನ ಕೃತಿಯ ಕೊನೆಯಲ್ಲಿ- ಶರಣಲೀಲಾ ಯಕ್ಷಗಾನವ ವಿರಚಿಸಿದೆನು ಎಂದೂ ಹೇಳಿಕೊಂಡಿರುತ್ತಾರೆ. ಆಂಧ್ರ ಯಕ್ಷಗಾನಗಳಲ್ಲಿಯೂ ಇದೇ ರೀತಿ ಕವಿವಾಕ್ಯಗಳನ್ನು ಕಾಣಬಹುದು.
ಕರ್ಣಾಟಕ ಕವಿಚರಿತ್ರೆಯಲ್ಲಿಯೂ (ಮೂರನೇ ಭಾಗ) ತಿಪ್ಪಯಾರ್ಯನೆಂಬ ಕವಿ ಕಾಳೀಯಮರ್ದನ, ಕುಚೇಲೋಪಾಖ್ಯಾನಗಳೆಂಬ ಯಕ್ಷಗಾನಗಳನ್ನು ಬರೆದಿದ್ದಾನೆ ನಂಜಯ್ಯ- ಕಪೋತವಾಕ್ಯವೆಂಬ ಯಕ್ಷಗಾನವನ್ನು ಬರೆದಿದ್ದಾನೆ. ಇವನ ಯಕ್ಷಗಾನದಲ್ಲಿ ರಾಮನು ಸುಗ್ರೀವನಿಗೆ ಹೇಳಿದ ಕಪೋತ ಕಥೆ ವಿವರಿಸಿದೆ. ಇತ್ಯಾದಿಯಾಗಿ ಕೊಟ್ಟಿರುವುದನ್ನು ಲಕ್ಷಿಸಬಹುದು. ಕಿಟ್ಟೆಲರ ಕನ್ನಡ ನಿಘಂಟುವಿನಲ್ಲಿ 'ಯಕ್ಷಗಾನ'


೧. ರಾಷ್ಟ್ರಮತ ವಿಶೇಷ ಸಂಚಿಕೆ (೧೯೬೦-೬೧)ಯಲ್ಲಿ ಪ್ರಕಟವಾದ ಈ ಲೇಖಕನ `ಎಕ್ಕಲಗಾಣ' ಎಂಬ ಲೇಖನವನ್ನು ನೋಡಬಹುದು.