ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ರಾಷ್ಟ್ರೀಯತೆ / ೭೭

ಸ್ವರ, ತಾಲ, ಪದ, ಈ ಮೂರೂ ಕೂಡಿರುವಂಥಾದ್ದೇ ಗಾಂಧರ್ವ, ಇವುಗಳೊಳಗೆ ಪದ ಎಂದರೆ ಸ್ವರತಾಲಕ್ಕೆ ಆಶ್ರಯವಾಗಿರುವ ಗೇಯವನ್ನು ಅಥವಾ ಪ್ರಬಂಧ ವಾಗಿರುತ್ತದೆ ಎಂದು ತಾತ್ಪರ್ಯ, 'ಪದ' ಎಂಬುದಕ್ಕೆ ಛಂದಸ್ಸಿನಲ್ಲಿ ಪದ್ಯದ ಒಂದು ಪಾದವೆಂಬ ಅರ್ಥವಿರುವುದು. ವ್ಯಾಕರಣದಲ್ಲಿ ಪದವೆಂದರೆ, ಏಕಾರ್ಥ ಬೋಧಕವಾದ ಒಂದು ಶಬ್ದ - ಸುಬಂತ, ತಿಳಿಂತ ಇತ್ಯಾದಿ. ಇಲ್ಲಿ ಈ ಅರ್ಥಗಳಲ್ಲ ಎಂದು ಸ್ಪಷ್ಟಿಕರಿಸುವುದಕ್ಕಾಗಿ 'ಪದಂ ತಸ್ಯ ಭವೇದ್ವಸ್ತು' ಎಂದಿರುವುದಾಗಿದೆ.
ಹಾಡುವ ಪದ್ಯಕ್ಕೆ ಪ್ರಬಂಧ, ರೂಪಕ, ಗೀತ, ಗೇಯ ಇತ್ಯಾದಿ ಅನೇಕ ಹೆಸರು ಗಳಿರುತ್ತಾ 'ಪದ' ಎಂಬ ಹೊಸ ಹೆಸರನ್ನು ಗಾಂಧರ್ವದಲ್ಲಿ ಪಾರಿಭಾಷಿಕವಾಗಿ ಆತನು ಕೊಟ್ಟಿರುವುದರ ಔಚಿತ್ಯವೇನೆಂದರೆ- 'ಪದ' ಶಬ್ದದ ನಿಜವಾದ ಅರ್ಥ ಹಜ್ಜೆ , ಪಾದ ವಿನ್ಯಾಸ (Foot Step) ಎಂದಾಗಿದೆ. ಪದ-ಗತ' ಎಂಬುದು ಧಾತ್ವರ್ಥ, "ಪದ್ಯತೇ, ಪದಂ ನೃಸ್ಯತೇ ಇತಿ ಪದಂ" ಇದು ಆ ಶಬ್ದದ ನಿಷ್ಪತ್ತಿ. ಹಜ್ಜೆ ಇಟ್ಟು ಕುಣಿಯಲಿಕ್ಕಿರು ವಂಥಾದ್ದು ಎಂಬ ವಿಶಿಷ್ಟಾರ್ಥದಲ್ಲಿ ಗೇಯವಸ್ತುವಿಗೆ ಪಾರಿಭಾಷಿಕವಾಗಿ 'ಪದ' ಎಂದು ಹೆಸರು ಕೊಟ್ಟದ್ದಾಗಿದೆ. ಭರತನ ಗಾಂಧರ್ವವೆಂಬುದು ನಾಟಕಕ್ಕಾಗಿ ಹುಟ್ಟಿದ್ದು. ಆದುದರಿಂದಲೇ 'ಸಂಗೀತ' ಎಂಬ ಶಬ್ದಕ್ಕೆ ನೃತ್ತಂ ಗೀತಂಚ ವಾದ್ಯಂಚ ತ್ರಯಂ ಸಂಗೀತಮುಚ್ಯತೇ' ಎಂಬ ವಿಶಿಷ್ಟಾರ್ಥ ಬಂದಿರುವುದು. ಭರತೋತ್ತರ ಕಾಲದಲ್ಲಿ ಕುಣಿತದ ಪದ್ಯಕ್ಕೆಲ್ಲ 'ಪದ'ವೆಂಬ ಹೆಸರೇ ನಮ್ಮ ದೇಶದಲ್ಲಿ ರೂಢಿಯಾಗಿ ಬಂದಿರುವು ದನ್ನು ಗಮನಿಸಬಹುದು. "ಪದ್ಮಾವತಿ ಚರಣ ಚಾರಣ ಚಕ್ರವರ್ತಿ" ಎಂದುಕೊಂಡಿರುವ ಜಯದೇವನು ಆತನ ಪ್ರೇಯಸಿಯಾಗಿದ್ದ ಪದ್ಮಾವತಿಯ ನಾಟ್ಯಕ್ಕಾಗಿ ರಚಿಸಿದ “ಗೀತ ಗೋವಿಂದ'ವನ್ನು 'ಪದ'ವೆಂದೇ ಕರೆದಿದ್ದಾನೆ. (ಆ 'ಅಷ್ಟಪದಿ'ಗಳು ಒಂದೊಂದರಲ್ಲಿ ಎಂಟೆಂಟು 'ಪಾದಗಳಿರುವುದಲ್ಲ, ಎಂಟೆಂಟು ಪದಗಳು, ಎಂದರೆ 'ಚರಣಗಳು' ಇರುವುದು. ಆದ್ದರಿಂದಲೇ ಅದು 'ಪದಾವಲಿ) "ಲಲಿತ ಕೋಮಲ ಕಾಂತ ಪದಾವಲೀಂ ಶ್ರುಣುತ ರೇ ಜಯದೇವ ಸರಸ್ವತೀO."
ಇನ್ನಿತರ ಎಷ್ಟೊಂದು ನೃತ್ತ ಪದ್ಧತಿಗಳಿವೆ ನಮ್ಮಲ್ಲಿ, ಅವುಗಳ ಹಾಡುಗಳೆಲ್ಲ ಪದಗಳೆಂದೇ ಕರೆಯಲ್ಪಟ್ಟಿವೆ- ರಾಸಲೀಲಾಪದ, ರಾಮಲೀಲಾಪದ, 'ಗೊಬ್ಬಿ' ಪದ (ಇದು ಗುಜರಾತಿನ ಗರ್ಬಿ ಎಂಬ ರಾಸನೃತ್ತದ ಹೆಸರು), ಜಕ್ಕಿಣೀ ಪದ, ಚಂದು ಪದ, ಕೊರವಂಜಿ ಪದ, ಕೇರಳದಲ್ಲಿ ಕೃಷ್ಣಾಟ್ಟಂ ಪದ, ಕಥಕಳಿ ಪದ, ದಾಸರ ಪದ, ಕ್ಷೇತ್ರಜ್ಞನ ಪದ ಇತ್ಯಾದಿ. ಇದೇ ಪರಂಪರೆಯಿಂದ ಯಕ್ಷಗಾನದ ಹಾಡುಗಳೂ ಪದಗಳೆಂದು ಕರೆಯಲ್ಪಟ್ಟಿರುವುದೂ, ನಾಗವರ್ಮನು ಕೊಟ್ಟಿರುವಂತೆ 'ಬೆದಂಡೆ'ಯ ಹಾಡುಗಳಿ ಗಾದರೂ ಪದಗಳೆಂಬ ಹೆಸರು ನಾದ್ದಿಷ್ಟವಾದುವೆಂಬುದರಿಂದ ಬಂದಿರಬೇಕೆಂಬುದ ರಲ್ಲಿ ಸಂದೇಹ ಕಾಣುವುದಿಲ್ಲ.
ಸಂಸ್ಕೃತ ನಾಟಕದಲ್ಲಿ ಬೇರೆ ಬೇರೆ ರಸಭಾವ ಸಂದರ್ಭಗಳಲ್ಲಿ ಹಾಡತಕ್ಕ ಪದಗಳಿಗೆ ಭರತನು ಧ್ರುವಗಳು ಅಥವಾ 'ಧ್ರುವಾ ಪದ'ಗಳೆಂದು ವಿಶೇಷ ಸಂಜ್ಞೆಯನ್ನು ಕೊಟ್ಟರು ತಾನೆ. ಪ್ರತ್ಯೇಕ ರಸಭಾವ ಸಂದರ್ಭಗಳಲ್ಲಿ ಇಂತಿಂತಹ ಜಾತಿ, ರಾಗ, ತಾಳಗಳಲ್ಲೇ ಹಾಡಬೇಕೆಂಬ ನಿರ್ಣಯವಿರುವ ಪದಗಳಾದ್ದರಿಂದ ಅವು ಧ್ರುವಗಳು. ಯಕ್ಷಗಾನಗಳಲ್ಲಿ ಬರುವ 'ದರು' ಅಥವಾ 'ದರುಪದ'ಗಳು ಆ ಧ್ರುವ ಅಥವಾ ಧ್ರುವ ಪದಗಳ ತನ್ನವ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ, ಅದು ಸರಿಯಾದ್ದೇ. (ಭರತನ ಈ ಧ್ರುವಾಪದಗಳ ಕುರಿತು ಹೆಚ್ಚಿನ ವಿವರಕ್ಕೆ ಈ ಲೇಖಕನ ನಾಟ್ಯ ಶಾಸ್ತ್ರವೂ ಸಂಸ್ಕೃತ