ಟಿ. ಸಂಗ್ರಾಮಗಮನ. $೬ ಅಪ್ಪಣೆಮಾಡಿ, ತನ್ನ ಬಳಿಯ, ಹಾಗು ಬೇರೆ ಬೇರೆ ಕಡೆಯ ಸರದಾರರನ್ನು ಕರತಗಲು ಸವಾರರನ್ನು ಓಡಿಸಿದನು. ಬಾದಶಹ ಮುಖ್ಯವಚೇರನಾದ ಶಕ-ಖಾನ, ಶಾಹಾ ಪಸಂದಖಾನ, ನಜೀ.ಉದ್ದವಲಾ, ಒರಖುರದ ರಖಾನ, ಆವಿಾರಬೆಗಾನ, ದುಂಬಿ ಖಾನ, ಆಹಮ್ಮದಖಾನಒಂಗವ, ಹಾಫೀಜರಹಮತಖಾನ ಮೊದಲಾದ ಸರದಾರರನ್ನು ಬಾದಶಹನು ಕರೆಕಳುಹಿದನು. ಒಳಿಕ ತಾನು ಸುಜಾಲನೊಡನೆ ಕುದುರೆಯ «ರಿ ನಿಮಾಜು ಮಾಡುವದಕ್ಕಾಗಿ ಹೊರಟನು. ನಿಮಾಜು ಆದಮೇಲೆ ತನು ಎತ್ತರ ವಾದ ಸ್ಥಳದಲ್ಲಿ ನಿಂತು ಮೊದಲು ಪಾನಸತವ ಛಾವಣಿಯ ಕಡೆಗೆ ನೋಡಹತ್ತಿದನು. ಆಗ ಬೆಳಗಾಗ ತ ಬಂದಿತ್ತು. ಬೆಳಗಿನ ಲಕ್ಷಣಗಳು ಆಕಾರದಲ್ಲಿಯೂ, ಭೂಮಿ ಯಲ್ಲಿಯೂ ತೋರುತ್ತಲಿದ್ದವು. ಹೇಮಂತಋತುವಿನೊಳಗಿನ ಉತ್ತರ ಹಿಂದುಸ್ಥಾನದ ಬೆಳಗಿನ ತುಂತುರು ಹನಿಯ ಮಂಜು ದಟ್ಟವಾಗಿ ಬಿದ್ದಿತ್ತು. ಆ ಮಂಜಿನ ಆಚೆಕಡೆ ಯಲ್ಲಿ ದಂಡ: ಯುದ್ದಕ್ಕೆ ಹಾಗೆ ನಿಂತಿರುವದೆಂಬದನ್ನು ನೋಡುವದಕ್ಕಾಗಿ ಬಾದಶಹನು ಕಣ್ಣು ಹರಿಯುವವರೆಗೆ ಕೆಕ್ಕರಿಸಿ ನೋಡಿದನು; ಮತ್ತು ಏನಾದರೂ ಸಪ್ಪಳವಾಗು ತಿರುವದೇನೆಂದು ಕಿವಿಗೆ ಕೈ ಒಡ್ಡಿ ಒದ್ದಿ ಕೇಳಿದನು; ಆದರೆ ವಿಶ್ವೇಶ್ವರನಿಂದ ನಿರ್ಮಿಸಲ್ಪಟ್ಟ ಆ ಮಂಜಿನ ಪರದೆಯ ಆಚೆಯಕಡೆಯಲ್ಲಿ ಏನೂ ಕಾಣಿಸಲಿಲ್ಲ-ಯಾವ ಸಪ್ಪಳವೂ ಕೇಳಿಸ ಲಿಲ್ಲ; ಆಗ ಅಬದಾಲಿಯು ಸಂಶಯದ ಮುದ್ರೆಯಿಂದ ಸುಜಾಉದ್ಘಾಲನನ್ನು ನೋ ದು, ಹಾಗೇ ಆತನೊಡನೆ ರಣಸ್ತಂಭದಕಡೆಗೆ ನಡೆದನು, ಅನ್ಯರಲ್ಲಿ ಶಹಾನ ದಂಡಿನ ಕಾವಲುಗಾರರು ಮರಾಟರ ರುಂಡಗಳನ್ನು ಚುಡಾಡಿ, ಒಂದೊಂದು ಹಸಿತಲೆಯನ್ನು ತಮ್ಮ ಕುದುರೆಯ ಬೆನ್ನಿಗೆ ಕಟ್ಟಿಕೊಂಡು, ವಸ್ತ್ರಾಭರಣಗಳ ಲೂಟಿಯನ್ನು ಹೇರಿ ಕೊಂಡು ಸೆರೆಹಿಡಿದ ಹೆಂಗಸರು-ಹುಡುಗರ ಡಾವಣಿಯೊಡನೆ ಶಹಾನ ಎದುರಿಗೆ ಬಂದರು. ಅವರು ಶಹಾನನ್ನು ವಂದಿಸಿ-“ಪಾವಂವ, ಪರವರದಿಗಾರ, ಕಾಫರಜನರು ತಮ್ಮ ಛಾವಣಿಯನ್ನು ಬಿಟ್ಟು ಕತ್ತಲಲ್ಲಿ ಕರ್ನೊಳದಕಡೆಗೆ ಹಿಂಡುಗಟ್ಟ ಹಾದಿಹಿಡಿಸದೆ ಓಡುತ್ತಿದ್ದರು. ಅವರಲ್ಲಿ ಬಹುಜನರನ್ನು ಕೊಂದು ಸುಲಿಗೆಯನ್ನೂ, ಸೆರೆಯವರನ್ನೂ ತಂದಿದ್ದೇನೆ. ” ಎಂದು ಹೇಳಿದರು. ಅದನ್ನು ಕೇಳಿ ಅಬದಾಲಿಯು ಸುಳಾಉಲನ ಕಡೆಗೆ ತಿರುಗಿ ಸಿಟ್ಟಿನಿಂದ-ನಬಾಬಸಾಹೇಬ, ಈ ಮಾತು ಕೇಳಿದರೆನು? ಸುಳ್ಳೇ ನನಗೆ ಮಗಾಟರು ದಂಡೆತ್ತಿ ಬಂದ ಸುದ್ದಿಯನ್ನು ಹೇಳಿದಿರಿ. ” ಎಂದು ಕೇಳಲು, ಸುಜಾನುಬೆಳಕಿಆಖಾವಂದ, ನನಗೆ ಹತ್ತಿದ ಸುದ್ದಿಯನ್ನು ಮುಟ್ಟಿಸಿದನು. ಇದರಲ್ಲಿ ನನ್ನದೇನಾದರೂ ಅಪರಾಧವಿದ್ದರೆ ಕ್ಷಮಿಸಬೇಕು” ಎಂದು ಪ್ರಾರ್ಥಿಸಿದನು. ಸುಜಾಉಲನು ಮರಾಟರ ಪಕ್ಷದವನೆಂದು ತಿಳಿದು ಅವನನ್ನು ಬಾದಶಹನು ನಂಬುತ್ತಿದ್ದಿಲ್ಲ; ಆದರೆ ಸ್ವಲ್ಪಹೊತ್ತಿ ನಲ್ಲಿ ಮರಾಟರ ಕಡೆಯ ತೋಪುಗಳು ಹಾರಹತ್ತಲು, ಶಹಾನ ಸಂಶಯವು ದೂರವಾಗಿ ಆತರು ಮುಗುಳುನಗೆ ನಗುತ ಸುಖದಾ ಲನಿಗೆನಬಾಬಸಾಹೇಬ, ನಾನು ಮೊ ದಲು ಸುಳ್ಳೆಂದು ತಿಳಿದಿದ್ದೆನು. ಈಗ ಮರಾಟರು ಮೊದಲು ಏರಿಬಂದದ್ದು ಬಹಳ ಕೆಟ್ಟ ಗಾಯಿತು. ಇನ್ನು ಜಯಲಕ್ಷ್ಮಿಯು ನಿಶ್ಚಯವಾಗಿ ನರುಗೆ ಮಾಲೆ ಹಾಕುವಳು
ಪುಟ:ಕುರುಕ್ಷೇತ್ರ ಗ್ರಂಥ.djvu/೧೦೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.