ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಪೂರ್ಣಾಹುತಿಯು, ೧೧೩ ರಲು, ನಾನುಮಾತ್ರ ಆತನಿದ್ದಲ್ಲಿಗೆ ಹೋಗದಿರುವದು ನನ್ನ ಹಿರಿಯತನಕ್ಕೆ ಒಮ್ಮವ ದೆಯೇ? ಜನಕೋಜೀ, ದುರಾಣಿಯ ಈಗಿನ ಜಯವು ಒಂದುಬಗೆಯ ಆಪಜಯವೆಂದು ಭಾವಿಸಿರಿ. ಅವನು ತನ್ನ ಪ್ರತ-ಮಿತ್ರರನ್ನು ಈ ಕುರುಕ್ಷೇತ್ರದಲ್ಲಿ ಒಕ್ಕಲಿಕ್ಕಿ ತಾನೊಬ್ಬನೇ ಸ್ವದೇಶಕ್ಕೆ ಹೋಗಬೇಕಾಗುವದು. ಏಳಿರಿ, ಮರಾಟರ ಕಟ್ಟಕಡೆಯ ಪರಾಕ್ರಮವನ್ನು ಈ ಕುರುಕ್ಷೇತ್ರದಲ್ಲಿ ತೋರಿಸಿಬಿಡೋಣ! ಎಂದು ನುಡಿದು ಬೊಗಸೆ ಯೊಡ್ಡಲು, ಪರಿಚಾರಕನು ಗಂಗೋದಕವನ್ನು ಆ ಬೊಗಸೆಯಲ್ಲಿ ಸುರಿದನು. ಗಂಗೊ ದಕದಿಂದ ತುಂಬಿದ ಪಾತ್ರೆಗಳು ಎತ್ತುಗಳಮೇಲೆ ಹೇರಿ ಸವಾರಿಯಸಂಗಡ - ಸಿದ್ಧವಾಗಿ ದ್ದವು. ಸ್ವಲ್ಪ ಗಂಗೋದಕ ಪ್ರಾಶನಮಾಡಿ ಭಾವುಸಾಹೇಬನು ಎಲ್ಲರ ಅಪ್ಪಣೆಪಡೆದು ಹಯಪಾನನನ್ನು ಏರಿದನು, ಆತನ ಕೈಯಲ್ಲಿ ಖಡ್ಗ, ಟೊಂಕದಲ್ಲಿ ಜೋಡುಕಳಿ ಗೆಯ ಪಿಸ್ತೂಲು ಒಪ್ಪುತಿದ್ದವು. ಭಾವುಸಾಹೇಬನ ಆಗಿನ ಉಗ್ರಮೂರ್ತಿಯನ್ನು ನೋಡುವದು ಅಶಕ್ಯವೇ ಸರಿ! ಹಯಪಾನನು ಯಜಮಾನನ ಮನೋದಯವನ್ನು ತಿಳಿದು ಶತ್ರುಗಳ ಮೇಲೆ ಆವೇಶದಿಂದ ಏರಿಹೋಗಲು ಆತುರಪಡಹತ್ತಿತು. ಆಗ ಭಾವುಸಾಹೇ ಬನು ತನ್ನ ಬಳಿಯಲ್ಲಿ ಧ್ವ-ಸಮಶೇರಬಹದ್ದರ, ಜನಕೋಜಿಸಿದೆ, ಮುಕುಂದಜಿಸಿದೆ, ಸೋನಜೀಭಾಪಕರ ಮೊದಲಾದ ಕೆಲವು ಸರದಾರರನ್ನು ಬಳಿಯಲ್ಲಿ ಕರೆದು-ಮಿತ್ರರೇ, ಸದ್ಯಕ್ಕೆ ನಾವು ಯುದ್ಧದಲ್ಲಿ ಜಯವನ್ನು ಸಂಪಾದಿಸಬೇಕು, ಇಲ್ಲವೆ ರಣಭೂಮಿಯಲ್ಲಿ ದೇಹವಿಡಬೇಕು, ಎಂಬ ಪ್ರಸಂಗವು ಬಂದೊದಗಿರುತ್ತದೆ. ಜಯದ ಆಶೆಯಂತು ಕಂಡಹಾಗೆಯೇ ಆಗುತ್ತದೆ. ಇನ್ನು ರುಧಿರಗಂಗೆಯಲ್ಲಿ ಸ್ನಾನಮಾಡಿ ಸ್ವರ್ಗಕ್ಕೆ ಹೋಗುವ ಮಾರ್ಗವೊಂದು ನಮಗೆ ಪ್ರಶಸ್ತವಾಗಿ ತೆರೆದಿರುವದು; ಆದರೆ ಆ ಮಾರ್ಗ ದಿಂದ ಹೋಗುವ ಧೈರ್ಯವಿದ್ದವರುಮಾತ್ರ ನನ್ನ ಸಂಗಡ ಬರಬೇಕು. ಧೈರ್ಯವಿಲ್ಲ. ದವರಿಗೆ ಹಿಂದಿನ ಹಾದಿಯು ತೆರೆದಿರುವದು. ಮೋರೆಯಮುಂದೆ ಒಪ್ಪಿಕೊಂಡು ಹಿಂದಿ ನಿಂದ ವಿಶ್ವಾಸಘಾತ ಮಾಡುವದು ಮಾತ್ರ ಭೂಷಣವಲ್ಲ.” ಅನ್ನಲು, ತುಕೋಜಿ ಸಿಂದೆಯ, ಸೋನಜೀಛಾಪಕರನಾ ಭಾವುಸಾಹೇಬನಿಗೆ-ಸರಕಾರ, ಇಂದು ಕ್ಯಾತ ಧರ್ಮದ ಪರಮಾವಧಿಯಾಯಿತು. ಎಲ್ಲ ಕಡೆಯಲ್ಲಿ ಆಕಾಶವು ಹರಿದರೆ ಅದಕ್ಕೆ ತೇಪ ಹಚ್ಚುವದು ಹ್ಯಾಗೆ? ಈ ಪ್ರಸಂಗದಲ್ಲಿ ಹಿಂದಕ್ಕೆ ಸರಿಯುವದೇ ಯುಕ್ಯವಾಗಿತ್ತು; ಆದರೆ ಸರಕಾರದ ನಿಶ್ಚಯವಿರುವದರಿಂದ, ನಾವೂ ಸ್ವಾಮಿ-ಸೇವಕ ಸಂಬಂಧಕ್ಕನುಸ ರಿಸಿ ರುಧಿರಗಂಗೆಯಲ್ಲಿ ಸ್ನಾನಮಾಡುವದಕ್ಕಾಗಿ ಸಿದ್ಧರಿರುವೆವು.” ಎಂದು ಹೇಳಿದರು ಇತ್ತ ಹಯಪಾನಕುದುರೆಯು ನಿಂತಲ್ಲಿ ನಿಲ್ಲದೆ ಶತ್ರುಗಳಮೇಲೆ ಸಾಗಿಹೋಗಲಿಕ್ಕೆ ಅತ್ಯಂತ ಆತುರಪಡುತ್ತಲಿತ್ತು. ಆ ದಿವ್ಯಾಶ್ಚದ ತುಟಿಗಳು ಸಿಟ್ಟಿನಿಂದ ಸ್ಪುರಣ ಹೊಂದುತ್ತಿದ್ದವು. ಕಣ್ಳ ಗಿಂದ ಕಿಡಿಗಳು ಹಾರುತ್ತಿದ್ದವು. ಸಿಟ್ಟಿನಿಂದ ಲಗಾಮ ವನ್ನು ಕಡಿಯುತ್ತಿರುವಾಗ ಆದಶ ಬಾಯಿಂದ ಬುರುಗೂ, ರಕ್ತ ಸೋರುತ್ತಿದ್ದವು, ಕಿವಿಗಳನ್ನು ನಿಗರಿಸಿ ಅದು ನಾಲ್ಕೂ ಕಡೆಗೆ ನೋಡುತ್ತಿತ್ತು. ಅದರ ಕೊರಳಲ್ಲಿ ಬಂಗಾ ರಥ ತಂತಿಯಲ್ಲಿ ಪೋಣಿಸಿದ ನವರತ್ನಗಳ ಹಾರವೂ ಮುತ್ತಿನ ಸರವೂ ಅಲೆದಾಡುತ್ತಿ