ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಕುರುಕ್ಷೇತ್ರ ! ದ್ದವು. ಅದರ ಆಯಕಾಲದ ಕೂದಲುಗಳನ್ನೂ, ಬಾಲವನ್ನೂ ಅರಗಿನ ಬಣ್ಣದಿಂದ ಆಲಂಕರಿಸಿದ್ದರು. ಎರಡೂ ಮಗ್ಯಲುಗಳಲ್ಲಿ ಬಿಳಿಯ ಬಣ್ಣದ ಚಮಗಳು ಸುತ್ತಿ ದ್ದವು. ಅದು ನಾಲ್ಕೂಖುಡಗಳಿಂದ ಭೂಮಿಯನ್ನು ಘೋಷಿಸುತ್ತಿತ್ತು. ಆದರ ದೇಹವು ಪುಷ್ಯ, ಮಾಂಸಮಯ, ಹುರಿಕಟ್ಟಿನದು, ರೇಶಿಮೆಯಾಗೆ ಮೃದುವಾದದ್ದು, ನುಣುಗು ಟ್ಟುವದು ಆಗಿತ್ತು. ಅದರ ಎದೆಯು ವಿಶಾಲವಾಗಿದ್ದು, ಛಪ್ಪೆಗಳು ಪುಷ್ಟವಾಗಿ ದ್ದವು. ಅದು ಮೂಗಿನ ಹೊರಳೆಗಳನ್ನು ಅರಳಿಸಿ ಮೇಲೆ ಮೇಲೆ ಹೇರಿಸುವದನ್ನು ನೋಡಿದರೆ, ಅದು ತನ್ನ ಭಾಷೆಯಿಂದ ತನ್ನನ್ನು ಬೇಗನೆ ಶತ್ರುಗಳ ಮೇಲೆ ಸಾಗಿಸಿ ಕೊಂಡು ಹೋಗಿರೆಂದು ತನ್ನ ಯಜಮಾನನಿಗೆ ಹೇಳುತ್ತಿರುವಂತೆ ತೋರುತ್ತಿತ್ತು! ವಿಶ್ವಾಸರಾಯನು ಮಡಿದವರ್ತಮಾನವು ಸೈನ್ಯದಲ್ಲಿ ಹಬ್ಬಿದಕೂಡಲೆ ಮರಾಟರು ಸಮ ರಭೂಮಿಯಿಂದ ಓಡಹತ್ತಿದರು. ಆಗ ಅವರನ್ನು ಧೈರ್ಯಗೊಳಿಸುವದಕ್ಕಾಗಿ ಭಾವು ಸಾಹೇಬನು ಜಯವಾದ್ಯಗಳ ಧ್ವನಿಗೈಯುವತೆ ಆಜ್ಞಾಪಿಸಿ, ತಾನು ಸುಜಾಉದೌಲನ ಸೈನ್ಯದಮೇಲೆ ಕೃತಾಂತನಂತೆ ಸಾಗಿಹೋದನು. ಈವರೆಗೆ ಯುದ್ದ ಪರ್ಣನವನ್ನು ಬರೆದು ಸೋತುಹೋಗಿದ್ದ ನಮ್ಮ ಕೈಯು, ಈ ನರವೀರ ಭಾವುವಿನ ಶರ್ಯಾತಿಶಯವನ್ನು ವರ್ಣಿಸಲಿಕ್ಕೆ ಏಳಲೊಲ್ಲದು! ಭಾವುಸಾಹೇಬನು ಜಾತ್ಯಾಶರನು, ಮೇಲೆ ಮಾನಧನನು; ಅದರಲ್ಲಿ ಅಣ್ಣನಮುಂದೆ ಮಾಡಿ ' ಘೋರಪ್ರತಿಜ್ಞೆಯಿಂದ ಪರಾಧೀನನಾದವನು ; ಈ ಪರಾಧೀನತೆಗೆ ವಿಾಸಕ ಯ ನ ಮರಣದ ಆಘಾತವಾದಬಳಿಕ ಕೇಳುವದೇನು? ಯಾವ ಆತಂಕವನ್ನೂ ಲೆಕ್ಕಿಸದೆ ಆತನು ವಿಶ್ವಾಸಘಾತಕಿಯಾದ ಸುಜಾದೌಲನ ಸೈ ವನ್ನು ತನ್ನ ಖಡ್ಗದಿಂದ ಸರಸರ ಸವರುತ್ತ, ಆತನಲ್ಲಿ ದೃಷ್ಟಿಯನ್ನಿಟ್ಟು ಮುಂದಕ್ಕೆ ನಡೆದನು. ಜನಕೋಜಿಸಿಂದೆಯೂ, ಸಮಲೇರಬಹದ್ದರನೂ ತಮ್ಮ ಸ್ವಾಮಿಯ ಈ ರಣ ಸಾಹಸಕ್ಕೆ ಸಹಾಯಕರಾಗಿ ಸಾಗಿದ್ದರು. ಭಾವುವಿನ ಈ ಅಬ್ಬರದ ಹೊಯ್ಯಕ್ಕೆ ಸುಜಾನ ಸೈನ್ಯವು ತತ್ತರಿಸಿತು; ಆದರೆ ಸುಜಾನು ಬೇಗನೆ ಕೈಗೆ ಹತ್ತಲೊಲ್ಲನು. ಆಗ ಭಾವುಸಾಹೇಬನು ಕೈಯೊಳಗಿನ ಖಡ್ಗವನ್ನು ಬಿಸುಟ, ತುಂಬಿದ ಜೋಡುಲಳಿಗೆಯ ಪಿಸ್ತೂಲನ್ನು ಸುಬಾನಿಗೆ ಗುಯಿಟ್ಟು “ನೀಚಗೆ, ನಿನ್ನ ವಿಶಾಸಘಾತದ ಈ ತೀಕ. ಫಲವನ್ನು ಉಣ್ಣು” ಎಂದು ನುಡಿದು, ಆತನ ಮೇಲೆ ಬೆನ್ನು ಹಾರಿಸಿದನು; ಆತಿ ಸಂಚಾಉದ್ಘಲಸ ಆಷ ವು ತೀರದ್ದರಿಂದ ಭಾವುಸಾಹೇಬನ ಗುಪ್ಪಿ, ಆತನು ಪಾರಾದನು, ಎಶಾಸರಾಯನ ಮರಣದಿಂದ ಭಾವುಸಾಬನ ಚಿತ್ರವು ಚಂಚಲವಾ ಗಿತ್ತು; ಆತನ ಅವಯವಗಳು ಶಿಥಿಲವಾಗಿದ್ದವು; ಆದ್ದರಿಂದ ಗುರಿಯ ತಪ್ಪಿ ಸುಜಾನು ಸುರಕ್ಷಿತವಾಗಿ ಉಳಿದನು. ಭಾವುಸಾಹೇಬನು ನುಡಿದ ಶಬ್ದಗಳನ್ನು ಸುಜಾನು ಗುರು ತಿಸಿದನು; ಅವನ್ನು ಸ್ಪಷ್ಟವಾಗಿ ಕೇಳಿದನು; ಅವನ್ನು, ಆತನು ಒಪ್ಪಿಕೊ ಳ್ಳಲೇಬೇಕಾಗಿತ್ತು. ತನ್ನ ಪಿಸ್ತೂಲಿನ ಗುರಿಯು ತಪ್ಪಿದ್ದರಿಂದ ಭಾವುವು ತಿರಸ್ಕಾರ ದಿಂದ ಸುಜಾನನ್ನು ನೋಡಿ ಮತ್ತೊಂದು ಶಸ್ತ್ರಕ್ಕೆ ಕೈಹಾಕಿದನು. ಆತನ ನೈಸರ್ಗಿಕ ನಾದ ಪರಾಕ್ರಮವು ಇನ್ನೂ ಆಗಿಲ್ಲ, “ಇದೇರಸ್ಕಾಪಿ ಶಿರಚ್ಛೇದೇ ವೀರತ್ವಂ