ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಬ ಮ ೧೧೬ ಕುರುಕ್ಷೇತ್ರ ! ಹತ್ತಿದರು. ಅವರಿಗೆ ಶಸ್ತ್ರಗಳು ತಗಲಿ, ಗುಂಡುಗಳು ಬಡಿದು ಕೆಲವರು ರಣಭೂಮಿ ಯಲ್ಲಿ ಮರಣಹೊಂದಿದರು, ಕೆಲವರು ಗಾಯಪಟ್ಟು, ಇಳೆಗೊರಗಿದರು. ಸಾರಾಂಶ, ಶುರಾಟರ ಪೂರ್ಣಪರಾಭವವಾಗಿ, ದುರಾಣಿಶಹನು ಪೂರ್ಣಜಯಶಾಲಿಯಾದನು. ರಣಪಟುವಾದ ಜನಕೋಜಿಯು ಗಾಯಹೊಂದಿ ಶತ್ರುಗಳ ಕೈಸೇರಿದನು; ಇಬ್ರಾಹಿಮ ಖಾನಗರದಿಯ ಗತಿಯೂ ಹೀಗೆಯೇ ಆಯಿತು! ಕುರುಕ್ಷೇತ್ರದ ಈ ಘನಘೋರಸಂಗ್ರಾಮದಲ್ಲಿ ಮರಾಟರ ಅತಿರಥಿ-ಮಹಾರಥಿ ಉಾದ ವೀರರು ಒಬ್ಬ ರಹಿಂದೊಬ್ಬರು ಪತನ ಹೊಂದಿದರು! ಒಬ್ಬಿಬ್ಬರಕೊರತು ಉಳಿದ ವರೆಲ್ಲರೂ ಸೈನ್ಯದ ಅಗ್ರಭಾಗದಲ್ಲಿ ಕಾದಿ, ಶತ್ರುಗಳಿಗೆ ತಮ್ಮ ಭುಜಪರಾಕ್ರಮವನ್ನು ತೋರಿಸಿ ಧಾರಾತೀರ್ಥದಲ್ಲಿ ದೇಹವಿಟ್ಟರು! ಈ ಮಾತು ಮರಾಟರು ಯಾವಾಗಲೂ ಗರ್ವಪಡತಕ್ಕಂತಹದೇಸರಿ, ಸ್ನಾನ-ಸಂಧ್ಯೆ, ಯಜ್ಞ-ಯಾಗ, ತಪಶ್ಚರ್ಯ ಇವು ಬ್ರಾ ಹ್ಮಣರ ಕೆಲಸಗಳೆಂದು ಹಿಂದೆಯೊಮ್ಮೆ ಹೇಳಿದ್ದೇವೆ. ತಮ್ಮ ಈ ಸಾತ್ವಿಕ ಕರ್ಮಗಳನ್ನು ಬಿಟ್ಟು ರಾಜಸಪ್ರಧಾನವಾದ ಕ್ಷಾತ್ರಕರ್ಮಗಳನ್ನು ಕೈಕೊಳ್ಳುವಂಥ ಪ್ರಸಂಗಒದಗಿದ್ದ ರಿಂದ, ಬ್ರಾಹ್ಮಣರು ತಮ್ಮದರ್ಭ, ಪವಿತ್ರಿಕಾ, ರುದ್ರಾಕ್ಷಮಾಲ, ಕಿವಿಟೊಪ್ಪಿಗೆ, ಗೋಮುಖ ಇವುಗಳನ್ನು ಚೆಲ್ಲಿಕೊಟ್ಟು ಕ್ಷತ್ರಿಯರ ಶಸ್ತ್ರಗಳನ್ನು ಕೈಯಲ್ಲಿ ಧರಿಸಿದರು. ಹೀಗೆ ಧರ್ಮಾಂತರಮಾಡಲಿಕ್ಕೆ ಮುಸಲ್ಮಾನರಿಂದೊದಗಿದ ಧರ್ಮಚ್ಛಲವೂ, ಸ್ವಾತಂತ್ರನಾಶವೂ ಕಾರಣವಾದವು. ಆ ಕಾರಣಗಳ ನಿವಾರಣಕ್ಕಾಗಿ ಬ್ರಾಹ್ಮಣರು, ಮರಾಟರು, ಪ್ರಭುಜನರು ಕೂಡಿ ಮೊದಲು ಮಹಾರಾಷ್ಟ್ರ ರಾಜ್ಯದ ಪ್ರಾಣಪ್ರತಿಷ್ಟಾಪನೆಯನ್ನು ಮಾಡಿದರು. ಆಗ 'ಇಡಿಯ ಮಹಾರಾಷ್ಟ್ರದಲ್ಲೆಲ್ಲಿ ವೀರಶಿಯಸಂಪಾರವಾಗಿ, ಎಲ್ಲಕಡೆಯಲ್ಲಿ ಬ್ರಾಹ್ಮಣ ವೀರರು, ಪ್ರಭುವೀರರು, ಮರಾಠಾವೀರರು; ಬ್ರಾಹ್ಮಣಮುತ್ಸದ್ದಿಗಳು, ಪ್ರಭುಮುತ್ತ ದಿಗಳು, ಮರಾಟಾಮುತ್ಸದ್ದಿಗಳು ಬೈಲಿಗೆ ಬಂದರು. ಈ ಪುರುಷವರ್ಗದಂತೆ ಆಯಾ ಜಾತಿಯ ಸ್ತ್ರೀವರ್ಗದಲ್ಲಿಯೂ ಆಗಿನ ಕಾಲದಲ್ಲಿ ಸ್ವಧರ್ಮಾಭಿಮಾನ, ಸ್ವದೇಶಾಭಿಮಾನ, ಸ್ವಕುಲಾಭಿಮಾನಗಳು ಜಾಗ್ರತವಾಗಿದ್ದವು. ಅವರು ಎಷ್ಟೊಪ್ರಸಂಗದಲ್ಲಿ ಉತ್ಸಾಹ ಜನಕವಾದ ಉಪದೇಶದಿಂದಲೂ, ತೈಷೋತ್ಪಾದಕ ಉಪಹಾಸದಿಂದ , ಅಮಂಗಲ ಸೂಚಕವಾದ ಅಪಮಾನದಿಂದಲೂ ತಮ್ಮ ಪತಿ-ಪುತ್ರಾದಿಕರ ಬಾಹುಗಳನ್ನು ಸ್ಪುರಣ ಗೊಳಿಸಿದರು ! ಹೀಗೆ ವೀರರಸವು ಸಾಕ್ಷಾತ್ತಾಗಿ ಮಹಾರಾಷ್ಟ್ರದಲ್ಲಿ ಅವತರಿಸಿರುವಾಗ, ಮೇಲೆ ಹೇಳಿದ್ದ ಇಬ್ಬರು ಬಾಹ್ಮಣವೀರರು 'ಜನ್ಮವೆತ್ತಿದವರಾಗಿದ್ದರು. ಅವರು ತಮ್ಮ ತಂದೆ, ಅಜ್ಜ, ಮುತ್ತಜ್ಜ, ಕಕ್ಕ, ಬಂಧುಗಳು, ಬೇರೆ ಸರದಾರರು ಇವರ ಸಿಪಾಯಿಗಿರಿಯನ್ನು ಪ್ರತ್ಯಕ ನೋಡಿದ್ದರು-ಕಿವಿಯಿಂದ ಕೇಳಿದ್ದರು-ಬಖರುಗಳಲ್ಲಿ ಓದಿದ್ದರು; ಅಂದಬಳಿಕ ಅವರು ಸ್ವತಃ ರಣಶೂರರಾದದ್ದೇನಾಶ್ಚರ್ಯವು? ಪ್ರತಿಒಬ್ಬ ರಾಷ್ಟ್ರ ಹಿತಾಕಾಂಕ್ಷೆಯು, ತನ್ನ ರಾಷ್ಟ್ರದ ಉದ್ಧಾರಕ್ಕಾ ಗಿಯೂ, ಅದರ ಗೌರವರಕ್ಷಣಕ್ಕಾಗಿಯೂ ಯಾವಾಗಲೂ ಯತ್ನಿಸುತ್ತಿರುವದು ತನ್ನ ಜನ್ಮದ ಅವಶ್ಯವಾದ ಕರ್ತವ್ಯವಾಗಿರುತ್ತದೆಂದು ತಿಳಿಯತಕ್ಕದ್ದು. ಅಂಥ ಪವಿತ್ರಕರ್ತ