ಪೂರ್ಣಾಹುತಿಯ . ೧೧೭ ಎ ವ್ಯವನ್ನು ನಮ್ಮ ಶ್ರೀಮಂತ ಸದಾತಿಮಾವಭಾವುವೂ, ವಿಶ್ವಾಸಾಯನೂ ಬಹುಮ ೬ಗೆ ಜರುಗಿಸಿದರೆಂದು ಹೇಳಬಹುದು. ಅವರು ಯುದ್ಧದಲ್ಲಿ ಅಜಯಪಟ್ಟರೂ, ಅವರ ಅಖಂಡವಾದ ವೀರಶಿಯೂ, ಪ್ರತಾಪವೂ ಜಯಶಾಲಿಯಾಗಿ ಉಳಿದಿರು ವವು; ಆದ್ದರಿಂದಲೇ, ಅವನ್ನು ಕವಿಗಳೂ, ಬಖರಕಾರರೂ, ಶಾಹಿರರೂ ತಮ್ಮ ಗ್ರಂಥ yಳಲ್ಲಿ ವರ್ಣಿಸಿರುತ್ತಾರೆ. ಅವುಗಳಲ್ಲಿ ಎರಡು ಮಾತ್ರ ಇಲ್ಲಿ ಉಲ್ಲೇಖಿಸಿ ಈ ದುಃಖ ದಾಯಕವಾದರೂ, ಅಭಿಮಾನಾಸ್ಪದವಾದ ಪ್ರಕರಣವನ್ನು ಮುಗಿಸುವೆವು. ಈ ಇಬ್ಬರು ವೀರರ ಸಂಬಂಧದಿಂದ ಪುರುಷೋತ್ತಮಕವಿಯು ತನ್ನ ಶಿವಕಾವ್ಯಮೆ ಗ್ರಂಥದ ಹದಿನಾಲ್ಕನೆಯ ಚಮತ್ಕಾರದಲ್ಲಿ ವರ್ಣಿಸಿದ್ದು ಹಾಗಂದರೆ-“ವಿಶಾ ಸಾ ಯನು ಗುಂಡುತಾಕಿ ಬಿದ್ದಾಗ, ಆತನು ಶಾಸರಹಿತನಾದನು. ಕೂಡಲೆ ಎಲ್ಲರ ಶಿಸ ಗಳು ವ್ಯಥೆಗೊಂಡದ್ದರಿಂದ ಆ ವೀರನ ವಿರಾಸವೆಂಬ ನಾಮವು ಸಾರ್ಥಕವಾಯಿತು. ವಿಶಾಸನು ಗತಪ್ರಾಣನಾದಕೂಡಲೆ ಸುತ್ತಲಿನ ವೀರರು ಬದುಕಿದ್ದರೂ, ಚಿತ್ರಪಟದೊ ಳಗಿನ ವೀರರಂತ ನಿಜಿ೯ವರಾಗಿ ತೋರಹತಿ ದರು. ಕರ್ನೆನಂತೆ ಪರಾಕ್ರಮಶಾಲಿ ಯಾದ ಭಾವುಸಾಹೇಬನು ವಿಶ್ವಾಸರಾಯನ ಮರಣವಾರ್ತೆಯನ್ನು ಕೇಳಿದಕೂಡಲೆ ಮೂರ್ಛಿತನಾದನು. ಆತನಿಗಾದ ದುಃಖವನ್ನು ವರ್ಣಿಸುವ ಯೋಗ್ಯತೆಯು ಬತ ದೇವನಿಗೂ ಇಲ್ಲದಿರುವಾಗ, ನಾವೇನು ವರ್ಣಿಸುವೆವು? ವೀರಮಣಿ ಭಾವುಸಾಹೇಬನು ಮೂರ್ಛತಿಳಿದೆದ್ದು ಅಶ್ವಾರೂಢನಾಗಿ ಕೈಯಲ್ಲಿ ಖಡ್ಗಧರಿಸಿ ಮನಸ್ಸಿನಲ್ಲಿ ನಿಸನು ಚಿಕ್ಕವನಾದರೂ ಅಭಿಮ-ವಿನಂತೆ ಪ್ರೌಢಪ್ರತಾಪವನ್ನು ಪ್ರಕಟಿಸಿ ದೇವಲೋಕಕ್ಕೆ ತೆರಳಿದನು. ಈ ವರ್ತಮಾನವನ್ನು ಕೇಳಿ ಅತ್ತ ನಾನಾಸಾಹೇಬನೂ, ಗೋಪಿಕ್‌ಅತ್ತಿ .ಗೆಯೂ ಬೇಹವಿಡುವರು; ಆದ್ದರಿಂದ ನಾನೂ ಆ ಹಾದಿಯನ್ನು ಹಿಡಿಯತಕ್ಕದ್ದು.” ಎಂದು ವಿಚಾರಿಸಿ, ಶತ್ರುರೂಪವಾದ ಅಗ್ನಿಯಲ್ಲಿ ಪ್ರವೇಶಿಸಿದನು. ಆಗ ಆ ಧೀರವೀರನು ಸಮುದ್ರದಲ್ಲಿ ತಿಮಿಂಗಿಲವು ಸಂಚರಿಸುವಂತೆ ಅಶ್ವಾರೂಢನಾಗಿ ಶತ್ರುಸೈನ್ಯದಲ್ಲಿ ಸುಚ ದಿಸಿ, ಶತ್ರುಗಳ ಶಿರಚ್ಛೇದ ಮಾಡುತ್ತ ಮಾಡುತ್ತ ದೇವಲೋಕಕ್ಕೆ ಹೊರಟುಹೋದ ನಂತೆ! ಆತನ ಬಳಿಯಲ್ಲಿಯೇ ನಿಂತು ಯುದ್ಧ ಮಾಡುವ ವೀರರಿಗೆ ಆತನದೇಹವು ಕಣ್ಣಿಗೆ ಬೀಳಲಿಲ್ಲವೆಂದಬಳಿಕ, ಅದು ಸುಳ್ಳೆಂದು ಹ್ಯಾಗೆ ಅನ್ನಬೇಕು? ಸುಜಾಉದೌಲನ ಮುಖ್ಯವಾಣನು ಕಾಶೀರಾಜಪಂಡಿತನೆಂಬದನ್ನು ವಾಚಕರು ಬಲ್ಲರು. ಆ ಪಂಡಿತನು ತನ್ನ ಫಾರಶೀಬಖರಿನಲ್ಲಿ ಈ ಪ್ರಸಂಗವನ್ನು ಹೀಗೆ ವರ್ಣಿ ಸಿರುವನು- ಈ ಅತಿರಭಸದ ಕಾಳಗವು ಒಂದು ತಾಸಿನವರೆಗೆ ನಡೆಯಿತು. ಆಗ ಉಭ ಯದಳದವರೂ ಖಡ್ಯ-ಬರ್ಚಿ-ಭಾಲೆಗಳಿಂದ ಕಾದಿದರು. ಕಡೆಗೆ ಕಠಾರಿ, ಜುಬಿಯ ಗಳನ್ನು ಸಹ ಉಪಯೋಗಿಸಿದರು. ಎಂಟುವರೆತಾಸಿನ ಸುಮಾರಿನಲ್ಲಿ ವಿಶ್ವಾಸರಾಯನಿಗೆ ಗಾಯವಾಗಲು, ಆತನು ಕುದುರೆಯಿಂದ ಇಳಿದನು. ಈ ಸುದ್ದಿಯನ್ನು ಕೇಳಿದಕೂಡಲೆ ಭಾವುಸಾಹೇಬನು ವಿಶ್ವಾಸರಾಯನನ್ನು ಎತ್ತಿ ಆನೆಯಮೇಲೆ ಕುಳ್ಳಿರಿಸಲು ಆಜ್ಞಾಪಿ ಸಿದನು. ಮುಂದೆ ಅರ್ಧತಾಸಿನವರೆಗೆ ಭಾವುಸಾಹೇಬನು ನೆಲೆಯಿಲ್ಲದ ಪೌರುಷದಿಂದ
ಪುಟ:ಕುರುಕ್ಷೇತ್ರ ಗ್ರಂಥ.djvu/೧೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.