ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಕುರುಕ್ಷೇತ್ರ ! ನಾನಂತರ ದರ್ಬಾರದ ಕೆಲಸವಾಗಿ, ಸಂಕ್ರಮಣದ ಸಮಾರಂಭವು ಸಾಂಗವಾಯಿತ್ತು, ರಾತ್ರಿ ನಾನಾಸಾಹೇಬನೂ, ಗೋಪಿಕಾಬಾಯಿಯ ಸಾಂಪ್ರದಾಯದಂತೆ ಪರಸ್ಪರ ಎಳ್ಳು ಬೆಲ್ಲ ಕೊಟ್ಟು ಶಯನಮಾಡಿದರು. ಅಂದಿನರಾತ್ರಿ ಇಬ್ಬರಿಗೂ ದುಷ್ಟ ಸ್ವಪ್ನ ಗಳು ಬಿದ್ದವು. ನಾನಾಸಾಹೇಬನ ಸ್ವಪ್ನದಲ್ಲಿ, ಭಾವುರಾವ-ವಿಶ್ವಾಸರಾಯರನ ಯವ ನರು ಹೆಡೆಮುರಿಗೆ ಕಟ್ಟಿ ಹಿಡಿದೊಯ್ತು, ಅವರ ಚಂಡುಗಳನ್ನು ಹಾರಿಸಲು, ಅವು ನಾನಾಸಾಹೇಬನಮೇಲೆ ಬಿದ್ದಂತಾಯಿತು. ಕೂಡಲೆ ನಾನಾಸಾಹೇಬನು ಬೆದರಿ ಎಚ್ಚ ಇನು, ಅತ್ತ ಗೋಪಿಕಾಬಾಯಿಯ ಸ್ವಪ್ನದಲ್ಲಿ ಒಬ್ಬ ವಿಧವೆಯು ಆಕೆಯ ಕೈಯೊಳ ಗಿನ ಬಳೆಗಳನ್ನು ಒಡೆದು, ಹುಡಿಯಿಂದ ಆಕೆಯ ಉಡಿತುಂಬಿದಹಾಗಾಯಿತು! ಈ ಸ್ವಪ್ನಗಳು ಅನಿಷ್ಟಸೂಚಕಗಳಾದ್ದರಿಂದ ಎಲ್ಲರೂ ಅಸಮಾಧಾನಪಟ್ಟು, ಪಾನಿಪತಗ ಯುದ್ದದ ವಿಷ ಯವಾಗಿ ಚಿಂತಿಸುತ್ತಲಿದ್ದರು. ದುಸ್ವಪ್ನದೋಷ ನಿವಾರಣಾರ್ಥವಾಗಿ ಹೋಮ-ಹವನ, ಅನುಷ್ಠಾನ ಮುಂತಾದವುಗಳನ್ನು ಮಾಡಬೇಕೆಂದು ಬ್ರಾಹ್ಮಣರು ಶ್ರೀಮಂತರಿಗೆ ಸೂಚಿಸಿ ಅವರನ್ನು ಸಮಾಧಾನಪಡಿಸಿದರು, ಹೀಗೆ ಎಲ್ಲರೂ ಆಲೋಚಿಸುತ್ತಿರುವಾಗ ಮಾರ್ಗಾಂತಾಸದಿಂದ ಬಹಳವಾಗಿ ದಣಿದುಹೋಗಿದ್ದ ಒಬ್ಬ ಟೆಂಟೆಯ ಸವಾರನು ಬಂದು ನಾನಾಸಾಹೇಬರ ಕೈಯಲ್ಲಿ ಒಂದು ಲಕೊಟೆಯನ್ನು ಕೊಟ್ಟನು, ಅದರಲ್ಲಿ ಎರಡುಮುತ್ತುಗಳು ಉದುರಿದವು; ಇಪ್ಪ ತೇಳು ಮೊಹರುಗಳು ಕಳೆದವು; ರೊಕ್ಕ-ರೂಪಾಯಿಗಳು ಎಷ್ಟು ಹೋದವೆಂಬದರ ಲೆಕ್ಕವಿಲ್ಲ' ಎಂಬದಿಷ್ಟ ಸಂಗತಿಯು ಬರೆದಿತ್ತು. ರಣವಾರ್ತೆಯನ್ನು ಕುರಿತು ನಾನಾ ಸಾಹೇಬನು ಸವಾರನನ್ನು ವಿಚಾರಿಸಲು, ಅವನು ಸಾದ್ಯಂತವಾಗಿ ಎಲ್ಲವನ್ನು ಹೇಳಿ ದನು. ಆಗ ನಾನಾಸಾಹೇಬನ ಸ್ಥಿತಿಯು ಏನಾಗಿರಬಹುದೆಂಬದನ್ನು ವಾಚಕರೇ ತರ್ಕಿ ಸತಕ್ಕದ್ದು. ಅಂದು ಸಂಕ್ರಮಣದ ಕರಿದಿನವಿದ್ದು, ಹಬ್ಬವು ಹಸಗೆಟ್ಟು ಹೋಯಿತು. ಯಾವತ್ತು ಜನರು ಶೋಕಸಾಗರದಲ್ಲಿ ಮುಳುಗಿದರು. ಅಂದು ನಾನಾಸಾಹೇಬನು ಬಾಯಲ್ಲಿ ನೀರುಹಾಕಲಿಲ್ಲ. ಆತನು ಅನಿವಾರವಾದ ಶೋಕಸಾಗರದಲ್ಲಿ ಮುಳುಗಿದನು, ರಾಜ್ಯ ತ್ಯಾಗಮಾಡಿ ಎಲ್ಲಿಯಾದರೂ ಅರಣ್ಯಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಬೇ ಕಂದ ಆತನು ಯೋಚಿಸಹತ್ತಿದನು. ಯಾವತ್ತು ರಮಣೀಯ ಪ್ರದೇಶಗಳು ಆತನಿಗೆ ಸ್ಮಶಾನದಂತ ತೋರಹತ್ತಿದವು. ಆತನಿಗೆ ಸಾಮಾಜ್ಯೋಪಭೋಗದಲ್ಲಿ ಬೇಸರವುಂಟಾ ಯಿತು. ತಾನು ಶ್ರೀಮಂತರ ಕುಲದಲ್ಲಿ ಹುಟ್ಟುವದಕಿಂತ ಒಬ್ಬ ಜನ್ಮದರಿದ್ರನ ಹೊಟ್ಟೆ ಯಲ್ಲಿ ಹುಟ್ಟಿದ್ದರೆ ನೆಟ್ಟಗಾಗುತ್ತಿತ್ತೆಂದು ಆತನು ಭವಿಸಹತ್ತಿದನು. “ದೇವರೇ, ಎಂಥ ಅನರ್ಥವಿದು! ನನ್ನ, ದುರ್ದಶೆಯನ್ನು ಏನು ವರ್ಣಿಸಬೇಕು? ಹಾಯತ್ ಹಾಯ್! ನಾನು ಇನ್ನು ಏನು ಮಾಡಲಿ? ಯಾರಕಡೆಗೆ ಹೋಗಲಿ! ಯಾರಸಂಗಡ ಮಾತಾಡಲಿ! ಯಾರಮೇಲೆ ನಂಬಿಗೆಯಿಡಲಿ! ಯಾರನ್ನು ಕರೆಯಲಿ! ಆಪ್ತಾಲೋಚನೆಯನ್ನು ಯಾರ ಸಂಗಡ ಮಾಡಲಿ! ಇನ್ನು ನಾನು ಬದುಕಿಯಾದರೂ ಮಾಡುವದೇನು! ನಿರ್ದಯದೈವವೇ, ಇಂಥ ಅಮೂಲ್ಯ ರತ್ನಗಳನ್ನು ಹ್ಯಾಗೆ ಅಪಹರಿಸಿದೆ! ಅವು ಮತ್ತೆ ನನ್ನ ಕಣ್ಣಿಗೆ ಹ್ಯಾಗೆ