ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೋಕಸಾಗರ!

  • * *

ಬಿದ್ದಾವು! ಬಂಧುವಿಯೋಗ, ಪುತ್ರವಿಯೋಗ, ಅಸಂಖ್ಯ ಸೈನ್ಯವಿಯೋಗ, ಹಲವು ಸರ ದಾರರ ವಿಯೋಗ ಹೀಗೆ ಅನೇಕ ವಿಯೋಗಗಳ ಸಂಯೋಗವು ಒಟ್ಟಿಗೆ ಹ್ಯಾಗಾಗಿ, ದೀತು! ಒಂದೊಂದು ವಿಯೋಗದುಃಖಭರವೇ ನನಗೆ ದುಸ್ಸಹವಾಗಿರುವಾಗ, ಹಲವು ವಿಯೋಗಗಳ ಪ್ರಚಂಡಭಾರವು ನನ ತಲೆಯಮೇಲೆ ಬಿದ್ದಬಿಳಿಕ ನಾನು ಗಾಸಿಯಾಗದೆ ಹ್ಯಾಗೆ ಉಳಿಯುವೆನು! ಬಂಧುಶೋಕ, ಪುತ್ರಶೋಕ, ಪರಾಭವಶೋಕದಿಂದ ನನ್ನ ಮನಸ್ಸಿ ಗುಂಟಾಗಿದ್ದ ಗಾಯವನ್ನು ಮಾಯಿಸುವ ಮಲಾಮು ಎಲ್ಲಿಯಾದರೂ ಸಿಗಬಹುದೆ?” ಹೀಗೆ ನಾನಾಸಾಹೇಬನು ಶೋಕಸಾಗರದಲ್ಲಿ ಮುಣುಗಿ ಜರ್ಜರನಾದನು. ಆತನು ಹಾಯಭಾವುರಾಯಾ! ಹಾಯವಿಶ್ವಾಸರಾಯಾ! ಹಾಹಾ ದೈವವೇ? ಎಂದು ಒಂದೇ ಸವನೆ ಒರಲಹತ್ತಿದನು! - ಹೀಗೆ ನಾನಾಸಾಹೇಬನು ದುಃಖಿಸುತ್ತಿರುವಾಗ, ಒಳಗೆ ಗೋಪಿಕಾಬಾಯಿಯು ಬೇರೆ ಸರದಾರರ ಹಂಡಿರೊಡನೆ ಬಚ್ಚಲಮನೆಯಲ್ಲಿದ್ದಳು. ಕೆಲವು ಸ್ತ್ರೀಯರು ಎರಕೊಳ್ಳುತ್ತಿದ್ದರು, ಕೆಲವರು ತಲೆಓರಿಸಿಕೊಳ್ಳುತ್ತಿದ್ದರು, ಕೆಲವರು ಕೂದುಲಗಳಿಗೂ, ಮೈಗೂ ಕೇಶರ ಕಸ್ತೂರಿಗಳ ಕಲಕವನ್ನು ಲೇಪಿಸುತ್ತಿದ್ದರು , ಗೋಪಿಕಾಬಾಯಿಯು ಎರಿಕೊಂಡು ಬಚ್ಚಲಮನೆಯಿಂದ ಹೊರಗೆ ಬಂದು ಬೆಳ್ಳಿಯಚೌರಂಗದಮೇಲೆ ನಿಂತು ಕೊಂಡು ಅಚ್ಚಕರಗಿನ ತಪಗುಟ್ಟುವ ತನ್ನ ಉದ್ದಕೂದಲುಗಳನ್ನು ವಸ್ತ್ರದಮುರಿಗೆಸುತ್ತಿ ಹಿಂಡಿ ಒರಿಸಿಕೊಳ್ಳುತ್ತಿದ್ದಳು. ಮಂಜುಳಾ ಎಂಬ ದಾಸಿಯು ಆಕೆಯ ಕೊರಳೊಳಗಿನ ರತ್ನಖಚಿತವಾದ ಮಂಗಲಸೂತ್ರವನ್ನು ಒತ್ತಟ್ಟಿಗೆಮಾಡಿ ಆಕೆಯ ಮೈಯನ್ನು ಒರಿಸುತ್ತ ಲಿದ್ದಳು, ಅಷ್ಟರಲ್ಲಿ ನಾನಾಸಾಹೇಬನ ಮುಖದಿಂದಹೊರಟ-ಹಾ ಭಾವುರಾ ಯಾ! ಹಾ ವಿಶ್ವಾಸರಾಯಾ! " ಎ೦ಬ ಶಬ್ದಗಳು ಆಕೆಯ ಕಿವಿಗೆ ಬಿದ್ದವು. ಕೂಡಲೆ ಆಕೆಯು ನೆಲಕ್ಕೆ ಬಿದ್ದು ಪ್ರಜ್ಞಾಹೀನಳಾದಳು! ಕೆಲವುಹೊತ್ತಿನಮೇಲೆ ಎಚ್ಚರ ವಾಗಲು , ಪುತ್ರಶೋಕದಿಂದ ವಿಹ್ವಲಳಾಗಿ ಆಕೆಯು ದೊಡ್ಡ ದನಿತೆಗೆದು ಅಳತೊಡಗಿ ದಳು.-ಬಾಳಾ, ನನ್ನ ಚಿನ್ನವೇ, ವಿಶ್ವಾಸಾ! ಎತ್ತಹೋದೆಯಪ್ಪಾ! ಇನ್ನು ನನ್ನ ಸಂಗಡ ಮಾತಾಡುವದಿಲ್ಲವೆ? ನಿನ್ನನ್ನು ದೂರಯುದ್ಧಕ್ಕೆ ಕಳಿಸಿದೆನೆಂದು ನನ್ನ ಮೇಲೆ ಸಿಟ್ಟಾದೆಯಾ ? ಇನ್ನು ನಿನ್ನ ಮೋರೆಯನ್ನು ನಾನು ಹಾಗೆ ನೋಡೇನು? ಭಾವುರಾ ಯರೇ, ನೀವೂ ನಮ್ಮನ್ನು ಅಗಲಿಹೊದಿರಾ! ನಿಮ್ಮನ್ನು ಅಗಲಿ ಇನ್ನು ಅವರು ಹ್ಯಾಗೆ ಸುಖಿಸುವರು? ನಿಮ್ಮಿಬ್ಬರ ಪರಸ್ಪರ ಪ್ರೇಮವನ್ನು ವಿಶ್ವಾಸವನ್ನು ನಿರ್ದಯ ವವೇ, ನಿನಗೆ ಸ್ವಲ್ಪವಾದರೂ ದಯಬರಲಿಲ್ಲವೆ? • ಎಂದು ಕಾಡಿ-ಹಾಡಿಕೊಂಡು ಳ ಹತ್ತಿ ಆಗಾಗ್ಗೆ ಮೂರ್ಛಹಗಹತ್ತಿದಳು. ಉಳಿದ ಸ್ತ್ರೀಯರು ಆಕೆಯನ್ನು ಸಮಾಧಾನ ತಡಿಸುತ್ತ ಆಕೆಯನ್ನು ಮೆಲ್ಲಗೆ ಕರೆದೊಯ್ದು ಮಂಚದಮೇಲೆ ಮಲಗಿಸಿದರು. ಅಂದಿನ ದಿನ ನೋಡಿದಲ್ಲ ಅಮಂಗಲವೇ ಸುರಿಯುತ್ತಿತ್ತು. ಕುರುಕ್ಷೇತ್ರದ ಘೋರಸಂಗ್ರಾಮ ದಲ್ಲಿ ಲಕ್ಷಾವಧಿಜನರ ಸಂಹಾರವಾಗಿರಲು, ಅವರ ಸಂಬಂಧಿಕರು ನಾನಾಸಾಹೇಬನ ಪರಿ ವಾರದಲ್ಲಿದ್ದದ್ದರಿಂದ ಇಡಿಯ ಛಾವಣಿಯೇ ಶೋಕಗ್ರಸ್ತವಾಗಿ ಕಣ್ಣೀರು ಸುರಿಸಹತ್ತಿತು.