೧೨ ೬ ಸುಖಸೂಚಕ! ಹಿತಕ್ಕಾಗಿಯೇ ಇರುತ್ತವೆ. ಇದೇಮಾತು ವಿಶ್ವ ಕುಟುಂಬಿಗೂ ಹತ್ತುವದು. ಸರ್ವ ಜ್ಞನೂ-ಸರ್ವಾಂತರ್ಯಾಮಿಯೂ ಆದ ಆ ವಿಶ್ವಚಾಲಕನು, ಒಮ್ಮೆ ಒಬ್ಬರನ್ನು ಹಿಂದಕ್ಕೆ ಸರಿಸಿದಂತೆ ಮಾಡುವನು, ಒಮ್ಮೆ ಒಬ್ಬರನ್ನು ಮುಂದಕ್ಕೆ ಕರೆದಂತೆ ಮಾಡುವನು. ಆತನು ಹ್ಯಾಗಮಾಡಿದರೂ ನಾವು ಆತನಲ್ಲಿ ದೃಢವಿಶ್ವಾಸವಿಟ್ಟು, ಆತನು, ಮಾಡುವದನ್ನೆಲ್ಲ ನಮ್ಮ ಹಿತಕ್ಕಾಗಿಯೇ ಮಾಡುವೆನೆಂದು ತಿಳಿದು, ಆತನ ವಿಷಯವಾಗಿ ಅಶ್ರದ್ದೆಯನ್ನು ತಾಳದೆ, ನಿರುತ್ಸಾಹಿಗಳಾಗದೆ ವಿವೇಕತಾಳಿ ಕರ್ತವ್ಯ ಜಾಗರೂಕರಾಗಿರತಕ್ಕದ್ದು; ಯಾಕಂದರೆ, ಈಶ್ವರತಂತ್ರರೂಪವಾದ ರಾಜ್ಯಾದಿ ಲೌಕಿಕ ಸಣ್ಣದೊಡ್ಡ ನಾಶವಂತ ವ್ಯವಹಾರಗ ಛಲ್ಲ, ನಮ್ಮ ಆತೋನ್ನತಿಯ ಸಾಧನಗಳಾಗಿರುವವಲ್ಲದೆ, ನಾವು ಈಶ್ವರಕೃಪೆಯಿಂದ ಸಾಧಿಸಿತಕ್ಕೆ ಶಾಶ್ವತವಾದ ಆಧಾರರೂಪ ಸಾಧ್ಯವಲ್ಲೆಂಬದನ್ನು ಚನ್ನಾಗಿ ನೆನಪಿ ನಲ್ಲಿಡಬೇಕು. ನಾವು ಆ ಸಾಧನಗಳ ದುರುಪಯೋಗಮಾಡಿದರೆ, ಈಶ್ವರನ ಅವಕೃಪೆ ಯಿಂದ ನಮ್ಮ ಅಧಃಪತನವು ತಪ್ಪದೆ ಆಗುವದು, ಈ ಜಗತ್ತಿನಲ್ಲಿ ಯಾವ ರಾಜ್ಯವು ಸ್ಥಿರವಾಗಿದೆ? ರಾಮರಾಜ್ಯವು ಈಗ ಉಳಿದಿರು ವದಿಲ್ಲ; ಕೃಷ್ಣನರಾಜ್ಯವು ಕಣ್ಣಿಗೆ ಕಾಣುವದಿಲ್ಲ, ಕೌರವರ ರಾಜ್ಯವ್ವ ಅಡಗಿರು ವ-ಪಾಂಡವರ ರಾಜ್ಯವೆ ಹೋಗಿರುವದೊ? ಗ್ರೀಕ-ರೋಮರಾಜ್ಯಗಳು ಈಗಿನ ಗತಿಯನ್ನು ಹೊಂದಿಯವೆಂದು ಅಗ ಯಾರಾದರೂ ತಿಳಿದಿರಬಹುದೆ? ಅಶೋಕಚಕ್ರವ ರ್ಶಿಯ ವೈಭವವು ಈಗೆಲ್ಲಿ ಉಳಿದದೆ? ಮುಸಲ್ಮಾನರ ಮೊದಲಿನ ಅಬ್ಬರವು ಈಗ ಯಾಕ ಕಾಣುವದಿಲ್ಲ! ಕನ್ನಡಿಗರ ಅಭಿಮಾನದ ವಿಜಯನಗರದ ರಾಜ್ಯವು ಈಗ ಸಡಗರದಿಂದ ಮೆರೆಯುತ್ತಿರುವದೋ ? ಆ ರಾಜ್ಯವನ್ನು ಮಣ್ಣುಗೂಡಿಸಿದ ಮುಸಲ್ಮಾನ ಬಾದಶಾಹಿ ಗಳಾದರೂ ಈಗ ಉಳಿದಿರುವವೇ? ಶಿವಛತ್ರಪತಿಯ ಧರ್ಮೋದ್ದಾರದ ರಾಜ್ಯದ ಗತಿಯು ಏನಾಯಿತು? ಜರ್ಮನಿಯ 'ಸರಬಾದಶಹನು ಪ್ರಥ್ವಿಯ ಜಯಿಸುವದನ್ನು ಬಿಟ್ಟು ಎತ್ತಹೋದನು? ಪ್ರಿಯವಾಚಕರೇ, ಹೀಗೆ ಒಂದೇ ಎರಡೇ ? ಅಸಂಖ್ಯಾತರಾಜ್ಯಗಳು. ಕಾಲನ ದವಡೆಯಲ್ಲಿ ನುರಿತು ನುಗ್ಯಾಗಿಹೋಗಿರುವವು! ಹೀಗೆ ಅವು ನುಗ್ಯಾಗುವಾಗ ಯಾವಯಾವ ದೇಶದವರು, ಯಾವಯಾವ ಜಾತಿಯವರು, ಯಾವಯಾವ ಪಂಥದವರು ಯಾವಯಾವ ಪಂಗಡದವರು, ಯಾವಯಾವ ವ್ಯಕ್ತಿಗಳು ಎಷ್ಟು ಎಷ್ಟು ಕಣ್ಣೀರು ಸುರಿಸಿರಬಹುದೆಂಬುದನ್ನು ಮನಸ್ಸಿನಲ್ಲಿ ತಂದರೆ, ಪೇಶೆಯವರ ಕುರುಕ್ಷೇತ್ರದ ಅಪಜ ಯಕ್ಕಾಗಿ ನಾವು ಯಾಕೆ ಮಿಡುಕಬೇಕನ್ನುವಹಾಗೆ ಆಗುವದಿಲ್ಲವೆ? ಹೌದು, ಯಾರಿಗಿ ಲ್ಲದ ವಿಪತ್ತು ನಮಗೇ ಬಂದಿದ್ದರೆ ಮಿಡುಕುವದು ಯೋಗ್ಯವು; ಆದರೆ ಎಲ್ಲರೂ ವಿಪತ್ತಿನ ಸೂತ್ರದಲ್ಲಿ ಪೂಣಿಸಿರುವಾಗ, ನಾವು ಮರಕಡಿದು ಮೈಮೇಲೆ ಹಾಕಿಕೊಂಡುಮಾಡಿ, ಮಿಡುಕುವದು ಮೂರ್ಖತನವೇಸರಿ! ಇನ್ನು, ಅಳುಬುರಕರ ದೃಷ್ಟಿಯಿಂದಲೂ ಕುರುಕ್ಷೇತ್ರದ ಅಪಜಯಕ್ಕಾಗಿ ನಾವು ಮಿಡುಕುವ ಕಾರಣವಿಲ್ಲೆಂದು ಸ್ಪಷ್ಟವಾಗಿ ಹೇಳುವವು; ಯಾಕಂದರೆ, ಅದಕ್ಕೆ ಅಂಥ ಸೃಷ್ಟ ಕಾರಣಗಳೂ ಉಂಟು. ಆ ಕಾರಣಗಳಲ್ಲಿ ಮುಖ್ಯ ಕಾರಣವೆಂದರೆ, ಈಶ್ವರೀ
ಪುಟ:ಕುರುಕ್ಷೇತ್ರ ಗ್ರಂಥ.djvu/೧೩೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.